Advertisement

ಪ್ರೇಕ್ಷಕರನ್ನು ದಂಗುಬಡಿಸಿದ ಸಮರಕಲೆ

05:04 PM Mar 18, 2022 | Team Udayavani |

 ಮೈಸೂರು: ರಂಗಾಯಣ ಆವರಣದಲ್ಲಿ ಆಯೋ ಜನೆಗೊಂಡಿರುವ ಬಹುರೂಪಿ ರಾಷ್ಟ್ರೀಯ ರಂಗೋತ್ಸವದ 6ನೇ ದಿನವಾದ ಗುರುವಾರ ಜನಪದ ಕಾರ್ಯಕ್ರಮ, ರಂಗಪ್ರಸ್ತುತಿ, ವಿವಿಧ ನಾಟಕ ಪ್ರದರ್ಶನ, ಚಲನಚಿತ್ರ ಪ್ರದರ್ಶನ ಜನರನ್ನು ಆಕರ್ಷಿಸಿತು.

Advertisement

ಕತ್ತಿ ಹಿಡಿದು ಜಳಪಿಸುತ್ತ ಎದುರಿಗಿರುವವರನ್ನು ಮಣ್ಣು ಮುಕ್ಕಿಸುವ ಸಮರ ಕಲೆ ನೋಡುಗರನ್ನು ಒಂದುಕ್ಷಣ ಅವಕ್ಕಾಗಿಸಿದ ದೃಶ್ಯ ರಂಗಾಯಣದ ಕಿಂದರಿಜೋಗಿ ಜನಪದರಂಗ ವೇದಿಕೆಯಲ್ಲಿ ಕಂಡುಬಂದಿತು.

ಮಣಿಪುರದ ತಂಡ ಕತ್ತಿ ಹಿಡಿದು ಎದುರಾಳಿಯನ್ನು ಮಣಿಸುವ, ಚೂಪಾದ ಭರ್ಜಿಯ ಮೇಲೆ ಮಲಗಿ ವಿವಿಧ ಭಂಗಿ ಪ್ರದರ್ಶಿಸುವ ಮೂಲಕ ಥಾಂಗ್‌-ತಾ ಎಂಬ ಸಮರ ಅನಾವರಣಗೊಳಿಸಿದ ಕಲಾವಿದರು ನೋಡುಗರನ್ನು ಅರೆಕ್ಷಣ ದಂಗುಬಡಿಸಿದರು. ಇದಾದ ಬಳಿಕ ಕೇರಳದ ತಂಡ ಕಳರಿ ಪಯಟ್‌ ಎಂಬ ಸಮರ ಕಲೆಯನ್ನು ಅಮೋಘವಾಗಿ ಪ್ರದರ್ಶಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸಿತು.

ಬಳಿಕ ಕೋಲಾರದ ಮಂಜುನಾಥ್‌ ತಂಡ ದಿಂದ ತಮಟೆ ಹಾಗೂ ಕೊಪ್ಪಳದ ಸುಧಾ ಮು ತ್ತಾಳ ತಂಡದಿಂದ ಸುಗ್ಗಿ ಕುಣಿತ ಪ್ರದರ್ಶ ನಗೊಂಡಿತು.ಇದಕ್ಕೂ ಮುನ್ನ ಬಿ.ವಿ. ಕಾರಂತ ರಂಗ ಚಾವಡಿಯಲ್ಲಿ ರಂಗಾಯಣ ಕಲಾವಿದರು ನಡೆಸಿ ಕೊಟ್ಟ ರಾಗಪ್ರಸ್ತುತಿ ಕಾರ್ಯಕ್ರಮ ರಂಗಾ ಸಕ್ತರನ್ನು ತಲೆದೂಗುವಂತೆ ಮಾಡಿತು. ವಿವಿಧ ನಾಟಕಗಳ ರಂಗ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ, ಎಲ್ಲರ ಮನ ರಂಜಿಸಿದರು.

ನಾಟಕ ಪ್ರದರ್ಶನ: ಭೂಮಿಗೀತಾದಲ್ಲಿ ಮಲೆಯಾ ಳಂನ ದ ಓಲ್ಡ್‌ ಮ್ಯಾನ್‌ ಅಂಡ್‌ ದ ಸೀ ನಾಟಕವನ್ನು ಕೇರಳದ ರಿಮೆಂಬರೆನ್ಸ್‌ ಥಿಯೇಟರ್‌ ಗ್ರೂಪ್‌ ತಂಡದವರು ಪ್ರಸ್ತುತಪಡಿಸಿದರು. ಹಾಗೆಯೇ ಕಿರುರಂಗ ಮಂದಿರದಲ್ಲಿ ಪ್ರಾಜೆಕ್ಟ್ ನಗ್ನ ಕನ್ನಡ ನಾಟಕವನ್ನು ಬೆಂಗಳೂರು ಅಂತರಂಗ ತಂಡ ಪ್ರಸ್ತುತಪಡಿಸಿದರು. ವನರಂಗದಲ್ಲಿ ಬೆಂಗಳೂರು ಪಂಚಮುಖೀ ನಟರ ಸಮೂಹ ತಂಡದವರು ಚದು ರಂಗ ಮತ್ತು ಕತ್ತೆ ನಾಟಕವನ್ನು ಪ್ರಸ್ತುತಪಡಿಸಿದರು. ಕಲಾ ಮಂದಿರದಲ್ಲಿ ಇಂಗಳಗಿಯ ಗ್ಲಾಮರಂಗ ತಂಡದ ಕಲಾವಿದರು ವೀರ ವಿರಾಗಿ ಬಾಹುಬಲಿ ನಾಟಕವನ್ನು ಪ್ರಸ್ತುತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next