Advertisement

Martin Movie: ಮಾರ್ಟಿನ್‌ ಇಂಟ್ರೊಡಕ್ಷನ್‌ ಸಾಂಗ್‌ ಬಜೆಟ್‌ 6 ಕೋಟಿ!

09:19 AM Oct 01, 2024 | Team Udayavani |

ಒಂದು ಸಿನಿಮಾಗೆ ಕಥೆ, ಚಿತ್ರಕಥೆ, ಹಾಡು, ಫೈಟ್‌ ಎಷ್ಟು ಮುಖ್ಯವೋ ಅಷ್ಟೇ ಅದರ ನೃತ್ಯಗಳು ಕೂಡ. ಎಷ್ಟೋ ಸಿನಿಮಾಗಳು ತಮ್ಮ ಡ್ಯಾನ್ಸ್‌ ಮೂಲಕವೇ ಗುರುತಿಸಿಕೊಂಡಿವೆ. ಈಗ ಬಿಡುಗಡೆಯ ಹೊಸ್ತಿಲಲ್ಲಿರುವ ಕನ್ನಡದ “ಮಾರ್ಟಿನ್‌’ ಪ್ಯಾನ್‌ ವರ್ಲ್ಡ್ ಸಿನಿಮಾದಲ್ಲೂ ನತ್ಯದ ಅಬ್ಬರವನ್ನು ಪ್ರೇಕ್ಷಕರು ಎದುರು ನೋಡಲಿದ್ದಾರೆ. ಇದರ ಹಿಂದಿನ ಮಾಂತ್ರಿಕರಲ್ಲಿ ಡ್ಯಾನ್ಸ್‌ ಮಾಸ್ಟರ್‌ ಮುರಳಿ ಕೂಡಾ ಒಬ್ಬರು. “ಮಾರ್ಟಿನ್‌’ ಚಿತ್ರದ ಇಂಟ್ರೊಡಕ್ಷನ್‌ ಹಾಡನ್ನು ಸಂಯೋಜಿಸಿದ್ದಾರೆ. ಇದರ ಕುರಿತು ಮುರಳಿ ಮಾತನಾಡಿದ್ದಾರೆ.

Advertisement

“ನನ್ನ ಸಿನಿಮಾ ಜೀನವದಲ್ಲಿ ಶ್ರೇಷ್ಠ ಚಿತ್ರ ಇದಾಗಲಿದೆ ಎನ್ನುವ ನಿರೀಕ್ಷೆಯಲ್ಲಿದ್ದೇನೆ’

ಹೀಗೆ ನಗುತ್ತಲೇ ಮಾತು ಆರಂಭಿಸಿದರು ಮುರಳಿ ಮಾಸ್ಟರ್‌. ಈವರೆಗೆ 650ಕ್ಕೂ ಹೆಚ್ಚಿನ ಸಿನಿಮಾಗಳಿಗೆ ನೃತ್ಯ ಸಂಯೋಜಸಿರುವ ಮುರಳಿ ಅವರಿಗೆ “ಮಾರ್ಟಿನ್‌’ ಚಿತ್ರ ಬಹಳ ವಿಶೇಷವಾಗಿದೆಯಂತೆ. ಈ ಬಗ್ಗೆ ಮಾತನಾಡುವ ಅವರು, “ಇದರಲ್ಲಿ ಹೀರೋ ಇಂಟ್ರೊಡಕ್ಷನ್‌ ಹಾಡಿಗೆ ನೃತ್ಯ ಸಂಯೋಜಸಿದ್ದೇನೆ. ನಿರ್ದೇಶಕ ಎ.ಪಿ. ಅರ್ಜುನ್‌ ಹಾಗೂ ಧ್ರುವ ಸರ್ಜಾ ಅವರು ಚಿತ್ರದ ಕಥೆ ಹೇಳಿದಾಗಲೇ ಬಹಳ ಇಷ್ಟವಾಯಿತು. ಎಷ್ಟೋ ಬಾರಿ ನೃತ್ಯ ಸಂಯೋಜಿಸುವಾಗ ನಮಗೆ ಇಡೀ ಸಿನಿಮಾದ ಕಥೆ ಗೊತ್ತಿರಲ್ಲ. ಆದರೆ, ಇಲ್ಲಿ ಎಲ್ಲವನ್ನು ಮೊದಲೇ ತಿಳಿಸಿ, ಇದರ ಮೇಲೆ ನೀವೇನು ಮಾಡಬಹುದು ಅಂತ ಕೇಳಿದ್ರು. ಆಗ ಮನವರಿಕೆಯಾಗಿ, ಕಥೆ, ಸನ್ನಿವೇಶದ ಆಧಾರದ ಮೇಲೆ ನೃತ್ಯದ ಯೋಜನೆ ಮಾಡಿಕೊಂಡೆ’ ಎಂದರು ಮುರಳಿ.

ಒಂದು ಹಾಡಿನ ಬಜೆಟ್‌ 6 ಕೋಟಿ!

ಇದು ದೊಡ್ಡ ಬಜೆಟ್‌ನ ಸಿನಿಮಾ ಹಾಗಾಗಿ ದೊಡ್ಡ ಮಟ್ಟದಲ್ಲೇ ಹಾಡಿಗೆ ನೃತ್ಯ ಸಂಯೋಜಿಸಲಾಗಿದೆ. ಭಾರತದ ಜೊತೆಗೆ ವಿದೇಶಕ್ಕೂ ಹೋಗಿ ಚಿತ್ರತಂಡ ಶೂಟಿಂಗ್‌ ಮಾಡಿಕೊಂಡು ಬಂದಿದೆ. ಬರೋಬ್ಬರಿ ಆರು ಕೋಟಿ ರೂಪಾಯಿಯಲ್ಲಿ ಇಂಟ್ರೋಡಕ್ಷನ್‌ ಹಾಡನ್ನು ಚಿತ್ರೀಕರಿಸಲಾಗಿದೆ.

Advertisement

“ಈ ಹಾಡಿಗೆ ತಯಾರಿ ಬಹಳಷ್ಟಿತ್ತು. ಸಾಕಷ್ಟು ಹೋಂ ವರ್ಕ್‌ ಮಾಡಿಯೇ ಕೆಲಸ ಶುರು ಮಾಡಿದ್ವಿ. ಬೆಂಗಳೂರಿನಲ್ಲಿ ಹಾಡಿಗೋಸ್ಕರ ಸೆಟ್‌ ಹಾಕಿದೆವು. ಗೋವಾದ ಕ್ಯಾಸಿನೊ, ಹಾರ್ಬರ್‌ಗಳಲ್ಲಿ 10 ದಿನ ಶೂಟ್‌ ಆಗಿದೆ. ನಂತರ 7 ದಿನ ಬ್ಯಾಂಕಾಕ್‌, ಫ‌ುಕೆಟ್‌ಗೆ ಹೋಗಿ ಅಲ್ಲಿನ ದೊಡ್ಡ ದೊಡ್ಡ ಪಬ್‌ನಲ್ಲಿ ಚಿತ್ರೀಕರಣ ಮಾಡಿದ್ವಿ. ಎಲ್ಲ ದೃಶ್ಯಗಳು ಚೆನ್ನಾಗಿ ಬಂದಿವೆ. ಹಾಡಿನ ಓಪಿನಿಂಗ್‌, ಹೀರೋ ಎಂಟ್ರಿ ಎಲ್ಲವನ್ನು ಮೊದಲೇ ಪ್ಲಾನ್‌ ಮಾಡಿದ್ದರಿಂದ ಅನುಕೂಲ ಆಯ್ತು. ಈ ಹಾಡಿನಲ್ಲಿ ಒಂದು ಸಿಗ್ನೇಚರ್‌ ಸ್ಟೆಪ್‌ ಕೂಡ ಇದೆ. ಮಾರ್ಟಿನ್‌ ಟೈಟಲ್‌ ಟ್ರ್ಯಾಕ್‌ ಬರುವಾಗ ಆ ಹುಕ್‌ ಸ್ಟೆಪ್‌ ಇಟ್ಟಿದ್ದೀವಿ. ಅದನ್ನು ಸಿನಿಮಾದಲ್ಲಿ ನೋಡಿದಾಗ ಗೊತ್ತಾಗುತ್ತೆ. ಈ ಡ್ಯಾನ್ಸ್‌ ಒಂಥರಾ ಟ್ರೇಲರ್‌ ಇದ್ದಂಗೆ. ಇಲ್ಲಿ ಸ್ಪೀಡ್‌ ಕಟ್ಸ್‌, ಶಾಟ್ಸ್‌, ಲೊಕೇಶನ್‌, ಕಾಸ್ಟ್ಯೂಮ್‌ ಎಲ್ಲವೂ ಬಹಳಷ್ಟಿದೆ.  ಬೆಂಗಳೂರು, ಮುಂಬೈ, ರಷ್ಯಾದ ಸುಮಾರು 600 ಕಲಾವಿದರು ಡ್ಯಾನ್ಸ್‌ ಮಾಡಿದ್ದಾರೆ. ಒಂದು ಶಾಟ್‌ನಲ್ಲಿ 500 ಕಾರು ಬಳಸಿದ್ದು ಮತ್ತೂಂದು ವಿಶೇಷ. ಸುಮಾರು 6 ಕೋಟಿ ರೂ. ಇದರ ಚಿತ್ರೀಕರಣಕ್ಕೆ ಖರ್ಚಾಗಿದೆ. ನಿರ್ಮಾಪಕ ಉದಯ್‌ ಮೆಹ್ತಾ ಅವರ ಸಹಕಾರವಿಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ಎನ್ನುತ್ತಾರೆ ಮುರಳಿ.

ಸೂಪರ್‌ ಧ್ರುವ:

ಯಾವುದೇ ನೃತ್ಯ ಸಂಯೋಜಕರಿಗಾಗಲಿ ಕಲಾವಿದರು ಚೆನ್ನಾಗಿ ಸಹಕರಿಸಿದರೆ, ಅವರು ಅಂದುಕೊಂಡಂತೆ ಮಾಡಬಹುದು. ಈ ವಿಷಯದಲ್ಲಿ ನಟ ಧ್ರುವ ಅವರದ್ದು ಸಂಪೂರ್ಣ ಸಹಕಾರವಿತ್ತಂತೆ. ಈ ಬಗ್ಗೆ ಹೇಳುವ ಅವರು, “ಧ್ರುವ ಸರ್ಜಾ ಅವರೊಂದಿಗೆ ಕೆಲಸ ಮಾಡಿದ್ದು ವಿಶೇಷ ಅನುಭವ. ಈ ಮೊದಲು “ಪೊಗರು’ ಸಿನಿಮಾದಲ್ಲಿ ಅವರ ಜೊತೆ ಕೆಲಸ ಮಾಡಿದ್ದೆ. ಅವರ ಬಗ್ಗೆ ಎರಡು ಮಾತಿಲ್ಲ. ಅವರಂಥ ಕಲಾವಿದರು ಸಿಕ್ಕರೆ ಅಂದುಕೊಂಡಿದ್ದೆಲ್ಲ ಆಗುತ್ತೆ. ಅಷ್ಟು ದೊಡ್ಡ ಸ್ಟಾರ್‌ ಇದ್ದರೂ ಯಾವುದೇ ಅಹಂ ಇಲ್ಲ. ಜಾಲಿಯಾಗಿ ಇರ್ತಾರೆ. ಎಲ್ಲ ಫ್ರೆàಮ್‌ ಸರಿಯಾಗಿ ಕಾಣಬೇಕು ಅನ್ನೋ ಸೂಕ್ಷ್ಮತೆ, ಜವಾಬ್ದಾರಿ ಅವರಿಗಿದೆ. ಅವರನ್ನು ನೋಡಿ ನಮಗೆ ಇನ್ನು ಜಾಸ್ತಿ ಕೆಲಸ ಮಾಡಬೇಕು ಅಂತ ಅನ್ಸುತ್ತೆ’ ಎನ್ನುವುದು ಮುರಳಿ ಮಾತು.

Advertisement

Udayavani is now on Telegram. Click here to join our channel and stay updated with the latest news.

Next