Advertisement
ಪ್ರವಾಸಿಗರು ತರುವ ನೀರಿನ ಬಾಟಲಿ, ತಿಂಡಿಯ ಪ್ಲಾಸ್ಟಿಕ್ ಪೊಟ್ಟಣಗಳು, ಪ್ಲಾಸ್ಟಿಕ್ ಬ್ಯಾಗ್ ಮತ್ತಿತರ ವಸ್ತುಗಳನ್ನು ಬೇಕಾಬಿಟ್ಟಿ ಎಸೆಯದೆ ಅದನ್ನು ಸರಿಯಾದ ಜಾಗದಲ್ಲಿ ಸಂಗ್ರಹಿಸುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ಸಂಗ್ರಹ ಕಿಯೋಸ್ಕ್ ಕೇಂದ್ರವೊಂದನ್ನು ನಿರ್ಮಿಸಲಾಗಿದೆ. ಬೈಕಂಪಾಡಿಯ ಕೆನರಾ ಪ್ಲಾಸ್ಟಿಕ್ ಉತ್ಪಾದಕರ ಅಸೋಸಿಯೇಶನ್ ಆಂದಾಜು 2.50 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿಕೊಟ್ಟಿದೆ. ಇದರ ಮೇಲ್ವಿಚಾರಣೆಗೆ ಒಬ್ಬ ಸಿಬಂದಿ ನೇಮಕವಾಗಿದೆ.
Related Articles
ಪಣಂಬೂರು ಬೀಚ್‌ನಲ್ಲಿ ರಜಾ ದಿನ, ವಾರಾಂತ್ಯಗಳಲ್ಲಿ ಕನಿಷ್ಠ ನೂರು ಕೆಜಿ ಕೇವಲ ಪ್ಲಾಸ್ಟಿಕ್ ಪೊಟ್ಟಣಗಳು, ಬಾಟಲಿ, ಕೈ ಚೀಲ ಸಂಗ್ರಹವಾಗುತ್ರವೆ, ಇದನ್ನು ಪ್ರತ್ಯೇಕಿಸಿ ಹಾಕಲು ವ್ಯವಸ್ಥೆಗಳಿರಲಿಲ್ಲ.
Advertisement
ಬೀಚ್ ಪ್ರವಾಸೋದ್ಯಮ ವಿಭಾಗಕ್ಕೆ ಸೇರಿದ್ದರೂ ತ್ಯಾಜ್ಯ ವಿಲೇವಾರಿ ಮಾಡುವ ಜವಾಬ್ದಾರಿ ಪಾಲಿಕೆಯದ್ದು. ಪಾಲಿಕೆಯು ಸ್ಥಳೀಯ ವ್ಯಾಪಾರಿಗಳಲ್ಲಿ ಒಡಂಬಡಿಕೆ ಮಾಡಿಕೊಂಡು ಪ್ಲಾಸ್ಟಿಕ್ ಸಹಿತ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಿತ್ತು.
ಪಣಂಬೂರು ಬೀಚ್‌ನ್ನು ಕಳೆದ ಹತ್ತು ವರ್ಷದ ಹಿಂದೆಯೇ ಪ್ಲಾಸ್ಟಿಕ್ ಮುಕ್ತ ಎಂದು ಘೋಷಣೆ ಮಾಡಲಾಗಿದೆಯಾದರೂ ಇದುವೆರಗೂ ಸಂಪೂರ್ಣ ನಿಯಂತ್ರಣ ಸಾಧ್ಯವಾಗಿಲ್ಲ.
ಇಂದು ಸಚಿವರಿಂದ ಚಾಲನೆಪಣಂಬೂರು ಬೀಚಲ್ಲಿ ಪ್ಲಾಸ್ಟಿಕ್ ಸಂಗ್ರಹ ಕೇಂದ್ರವನ್ನು ಸ್ಥಾಪಿಸಲಾಗಿದೆ. ಸಮುದ್ರ ದಡಕ್ಕೆ ಪ್ಲಾಸ್ಟಿಕ್ ಬಾಟಲಿಗಳನ್ನು ಒಯ್ಯದೆ, ಈ ಘಟಕದಲ್ಲಿ ಹಾಕಿ ಸ್ವತ್ಛತೆಗೆ ಕೈ ಜೋಡಿಸಬೇಕು. ಇದಕ್ಕೆ ಅಧಿಕೃತವಾಗಿ ಆ. 30ರಂದು ಉಸ್ತುವಾರಿ ಸಚಿವ ಗುಂಡೂರಾವ್ ಅವರು ಚಾಲನೆ ನೀಡಲಿದ್ದಾರೆ ಎಂದು ಸಿಪಿಎಂಟಿಎ ಅಧ್ಯಕ್ಷ ಬಿ.ಎ. ನಝೀರ್ ತಿಳಿಸಿದ್ದಾರೆ. -ಲಕ್ಷ್ಮೀನಾರಾಯಣ ರಾವ್