ಮುಂಬಯಿ: ಜಾಗತಿಕ ಷೇರು ಮಾರುಕಟ್ಟೆಯ ಮಿಶ್ರ ವಹಿವಾಟಿನ ಪರಿಣಾಮ ಬುಧವಾರ (ಜೂನ್ 01) ಬಾಂಬೆ ಷೇರುಪೇಟೆಯ ಸೂಚ್ಯಂಕ 185 ಅಂಕ ಕುಸಿತದೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ.
ಇದನ್ನೂ ಓದಿ:ಮೂಡಿಗೆರೆ : ನಕ್ಷೆ ತಿದ್ದುಪಡಿ ಮಾಡಲು ಲಂಚಕ್ಕೆ ಬೇಡಿಕೆ : ಸರ್ವೆ ಸೂಪರ್ ವೈಸರ್ ಎಸಿಬಿ ಬಲೆಗೆ
ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 185.24 ಅಂಕ ಇಳಿಕೆಯಾಗಿದ್ದು, 55,381.17 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ. ಮಧ್ಯಂತರ ವಹಿವಾಟಿನ ವೇಳೆ ಸೆನ್ಸೆಕ್ಸ್ 474.98 ಅಂಕಗಳಷ್ಟು ಕುಸಿತ ಕಂಡು, 55,091 ಅಂಕಗಳಲ್ಲಿ ವಹಿವಾಟು ನಡೆದಿತ್ತು.
ಅದೇ ರೀತಿ ಎನ್ ಎಸ್ ಇ ನಿಫ್ಟಿ 61.80 ಅಂಕ ಕುಸಿತದೊಂದಿಗೆ 16,522.75 ಅಂಕಗಳಲ್ಲಿ ವಹಿವಾಟು ಅಂತ್ಯಗೊಂಡಿದೆ. ಸೆನ್ಸೆಕ್ಸ್ ಇಳಿಕೆಯಿಂದ ನೆಸ್ಲೆ ಇಂಡಿಯಾ, ಟೆಕ್ ಮಹೀಂದ್ರ, ಬಜಾಜ್ ಫಿನ್ ಸರ್ವ್, ಸನ್ ಫಾರ್ಮಾ, ಹಿಂದೂಸ್ತಾನ್ ಯೂನಿಲಿವರ್, ಪವರ್ ಗ್ರಿಡ್, ಆಲ್ಟ್ರಾ ಟೆಕ್ ಸಿಮೆಂಟ್, ಎಚ್ ಸಿಎಲ್ ಟೆಕ್ನಾಲಜೀಸ್, ವಿಪ್ರೋ, ಇನ್ಫೋಸಿಸ್ ಮತ್ತು ಬಜಾಜ್ ಫೈನಾನ್ಸ್ ಷೇರುಗಳು ನಷ್ಟ ಕಂಡಿದೆ.
ಮತ್ತೊಂದೆಡೆ ಮಹೀಂದ್ರ ಆ್ಯಂಡ್ ಮಹೀಂದ್ರ, ಕೋಟಕ್ ಮಹೀಂದ್ರ ಬ್ಯಾಂಕ್, ಎಚ್ ಡಿಎಫ್ ಸಿ ಬ್ಯಾಂಕ್ ಮತ್ತು ಟಾಟಾ ಸ್ಟೀಲ್ ಷೇರುಗಳು ಲಾಭಗಳಿಸಿದೆ. ಏಷಿಯನ್ ಮಾರುಕಟ್ಟೆಗಳಾದ ಶಾಂಘೈ, ಹಾಂಗ್ ಕಾಂಗ್ ಷೇರುಪೇಟೆ ಸೆನ್ಸೆಕ್ಸ್ ಇಳಿಕೆಯೊಂದಿಗೆ ವಹಿವಾಟು ಕೊನೆಗೊಂಡಿದೆ.