Advertisement

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

02:46 AM Dec 26, 2024 | Team Udayavani |

ಮೈಸೂರು: ನಗರದ ಕಾಮಾಕ್ಷಿ ಆಸ್ಪತ್ರೆಯಲ್ಲಿ ಮಂಗಳವಾರ ನಟ ದರ್ಶನ್‌ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದು ಅವರ ಬೆನ್ನು ಮೂಳೆ ಸ್ವಲ್ಪ ಜರುಗಿರುವ ಬಗ್ಗೆ ವರದಿಯಲ್ಲಿ ಕಂಡು ಬಂದಿದೆ.

Advertisement

ದರ್ಶನ್‌ ಅವರ ದೇಹದ ನರಗಳು ಒತ್ತು ಹಾಕಿಕೊಂಡಿವೆ. ಇದರಿಂದಾಗಿ ಕಾಲು ನೋವು ಹೆಚ್ಚಾಗಿ, ನಡೆಯುವುದಕ್ಕೆ ಕಷ್ಟವಾಗಿದೆ. ಸಮಸ್ಯೆ ಸ್ವಲ್ಪ ಉಲ್ಬಣವಾಗಿರುವುದರಿಂದ ತುರ್ತಾಗಿ ಶಸ್ತ್ರ ಚಿಕಿತ್ಸೆ ಮಾಡಲು ಆಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ. ಸದ್ಯದ ಸ್ಥಿತಿಯಲ್ಲಿ ನಿಯಮಿತ ಫಿಸಿಯೋಥೆರಪಿ ಮತ್ತು ಮಾತ್ರೆಗಳಿಂದ ಸಮಸ್ಯೆ ನಿವಾರಣೆಗೆ ಪ್ರಯತ್ನಿಸಲಾಗುತ್ತಿದೆ.

ಬೆನ್ನಿನ ಡಿಸ್ಕ್ನಲ್ಲಿ ನೋವು ಕಾಣಿಸಿಕೊಂಡಿದೆ. ಈ ಭಾಗದ ಮೂಳೆಗಳನ್ನು ಗಟ್ಟಿಗೊಳಿಸಲು ಅಗತ್ಯ ವ್ಯಾಯಾಮ ಮಾಡುವಂತೆ ವೈದ್ಯರು ಸಲಹೆ ನೀಡಿದ್ದಾರೆ. ವ್ಯಾಯಾಮ ಮತ್ತು ಔಷಧಗಳಿಂದ ನೋವು ನಿವಾರಣೆಯಾಗದಿದ್ದರೆ ಶಸ್ತ್ರಚಿಕಿತ್ಸೆ ನಡೆಸಬೇಕಾಗುತ್ತದೆ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ.

ದರ್ಶನ್‌ ತಪಾಸಣೆಗೆ ಪೂರಕವಾದ ಸ್ಕ್ಯಾನಿಂಗ್‌ ಮೆಷಿನ್‌ ಮೈಸೂರಿನಲ್ಲಿ ಇಲ್ಲದ ಕಾರಣ ಸ್ಕ್ಯಾನಿಂಗ್‌ ಮಾಡಿಲ್ಲ. ಈ ಹಿಂದೆ ಬೆಂಗಳೂರಿನಲ್ಲಿ ಮಾಡಿಸಿದ ಸ್ಕ್ಯಾನಿಂಗ್‌ ವರದಿ ಆಧಾರದ ಮೇಲೆ ತಪಾಸಣೆ ಮಾಡಿದ ವೈದ್ಯರು, ಫಿಸಿಯೋಥೆರಪಿ ಹಾಗೂ ಈಗ ಕೊಟ್ಟಿರುವ ಮಾತ್ರೆಗಳು ಮುಗಿದ ಮೇಲೆ ಬೆಂಗಳೂರಿನಲ್ಲಿ ಸ್ಕ್ಯಾನಿಂಗ್‌ ಮಾಡಿಸಲು ಆಲೋಚನೆ ಮಾಡಿದ್ದಾರೆ. ದರ್ಶನ್‌ ಮತ್ತೆ ಶನಿವಾರ ತಪಾಸಣೆಗೆ ಒಳಗಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next