ಮುಂಬಯಿ: ಅಮೆರಿಕದ ಫೆಡರಲ್ ರಿಸರ್ವ್ ಏಕಾಏಕಿ 75 ಬೇಸಿಸ್ ಪಾಯಿಂಟ್ಸ್ ಗಳಷ್ಟು ಬಡ್ಡಿದರ ಹೆಚ್ಚಳ ಮಾಡಿದ ಪರಿಣಾಮ ಗುರುವಾರ (ಜೂನ್ 16) ಬಾಂಬೆ ಷೇರುಪೇಟೆಯ ಸೆನ್ಸೆಕ್ಸ್ 1,000ಕ್ಕೂ ಅಧಿಕ ಅಂಕಗಳಷ್ಟು ಕುಸಿತದೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಇದನ್ನೂ ಓದಿ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಟ್ರ್ಯಾಕ್ಟರ್ ಗೆ ಸಿಲುಕಿ ರೈತ ಸ್ಥಳದಲ್ಲೇ ಸಾವು
ಇಂದು ಬೆಳಗ್ಗೆ ಏರಿಕೆಯ ಹಾದಿಯಲ್ಲಿದ್ದ ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಫೆಡರಲ್ ರಿಸರ್ವ್ ಬಡ್ಡಿದರ ಹೆಚ್ಚಳದ ಆತಂಕದಿಂದಾಗಿ ಮಧ್ಯಾಹ್ನ 1,045.60 ಅಂಕಗಳಷ್ಟು ಇಳಿಕೆಯೊಂದಿಗೆ 51,495.79 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ.
ಷೇರುಪೇಟೆಯ ಮಧ್ಯಂತರದ ವಹಿವಾಟಿನದಲ್ಲಿ 1,115.91 ಅಂಕಗಳಷ್ಟು ಇಳಿಕೆಯೊಂದಿಗೆ 51,425.48 ಅಂಕಗಳಲ್ಲಿ ವಹಿವಾಟು ಮುಂದುವರಿದಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ 331.55 ಅಂಕಗಳಷ್ಟು ಇಳಿಕೆಯೊಮದಿಗೆ 15,360.60 ಅಂಕಗಳಲ್ಲಿ ವಹಿವಾಟು ಮುಕ್ತಾಯಗೊಂಡಿದೆ.
ಸೆನ್ಸೆಕ್ಸ್ ಭಾರೀ ಇಳಿಕೆಯಿಂದಾಗಿ ಟಾಟಾ ಸ್ಟೀಲ್, ಟೆಕ್ ಮಹೀಂದ್ರ, ಇಂಡಸ್ ಇಂಡ್ ಬ್ಯಾಂಕ್, ವಿಪ್ರೋ, ಭಾರ್ತಿ ಏರ್ ಟೆಲ್, ಬಜಾಜ್ ಫೈನಾನ್ಸ್, ಕೋಟಕ್ ಮಹೀಂದ್ರ ಬ್ಯಾಂಕ್ ಮತ್ತು ಎನ್ ಟಿಪಿಸಿ ಷೇರುಗಳು ನಷ್ಟ ಕಂಡಿದೆ. ಕೇವಲ ನೆಸ್ಲೆ ಇಂಡಿಯಾ ಷೇರು ಮಾತ್ರ ಲಾಭಗಳಿಸಿದೆ.
ಶಾಂಘೈ, ಹಾಂಗ್ ಕಾಂಗ್ ಷೇರುಮಾರುಕಟ್ಟೆ ಸೆನ್ಸೆಕ್ಸ್ ಇಳಿಕೆ ಕಂಡಿದ್ದು, ಟೋಕಿಯೋ ಮತ್ತು ಸಿಯೋಲ್ ಷೇರುಮಾರುಕಟ್ಟೆಯ ಸೆನ್ಸೆಕ್ಸ್ ಸಾಧಾರಾಣ ಏರಿಕೆಯೊಂದಿಗೆ ವಹಿವಾಟು ಕೊನೆಗೊಂಡಿದೆ.