ಮುಂಬಯಿ : ಮುಂಬಯಿ ಶೇರು ಪೇಟೆಯಲ್ಲಿ ಇಂದು ಶುಕ್ರವಾರ ಹೂಡಿಕೆದಾರರು ಮತ್ತು ವಹಿವಾಟುದಾರರು ಎಚ್ಚರಿಕೆಯ ನಡೆ ತೋರಿದ ಕಾರಣ ಸೆನೆಕ್ಸ್11.71 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 34,415.58 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 1.25 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು10,564.05 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಹಾಗಿದ್ದರೂ ಸೆನ್ಸೆಕ್ಸ್ ಮತ್ತು ನಿಫ್ಟಿ ಸಾಪ್ತಾಹಿಕ ನೆಲೆಯಲ್ಲಿ ನಿರಂತರ ನಾಲ್ಕನೇ ವಾರ ತಮ್ಮ ಮುನ್ನಡೆಯನ್ನು ಕಾಯ್ದುಕೊಂಡವು. ವಾರದ ನೆಲೆಯಲ್ಲಿ ಸೆನ್ಸೆಕ್ಸ್ 222.93 ಅಂಕ ಸಂಪಾದಿಸಿದೆಯಾದರೆ ನಿಫ್ಟಿ 83.45 ಅಂಕಗಳನ್ನು ಸಂಪಾದಿಸಿತು.
ಭಾರತದ ಅಗ್ರ ಸಾಫ್ಟ್ ವೇರ್ ಕಂಪೆನಿ ಟಿಸಿಎಸ್‌ನ ಮಾರುಕಟ್ಟೆ ಬಂಡವಳೀಕರ್ ಶತಕೋಟಿ ಡಾಲರ್ ಆಗಿದ್ದು ಈ ಸಾಧನೆಯನ್ನು ಮಾಡಿರುವ ಭಾರತದ ಮೊದಲ ಕಂಪೆನಿ ಎಂಬ ಹೆಗ್ಗಳಿಕೆಗೆ ಪಾತ್ರವಾದುದು ಇಂದು ಮುಂಬಯಿ ಶೇರು ಮಾರುಕಟ್ಟೆಯಲ್ಲಿ ಸಂಚಲನ ಉಂಟು ಮಾಡಿತು.
ಮುಂಬಯಿ ಶೇರು ಮಾರುಕಟ್ಟೆಯಲ್ಲಿ ಇಂದು ಶುಕ್ರವಾರದ ವಹಿವಾಟು ಕೊನೆಗೊಂಡಾಗ ಟಿಸಿಎಸ್ ಶೇರು ಧಾರಣೆ ಶೇ.6.43ರಷ್ಟು ಏರಿ 3,395.90 ರೂ. ಮಟ್ಟಕ್ಕೆ ತಲುಪಿತು.
ಮಾರ್ಚ್ 2018ಕ್ಕೆ ಕೊನೆಗೊಂಡ ತ್ತೈಮಾಸಿಕದಲ್ಲಿ ಟಿಸಿಎಸ್ ಕಂಪೆನಿಯ ಕನ್ಸಾಲಿಡೇಟೆಡ್ ನಿವ್ವಳ ಲಾಭ 6,904 ಕೋಟಿ ರೂ. (ಶೇ.4.4ರ ಏರಿಕೆ) ಏರಿದ್ದು ಕಂಪೆನಿಯ 1 : 1 ರ ಪ್ರಮಾಣದಲ್ಲಿ ಬೋನಸ್ ಶೇರು ಪ್ರಕಟಿಸಿದೆ.