Advertisement

ತ್ಯಾಜ್ಯ ಉಸ್ತುವಾರಿಗೆ ಮಾರ್ಷಲ್ಸ್‌

12:47 PM Feb 28, 2017 | Team Udayavani |

ಬೆಂಗಳೂರು: ತ್ಯಾಜ್ಯ ವಿಲೇವಾರಿಯಲ್ಲಿ ನಿಯಮ ಉಲ್ಲಂ ಸುವ ಸಾರ್ವಜನಿಕರ ಮೇಲೆ “ದಂಡ ಪ್ರಯೋಗ’ಕ್ಕಾಗಿ ವಾರ್ಷಿಕ ಸುಮಾರು ಏಳೂವರೆ ಕೋಟಿ ವೆಚ್ಚದಲ್ಲಿ ಮುಖ್ಯ ಅಧಿಕಾರಿ, ಉಪ ಮುಖ್ಯ ಅಧಿಕಾರಿ ಸೇರಿದಂತೆ ಪ್ರತಿ ವಾರ್ಡ್‌ಗೆ ಒಬ್ಬ ಕ್ಲೀನ್‌ ಅಪ್‌ ಮಾರ್ಷಲ್‌ಗ‌ಳ ನಿಯೋಜಿಸಲು ಬಿಬಿಎಂಪಿ ಮುಂದಾಗಿದೆ. 

Advertisement

ತಿಂಗಳಿಗೆ ಕನಿಷ್ಠ 25 ಸಾವಿರದಿಂದ ಗರಿಷ್ಠ 90 ಸಾವಿರ ರೂ.ಗಳನ್ನು ಈ ಮಾರ್ಷಲ್‌ಗ‌ಳಿಗೆ ಸಂಭಾವನೆ ರೂಪದಲ್ಲಿ ನೀಡಲು ಉದ್ದೇಶಿಸಲಾಗಿದೆ. ಇದಲ್ಲದೆ, ವರ್ಷಕ್ಕೆ ಎರಡು ಜೊತೆ ಸಮವಸ್ತ್ರ, ಶೂ, ಬೆಲ್ಟ್, ಟೋಪಿ, ಮೊಬೈಲ್‌ ಸಿಮ್‌ ಕಾರ್ಡ್‌ (500ರಿಂದ 1000 ರೂ. ಕರೆನ್ಸಿ), ಓಡಾಡಲು ಪ್ರತಿ ನೂರು ಕಿ.ಮೀ.ಗೆ 1.5ಯಿಂದ 2 ಲೀ. ಪೆಟ್ರೋಲ್‌ ನೀಡಲು ಉದ್ದೇಶಿಸಲಾಗಿದೆ. ಈ ಸಂಬಂಧದ ಪ್ರಸ್ತಾವನೆ ಮಂಗಳ ವಾರ ನಡೆಯುವ ಮಾಸಿಕ ಬಿಬಿಎಂಪಿ ಸಾಮಾನ್ಯ ಸಭೆಯ ಕಾರ್ಯಸೂಚಿಯ ಲ್ಲಿದ್ದು, ಚರ್ಚೆಗೆ ಬರುವ ಸಾಧ್ಯತೆ ಇದೆ. 

ಘನತ್ಯಾಜ್ಯ ವಿಂಗಡಣೆ ಮಾಡದಿರು ವುದು, ಎಲ್ಲೆಂದರಲ್ಲಿ ಬಿಸಾಡುವುದು, ಉಗುಳುವಿಕೆ, ಕಸ ಅನಧಿಕೃತ ವಿಲೇ ವಾರಿಯು ಕೆಎಂಸಿ ಕಾಯ್ದೆ ತಿದ್ದುಪಡಿ ಮಸೂದೆ 2013ರ ಉಲ್ಲಂಘನೆಯಾಗಿದೆ. ಆದರೆ, ನಿಯಮ ಜಾರಿ ಕಷ್ಟ ವಾಗಿದೆ. ಈ ಹಿನ್ನೆಲೆಯಲ್ಲಿ ನಿವೃತ್ತ ಸೇನಾ ಸಿಬ್ಬಂದಿಯನ್ನೊಳಗೊಂಡ ಕ್ಲೀನ್‌ ಅಪ್‌ ಮಾರ್ಷಲ್‌ಗ‌ಳ ಪ್ರತ್ಯೇಕ ತಂಡ ರಚಿಸಲು ಬಿಬಿಎಂಪಿ ಉದ್ದೇಶಿಸಿದೆ. ಈ ತಂಡಕ್ಕೆ ತಿಂಗಳಿಗೆ 63.85 ಲಕ್ಷ ಖರ್ಚಾಗಲಿದೆ. 

ತ್ಯಾಜ್ಯ ನಿರ್ವಹಣೆ ಕೋಶ ಸ್ಥಾಪನೆ: ಘನತ್ಯಾಜ್ಯದ ವೈಜ್ಞಾನಿಕ ನಿರ್ವಹಣೆ ಗಾಗಿ ಬಿಬಿಎಂಪಿ ಕೇಂದ್ರ ಮತ್ತು ವಲಯಮಟ್ಟದಲ್ಲಿ ಪ್ರತ್ಯೇಕ ಘನತ್ಯಾಜ್ಯ ನಿರ್ವಹಣಾ ಕೋಶ ಸ್ಥಾಪಿಸಲು ಯೋಜಿಸಲಾಗಿದೆ. ಈ ಪ್ರಸ್ತಾವನೆಯೂ ಸಾಮಾನ್ಯಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ. 

ಉದ್ದೇಶಿತ ಕೇಂದ್ರ ತಾಂತ್ರಿಕ ಕೋಶದಲ್ಲಿ ಮುಖ್ಯ ಎಂಜಿನಿಯರ್‌ (ಘನತ್ಯಾಜ್ಯ ನಿರ್ವಹಣೆ-1) ಸೇರಿದಂತೆ 24 ಅಧಿಕಾರಿಗಳ ತಂಡ ಇರಲಿದೆ. ಅದೇ ರೀತಿ, ವಲಯ ಮಟ್ಟದ ಅನುಷ್ಠಾನ ಕೋಶದಲ್ಲಿ 8 ಅಧೀಕ್ಷಕ ಎಂಜಿನಿಯರ್‌ ಸೇರಿದಂತೆ 291 ಹಾಗೂ ಆರೋಗ್ಯ ಅಧಿಕಾರಿಯನ್ನು ಒಳಗೊಂಡಂತೆ 78 ಅಧಿಕಾರಿಗಳ ತಂಡವನ್ನು ರಚಿಸಲು ಉದ್ದೇಶಿಸಲಾಗಿದೆ.

Advertisement

ಘನತ್ಯಾಜ್ಯ ನಿರ್ವಹಣೆಗೆ ಸಾರ್ವ ಜನಿಕರ ಸಹಭಾಗಿತ್ವದ ಬಗ್ಗೆ ಅರಿವು ಮೂಡಿಸಲು 360 ಸಂಪರ್ಕ ಕಾರ್ಯ ಕರ್ತೆಯರ ನಿಯೋಜನೆ, 50ರಿಂದ 100 ಟನ್‌ ಸಾಮರ್ಥ್ಯದ ಕಸ ವಿಕೇಂದ್ರಿತ ಘಟಕಗಳು ಮತ್ತು 500 ಮೆಟ್ರಿಕ್‌ ಟನ್‌ ಸಾಮರ್ಥ್ಯದ ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನೆ ಘಟಕ ಸ್ಥಾಪನೆಗೆ ಸಂಬಂಧಿಸಿದ ಯೋಜನೆಯ ಪ್ರಸ್ತಾಪ ಚರ್ಚೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ತೆರಿಗೆ ಪಾವತಿಸದ ಸಂಸ್ಥೆಗಳಿಗೆ ಸ್ಕೈವಾಕ್‌ ಗುತ್ತಿಗೆ: ಆಕ್ಷೇಪ 
ಬೆಂಗಳೂರು:
ನಗರದ ವಿವಿಧೆಡೆ 16 ಸ್ಕೈವಾಕ್‌ಗಳ ನಿರ್ಮಾಣ ಗುತ್ತಿಗೆಯನ್ನು ತೆರಿಗೆ ಬಾಕಿ ಉಳಿಸಿಕೊಂಡಿರುವ ಮೂರು ಸಂಸ್ಥೆಗಳಿಗೆ ನೀಡಲು ಮುಂದಾಗಿದ್ದು ಇದು ಟೆಂಡರ್‌ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪಾಲಿಕೆಯ ಲೆಕ್ಕಪತ್ರ ಸ್ಥಾಯಿಸಮಿತಿ ಅಧ್ಯಕ್ಷೆ ನೇತ್ರಾ ನಾರಾಯಣ್‌ ಆರೋಪಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಯಮ ಉಲ್ಲಂ ಸಿ ಗುತ್ತಿಗೆ ನೀಡಲು ಕಾರಣರಾಗಿರುವ ಕಾರ್ಯನಿರ್ವಾಹಕ ಎಂಜಿನಿಯರ್‌ (ಜಾಹಿರಾತು) ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನಿಯಮಗಳ ಪ್ರಕಾರ ಟೆಂಡರ್‌ ಪಡೆಯಲು ಅನರ್ಹವಾಗಿರುವ ಸಂಸ್ಥೆಗಳಿಗೆ ಸ್ಕೈವಾಕ್‌ ನಿರ್ಮಾಣಕ್ಕೆ ಸಂಬಂಧಿಸಿದ ಗುತ್ತಿಗೆಯನ್ನು ಸಿಂಗಲ್‌ ಪ್ಯಾಕೇಜ್‌ನಡಿ ತರಾತುರಿಯಲ್ಲಿ ನೀಡಲಾಗಿದ್ದು, ನಗರ ಯೋಜನಾ ಸಮಿತಿ ಅನುಮತಿಯನ್ನೂ ಪಡೆಯದೆ ನೇರವಾಗಿ ಮಾಸಿಕ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆಯಲು ಹುನ್ನಾರ ನಡೆದಿದೆ. ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.

ಆಯುಕ್ತರಿಗೆ ಹೈಕೋರ್ಟ್‌ ನೋಟಿಸ್‌
ಬೆಂಗಳೂರು:
ಬಿಬಿಎಂಪಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕವೂ ಪಾಲಿಕೆ ಮಾಸಿಕ ಸಭೆಯಲ್ಲಿ ಪಾಲ್ಗೊಳ್ಳುತ್ತಿರುವ ಎಚ್‌ಎಂಟಿ ವಾರ್ಡ್‌ನ ಆಶಾ ಸುರೇಶ್‌ ವಿರುದ್ಧದ ದೂರು ಹೈಕೋರ್ಟ್‌ ತಲುಪಿದೆ. ಈ ಸಂಬಂಧ ವಿವರಣೆ ಕೋರಿ ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌, ಆಡಳಿತ ಪಕ್ಷದ ನಾಯಕ ಆರ್‌.ಎಸ್‌ ಸತ್ಯನಾರಾಯಣ ಹಾಗೂ ಆಶಾ ಸುರೇಶ್‌ಗೆ ಹೈಕೋರ್ಟ್‌ ನೋಟೀಸ್‌ ಜಾರಿಗೊಳಿಸಿದೆ.

ಈ ಸಂಬಂಧ ಯಶವಂತ­ಪುರದ ಎನ್‌ ನಂಜುಂಡಪ್ಪ ಎಂಬುವವರು, ಆಶಾ ಸುರೇಶ್‌ ಕಾರ್ಪೋರೇಟರ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕವೂ ಬಿಬಿಎಂಪಿ ಮಾಸಿಕ ಸಭೆಗಳಲ್ಲಿ ಪಾಲ್ಗೊಂಡಿದ್ದಾರೆ. ಸದಸ್ಯ ಸ್ಥಾನ್ಕಕ್ಕೆ ರಾಜೀನಾಮೆ ನೀಡಿದ ಬಳಿಕ ಕಾರ್ಯಕಲಾಪಗಳಲ್ಲಿ  ಪಾಲ್ಗೊಳ್ಳಲು ಅವಕಾಶವಿಲ್ಲ. ಹೀಗಾಗಿ ಕೂಡಲೇ ಆಶಾ ಸುರೇಶ್‌ ಅವರಿಗೆ ಬಿಬಿಎಂಪಿಯ ಸಭೆಗಳಲ್ಲಿ ಪಾಲ್ಗೊಳ್ಳದಂತೆ ಸೂಚಿಸಬೇಕು ಎಂದು ಕೋರಿ  ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next