Advertisement

Martin Movie: ಮಾರ್ಟಿನ್‌ಗೆ ಇಂಟರ್‌ನ್ಯಾಶನಲ್‌ ಪ್ರಸ್‌ಮೀಟ್‌

06:43 PM Jul 31, 2024 | Team Udayavani |

ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಅದು ಕಂಟೆಂಟ್‌ ಜೊತೆಗೆ ಸಿನಿಮಾದ ಪ್ರಮೋಶನ್‌ವರೆಗೂ.. ಈ ಹಿಂದೆ ಪ್ಯಾನ್‌ ಇಂಡಿಯಾ ಮೂಲಕ ದೇಶದಾದ್ಯಂತ ಮಾಧ್ಯಮಗಳನ್ನು ಕರೆಸಿ ಕೆಲವು ಕನ್ನಡ ಚಿತ್ರಗಳು ದೊಡ್ಡ ಮಟ್ಟದಲ್ಲಿ ಪತ್ರಿಕಾಗೋಷ್ಠಿ ಮಾಡಿದ್ದವು. ಆದರೆ, ಈಗ ಧ್ರುವ ಸರ್ಜಾ ನಟನೆಯ “ಮಾರ್ಟಿನ್‌’ ಚಿತ್ರ ಒಂದು ಹೆಜ್ಜೆ ಮುಂದೆ ಹೋಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪತ್ರಿಕಾಗೋಷ್ಠಿ ನಡೆಸಲು ಮುಂದಾಗಿದೆ.

Advertisement

ಹೌದು, ಚಿತ್ರದ ಟ್ರೇಲರ್‌-1 ಆಗಸ್ಟ್‌ 5ರಂದು ಬಿಡುಗಡೆಯಾಗುತ್ತಿದ್ದು, ಅಲ್ಲಿಂದಲೇ ಚಿತ್ರವನ್ನು ಇಂಟರ್‌ನ್ಯಾಶನಲ್‌ ಮಟ್ಟದಲ್ಲಿ ಪ್ರಚಾರ ಮಾಡಲು ಮುಂದಾಗಿರುವ ಚಿತ್ರತಂಡ ಮುಂಬೈನಲ್ಲಿ ನಡೆಯುವ ಟ್ರೇಲರ್‌ ರಿಲೀಸ್‌ ಇವೆಂಟ್‌ಗೆ ದೇಶದ ವಿವಿಧ ರಾಜ್ಯಗಳ ಪತ್ರಕರ್ತರ ಜೊತೆಗೆ 21 ದೇಶಗಳ ಪತ್ರಕರ್ತರರನ್ನು ಆಹ್ವಾನಿಸಿದೆಎ. ಈ ಮೂಲಕ “ಮಾರ್ಟಿನ್‌’ ಪ್ರಮೋಶನ್‌ ನಲ್ಲಿ ದೊಡ್ಡ ಹೆಜ್ಜೆ ಇಟ್ಟಿದೆ.

ಈ ಕುರಿತು ಮಾತನಾಡುವ ನಿರ್ಮಾಪಕ ಉದಯ್‌ ಮೆಹ್ತಾ, “ಸಿನಿಮಾವನ್ನು ಪ್ರಪಂಚದಾದ್ಯಂತ ತಲುಪಿಸ ಬೇಕೆಂಬ ಕಾರಣಕ್ಕೆ ಇಂಟರ್‌ನ್ಯಾಶನಲ್‌ ಮಟ್ಟದಲ್ಲಿ ಪ್ರಸ್‌ ಮೀಟ್‌ ಮಾಡುತ್ತಿದ್ದೇವೆ. ಭಾರತೀಯ ಚಿತ್ರರಂಗದಲ್ಲಿ ಇದು ಮೊದಲು. ಇದಕ್ಕಾಗಿ ಸುಮಾರು ಒಂದೂವರೆ ತಿಂಗಳಿಗಿಂತ ಕೆಲಸ ನಡೀತಾ ಇದೆ’ ಎನ್ನುತ್ತಾರೆ.ಚಿತ್ರದ ಬಿಝಿನೆಸ್‌ ಮಾತುಕತೆ ಕೂಡಾ ಆಗಸ್ಟ್‌ 5ರಿಂದ ಆರಂಭವಾಗಲಿದೆಯಂತೆ. ಈಗಾಗಲೇ ಬೇರೆ ಬೇರೆ ದೇಶಗಳಿಂದಲೂ ಚಿತ್ರಕ್ಕೆ ಬೇಡಿಕೆ ಇದೆ ಎಂಬುದು ತಂಡದ ಮಾತು.

ಆಗಸ್ಟ್‌ 4ಕ್ಕೆ ಟ್ರೇಲರ್‌ ಸ್ಪೆಶಲ್‌ ಶೋ “ಮಾರ್ಟಿನ್‌’ ಚಿತ್ರದ ಟ್ರೇಲರ್‌ ಆಗಸ್ಟ್‌ 5ಕ್ಕೆ ಮುಂಬೈನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಬಿಡುಗಡೆಯಾಗುತ್ತಿದೆ. ಆದರೆ ಅದಕ್ಕಿಂತ ಮುಂಚೆ ಆಗಸ್ಟ್‌ 4 ಕ್ಕೆ ವೀರೇಶ್‌ ಚಿತ್ರಮಂದಿರದಲ್ಲಿ ಮಧ್ಯಾಹ್ನ 1ಗಂಟೆಗೆ ಟ್ರೇಲರ್‌-1 ಪ್ರದರ್ಶನವಾಗಲಿದೆ. ಇದಕ್ಕಾಗಿ ಬುಕ್‌ ಮೈ ಶೋನಲ್ಲಿ ಟಿಕೆಟ್‌ ಪಡೆಯಬಹುದು. ಅಂದಹಾಗೆ, ಟ್ರೇಲರ್‌ ಅನ್ನು 13 ಭಾಷೆಗಳಲ್ಲಿ ನೋಡಬಹುದು ಎಂಬುದು ತಂಡದ ಮಾತು.

ರಿಲೀಸ್‌ ಆಗೋದು ಪಕ್ಕಾ:  ಗ್ರಾಫಿಕ್‌ ವಿಚಾರದಲ್ಲಿ “ಮಾರ್ಟಿನ್‌’ ಚಿತ್ರಕ್ಕೆ ಸಾಕಷ್ಟು ತಡವಾಗಿದೆ. ಆದರೆ, ಈ ಬಾರಿ ಯಾವುದೇ ತೊಂದರೆ ಇಲ್ಲದೇ ಅಕ್ಟೊಬರ್‌ 11ಕ್ಕೆ ತೆರೆಕಾಣಲಿದೆ. ಈ ಕುರಿತು ಮಾತನಾಡುವ ನಿರ್ಮಾಪಕ ಉದಯ್‌ ಮೆಹ್ತಾ, “ರಿಲೀಸ್‌ ಗೆ ಯಾವುದೇ ತೊಂದರೆ ಇಲ್ಲ. 16 ಕಂಪೆನಿಗಳು ಇದಕ್ಕಾಗಿ ಕೆಲಸ ಮಾಡುತ್ತಿವೆ’ ಎನ್ನುತ್ತಾರೆ ನಿರ್ಮಾಪಕ ಮೆಹಾ

Advertisement

ಆರೋಪ ಸಾಬೀತಾದರೆ 1 ಕೋಟಿ ನೀಡುವೆ: ಅರ್ಜುನ್‌:  ಸಿನಿಮಾದ ಗ್ರಾಫಿಕ್ಸ್‌ ಕುರಿತಾಗಿ ಕಮಿಶನ್‌ ಪಡೆದಿದ್ದಾರೆ ಎಂಬ ತಮ್ಮ ಮೇಲಿನ ಆರೋಪದ ಕುರಿತಾಗಿ ಮಾತನಾಡಿದ ನಿರ್ದೇಶಕ ಎ.ಪಿ. ಅರ್ಜುನ್‌, “ನಾನು ಯಾರಿಂದಾದರೂ 5 ಸಾವಿರ ರೂಪಾಯಿ ಕಮಿಶನ್‌ ಪಡೆದಿದ್ದೇನೆ ಎಂದು ಸಾಬೀತು ಮಾಡಿದರೆ ನಾನು ಅವರಿಗೆ 1 ಕೋಟಿ ರೂಪಾಯಿ ನೀಡುತ್ತೇನೆ. ನಾನು ಅಂತಹ ಸಂಸ್ಕೃತಿಯಿಂದ ಬಂದವನಲ್ಲ’ ಎಂದರು.

ಹೆಚ್ಚು ಜನರನ್ನು ತಲುಪಬೇಕು ಎಂಬ ಕಾರಣಕ್ಕೆ ಇಂಟರ್‌ನ್ಯಾಶನಲ್‌ ಪ್ರಸ್‌ ಮೀಟ್‌ ಮಾಡುತ್ತಿದ್ದೇವೆ. ಆದರೆ, ಮೊದಲು ನಮ್ಮ ಕನ್ನಡದವರು ನೋಡಬೇಕು ಎಂಬ ಕಾರಣಕ್ಕೆ ಆ.4ಕ್ಕೆ ವೀರೇಶ್‌ ಚಿತ್ರಮಂದಿರದಲ್ಲಿ ಪ್ರದರ್ಶನ ಆಗಲಿದೆ. -ಧ್ರುವ ಸರ್ಜಾ, ನಾಯಕ ನಟ

ನಮ್ಮ ನಡುವೆ ಯಾವುದೇ ಮನಸ್ತಾಪವಿಲ್ಲ. ಗ್ರಾಫಿಕ್ಸ್‌ ಕುರಿತಾಗಿ ಮೋಸ ಮಾಡಿದವನ ವಿರುದ್ಧ ದೂರು ದಾಖಲಿಸಿದ್ದೆ. ನಮ್ಮ ತಂಡದ ಯಾರೊಬ್ಬರ ಕುರಿತಾಗಿಯೂ ನಾನು ಮಾತನಾಡಿಲ್ಲ. -ಉದಯ್‌ ಮೆಹ್ತಾ, ನಿರ್ಮಾಪಕ

Advertisement

Udayavani is now on Telegram. Click here to join our channel and stay updated with the latest news.

Next