Advertisement

ವಿಧಿವತ್ತಾದ ಆಚರಣೆಗಳಿಲ್ಲದ ಮ್ಯಾರೇಜ್‌ ಸರ್ಟಿಫಿಕೆಟ್‌ ಅಸಿಂಧು: ಮುಂಬೈ ಹೈಕೋರ್ಟ್‌

02:57 AM Apr 23, 2020 | Hari Prasad |

ಮುಂಬಯಿ: ಮದುವೆಯನ್ನು ಸಾಕ್ಷೀಕರಿಸುವ ಯಾವುದೇ ವಿಧಿವತ್ತಾದ ಆಚರಣೆಗಳಿಲ್ಲದೆ ನೀಡಲಾದ ‘ಮ್ಯಾರೇಜ್‌ ಸರ್ಟಿಫಿಕೆಟ್‌’ ಅಸಿಂಧು ಎಂದು ಮುಂಬೈ ಹೈಕೋರ್ಟ್‌ ತಿಳಿಸಿದೆ.

Advertisement

ಥಾಣೆ ನಿವಾಸಿಯೊಬ್ಬರ ‘ಮ್ಯಾರೇಜ್‌ ಸರ್ಟಿಫಿಕೆಟ್‌’ಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಈ ತೀರ್ಪು ನೀಡಿದೆ.

ಥಾಣೆ ನಿವಾಸಿಯೊಬ್ಬ ನಾಲ್ಕು ವರ್ಷಗಳ ಹಿಂದೆ ವ್ಯಾಯಾಮ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಯನ್ನು ಪ್ರೀತಿಸುತ್ತಿದ್ದು, ಆಕೆಯ ಮನೆಯಲ್ಲಿ ಈ ಮದುವೆಗೆ ಒಪ್ಪಲಿಲ್ಲ ಎಂಬ ಕಾರಣಕ್ಕೆ 2016ರ ಸೆ.29ರಂದು ಥಾಣೆ ಮುನ್ಸಿಪಲ್‌ ಕಾರ್ಪೋರೇಷನ್‌ನಿಂದ ‘ಮ್ಯಾರೇಜ್‌ ಸರ್ಟಿಫಿಕೆಟ್‌’ ಪಡೆದುಕೊಂಡಿದ್ದ.

ಸ್ಥಳೀಯ ಮಂಡಳಿಯೊಂದರಲ್ಲಿ 2016ರ ಜು.28ರಂದು ಇವರಿಬ್ಬರಿಗೆ ಮದುವೆಯಾಗಿದೆ ಎಂಬುದಾಗಿ ‘ಸರ್ಟಿಫಿಕೆಟ್‌ನಲ್ಲಿ’ ಬರೆಯಲಾಗಿತ್ತು. ಇದನ್ನು ಆಕ್ಷೇಪಿಸಿ, ಹುಡುಗಿಯ ಪಾಲಕರು ಠಾಣೆಗೆ ದೂರು ನೀಡಿದ್ದರು.

ಈತ ತಮ್ಮ ಮಗಳನ್ನು ಅಪಹರಿಸಿ, ಬಲವಂತವಾಗಿ ಸಹಿ ಮಾಡಿಸಿಕೊಂಡಿದ್ದಾನೆಂದು ದೂರಿದ್ದರು. 2017ರ ನ.16ರಂದು ಪ್ರಕರಣದ ವಿಚಾರಣೆ ನಡೆಸಿದ ಥಾಣೆ ಕೌಟುಂಬಿಕ ನ್ಯಾಯಾಲಯ, ‘ಮ್ಯಾರೇಜ್‌ ಸರ್ಟಿಫಿಕೆಟ್‌’ನ್ನು ಊರ್ಜಿತಗೊಳಿಸಬೇಕೆಂಬ ಈತನ ಮನವಿಯನ್ನು ತಳ್ಳಿಹಾಕಿತ್ತು. ಇದನ್ನು ಪ್ರಶ್ನಿಸಿ ಈತ, ಹೈಕೋರ್ಟ್‌ ಮೊರೆ ಹೋಗಿದ್ದ.

Advertisement
Advertisement

Udayavani is now on Telegram. Click here to join our channel and stay updated with the latest news.

Next