ಕುಣಿಗಲ್: ಮಾರ್ಕೋನಹಳ್ಳಿ ಜಲಾಶಯ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಶಾಸಕ ಡಾ.ಎಚ್.ಡಿ.ರಂಗನಾಥ್ ವಿಜಯ ದಶಮಿ ಹಬ್ಬ ಸೋಮವಾರದಂದು ಬಾಗಿನ ಅರ್ಪಿಸಿದರು.
ತಾಲೂಕಿನ ಅಮೃತೂರು, ಎಡೆಯೂರು, ಹುಲಿಯೂರುದುರ್ಗದ ರೈತರ ಜೀವನಾಡಿ ಮಾರ್ಕೋನಹಳ್ಳಿ ಜಲಾಶಯ ಸತತವಾಗಿ ಮೂರನೇ ಬಾರಿ ಈ ವರ್ಷ ಭರ್ತಿಯಾದ ಹಿನ್ನೆಲೆಯಲ್ಲಿ ಶಾಸಕರು ಜಲಾಶಯಕ್ಕೆ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಅಂದಿನ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಹಾಗೂ ನಾನು ಇಚ್ಛಾಶಕ್ತಿ ಪ್ರದರ್ಶಿಸಿ ಹೇಮಾವತಿ ನಾಲೆಯ ಜಿರೋ ಎಸ್ಕೇಪ್ ಗೇಟ್ ಓಪನ್ ಮಾಡಿಸಿ, ಕೊಳ್ಳಾಲ ಎಕ್ಸ್‌ಪ್ರೆಸ್‌ಗೆ ನೀರು ತುಂಬಿಸಿ, ಅಧಿಕಾರಿಗಳ ಸಹಕಾರದೊಂದಿಗೆ ಮಾರ್ಕೋನಹಳ್ಳಿ ಜಲಾಶಯಕ್ಕೆ ನೀರು ಹರಿಸಿದ್ದೇವೆ. ಇದರಿಂದ ಅಮೃತೂರು ಹೋಬಳಿಯ ಸಾಲು ಕೆರೆಗಳನ್ನು ತುಂಬಿಸುವುದರ ಜೊತೆಗೆ ಕಳೆದ 20 ವರ್ಷಗಳಿಂದ ಹೇಮಾವತಿ ನೀರಿನಿಂದ ವಂಚಿತವಾಗಿದ್ದ ಎಡೆಯೂರು ಹೋಬಳಿಯ 14 ಕೆರೆಗಳಿಗೆ ಇದೇ ಪ್ರಥಮ ಬಾರಿ ನೀರು ಹರಿಸಿ ತುಂಬಿಸಲಾಗಿದೆ ಎಂದರು.
ಸಿಎಂ ಮನೆ ಮುಂದೆ ಧರಣಿ: ಕುಣಿಗಲ್ ಲಿಂಕ್‌ಕೆನಾಲ್‌ಗೆ 615 ಕೋಟಿ ಹಾಗೂಮಾರ್ಕೋನಹಳ್ಳಿ ಜಲಾಶಯದಿಂದ ಮಂಗಳ ಜಲಾಶಯಕ್ಕೆ ಲಿಂಕ್ ಕೆನಾಲ್ 5 ಕೋಟಿಕಾಮಗಾರಿಗೆ ಡಿ.ಕೆ.ಶಿವಕುಮಾರ್ ಮಂಜೂರು ಮಾಡಿದರು. ಆದರೆ ಸರ್ಕಾರ ಬದಲಾವಣೆಯಿಂದಾಗಿ ಯೋಜನೆಗೆ ತಡೆ ಹಿಡಿಯಲಾಗಿದೆ, ತಡೆ ಹಿಡಿದಿರುವಯೋಜನೆಯನ್ನು ಮತ್ತೆ ಮಂಜೂರು ಮಾಡಿಕೊಡುವಂತೆ ಹಲವು ಬಾರಿ ಸರ್ಕಾರದ ಗಮನ ಸೆಳೆದರು ಈವರೆಗೂ ಕ್ರಮಕೈಗೊಂಡಿಲ್ಲ ಈ ಸಂಬಂಧ ಸಿ.ಎಂ ಯಡಿಯೂರಪ್ಪ ಅವರಿಗೆ ಮತ್ತೆ ಮನವಿ ಸಲ್ಲಿಸಲಾಗುವುದು ಮನವಿಗೆ ಪುರಸ್ಕಾರ ಸಿಗದಿದ್ದರೇ ರೈತರೊಂದಿಗೆಪಾದಯಾತ್ರೆ ಮೂಲಕ ತಾಲೂಕಿನಿಂದಬೆಂಗಳೂರಿನ ಸಿಎಂ ನಿವಾಸದ ವರೆಗೆ ತೆರಳಿ ಧರಣಿ ಸತ್ಯಾಗ್ರಹ ಮಾಡುವುದ್ದಾಗಿ ಎಚ್ಚರಿಕೆ ನೀಡಿದರು.