Advertisement

ನಾಳೆಯಿಂದಲೇ ಚೌಟರಿಗಳಲ್ಲಿ ಮದುವೆ ಆಯೋಜನೆಗೆ ಅಸ್ತು

03:26 PM Jun 27, 2021 | Team Udayavani |

ಧಾರವಾಡ: ಸರಕಾರದ ನಿರ್ದೇಶನದಂತೆ ಜೂ. 28ರಿಂದ ಜರುಗಲಿರುವ ಮದುವೆ ಸಮಾರಂಭಗಳನ್ನು ಚೌಟರಿ, ಹೋಟೆಲ್‌, ಫಂಕ್ಷನ್‌ ಹಾಲ್‌ಗ‌ಳಲ್ಲಿ ಗರಿಷ್ಠ 40 ಜನರಿಗೆ ಮೀರದಂತೆ ಜರುಗಿಸಲು ಅವಕಾಶ ನೀಡಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶಿಸಿದ್ದಾರೆ.

Advertisement

ಅನುಮತಿಗಾಗಿ https://www.supportdharwad.in/ಗೆ ಆಧಾರ ಕಾರ್ಡ್‌ ಹಾಗೂ ಮದುವೆಯ ಕಾರ್ಡ್‌ನೊಂದಿಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5:30ರೊಳಗಾಗಿ ಮದುವೆ ನಡೆಯುವ ಮೂರು ದಿನಗಳ ಮುಂಚಿತವಾಗಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬಹುದಾಗಿದೆ.

ಜಿಲ್ಲಾಧಿಕಾರಿಗಳ ಕಾರ್ಯಾ ಲಯದಿಂದ https://www.supportdharwad.in/ಮೂಲಕ ನೀಡಲಾದ ಅನುಮತಿ ಪತ್ರ ಪಡೆದ ನಂತರ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸಂಬಂಧಿ ಸಿದಂತೆ ವಲಯ ಸಹಾಯಕ ಆಯುಕ್ತರಿಂದ ಹಾಗೂ ತಾಲೂಕುಗಳ ಗ್ರಾಮೀಣ ಪ್ರದೇಶಕ್ಕೆ ಸಂಬಂ ಧಿಸಿದಂತೆ ಆಯಾ ತಾಲೂಕು ತಹಶೀಲ್ದಾರರಿಂದ 40 ಜನರಿಗೆ ಗುರುತಿನ ಪತ್ರವನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ಡಿಸಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next