Advertisement
ಕಳೆದ ಹಲವು ದಿನಗಳಿಂದ ಸತತವಾಗಿ ಮಳೆಯಾಗುತ್ತಿರುವ ಕಾರಣ ಮಾರ್ಕೋನಹಳ್ಳಿ ಜಲಾಶಯದ ಮೇಲ್ಬಾಗದ ಕೆರೆಗಳಾದ ತುರುವೇಕೆರೆ ಮಲ್ಲಾಘಟ್ಟ ಕೆರೆ ಸೇರಿದಂತೆ ಹಲವಾರು ಕೆರೆಗಳು ತುಂಬಿಕೊಂಡು ಮಾರ್ಕೋನಹಳ್ಳಿಗೆ ನೀರು ಹರಿದು ಬರುತ್ತಿದೆ. ಮುಂಗಾರಿನ ಮಳೆ ಪ್ರಾರಂಭವಾಗುವ ಮುನ್ನವೇ ಮಾಕೋನಹಳ್ಳಿ ಜಲಾಶಯ ತುಂಬಿರುವುದು ರೈತರ ಮೋಗದಲ್ಲಿ ಸಂತಸ ಮೂಡಿದೆ,
ಕಳೆದ ನಾಲ್ಕು ವರ್ಷದಿಂದಲೂ ಮಾರ್ಕೋನಹಳ್ಳಿ ಜಲಾಶಯ ಭರ್ತಿಯಾಗಿ ಕೋಡಿಯಾಗುತ್ತಿರುವುದು ಈ ಭಾಗದ ರೈತರ ಸಂತೋಷವನ್ನು ಇಮ್ಮೆಡಿಗೊಳಿಸಿದೆ. ಸ್ವಭಾವಿಕವಾಗಿ ಜಲಾಶಯ ತಿಂಬಿರುವ ಜೊತೆಗೆ ಜಲಾಶಯದಲ್ಲಿ ರೈತರ ಬೆಳೆಗೆ ಕಳೆದ ವರ್ಷ ನೀರು ಬಿಟ್ಟು ಸ್ವಲ್ಪ ಪ್ರಮಾಣದಲ್ಲಿ ನೀರು ಖಾಲಿಯಾದರೂ ವರ್ಣನ ಕೃಪೆಯಿಂದ್ದಾಗಿ ಹಲವು ದಿನಗಳಿಂದ ಎಡೆ ಬಿಡದೇ ಸುರಿಯುತ್ತಿರುವ ಮಳೆಯಿದ್ದಾಗಿ ತುರುವೇಕೆರೆಯ ಹಲವು ಕೆರೆಗಳಿಂದ ಹಾಗೂ ಬಯಲಿನಿಂದ್ದಾದ ಸುಮಾರು ೨೨೦೦ ಕ್ಯೂಸೆಕ್ಸ್ ನೀರು ಜಲಾಶಯಕ್ಕೆ ಒಳ ಹರಿವು ಇದೆ, ಇದರಿಂದ ಈ ಭಾಗದ ರೈತರಿಗೆ ಹೆಚ್ಚು ಅನಕೂಲವಾಗಲಿದೆ ಎಂದು ರೈತರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಸ್ವಯಂ ಚಾಲಿತ ಎರಡು ಸೈಫೋನ್ ಹಾಗೂ ಕೋಡಿ ಮೂಲಕ ಜಲಾಶದಿಂದ ಹೋರ ಹೋಗುವ ದೃಶ್ಯ ಮನಮೋಹಕವಾಗಿದೆ.
Related Articles
Advertisement
ಶಾಸಕರ ಹರ್ಷ : ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತದೊಂದಿಗೆ ಹೋರಾಟ ಅಥವಾ ಪ್ರಕೃತಿ ದಾಹಿಕವಾಗಿ ಸತತ ನಾಲ್ಕು ವರ್ಷಗಳ ಕಾಲ ಮಾರ್ಕೋನಹಳ್ಳಿ ಜಲಾಶಯ ತುಂಬಿರುವುದು ನನ್ನಗೆ ಅತಿ ಸಂತಸ ತಂದಿದೆ ಎಂದು ಪ್ರತಿಕ್ರಿಯಿಸಿದ ಶಾಸಕ ಡಾ.ಹೆಚ್.ಡಿ.ರಂಗನಾಥ್ ಮುಂಗಾರು ಮಳೆ ಪ್ರಾರಂಭವಾಗುವ ಮುನ್ನವೇ ತಾಲೂಕಿನ ಕೆಲವು ಕೆರೆ ಕಟ್ಟೆಗಳಿಗೆ ನೀರು ಹರಿದು ಬರುತ್ತಿದ್ದು ರೈತರಿಗೆ ವರದಾನವಾಗಲಿದೆ, ಜತೆಗೆ ಕುಡಿಯುವ ನೀರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಮಳೆ ವಿವರ : ಕಳೆದ ರಾತ್ರಿ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಕುಣಿಗಲ್ 73.3 ಮೀ.ಮೀ, ಹುಲಿಯೂರುದುರ್ಗ 37 ಮೀ.ಮೀ, ಸಂತೆಪೇಟೆ 43.2 ಮೀ.ಮೀ, ಅಮೃತೂರು 54.3 ಮೀ.ಮೀ, ಕೆ.ಹೊನ್ನಮಾಚನಹಳ್ಳಿ 43.2 ಮೀ.ಮೀ, ನಿಡಸಾಲೆ 28.4 ಮೀ.ಮೀ ಮಳೆಯಾಗಿದೆ ಅತ್ಯಧಿಕ ಮಳೆ ಕುಣಿಗಲ್ ಪಟ್ಟಣದಲ್ಲಿ ೭೩.೩ ಮೀ.ಮೀ ಮಳೆಯಾಗಿದೆ