ಮುಂಬೈ: ಬಾಂಬೆ ಷೇರುಪೇಟೆಯ ವಹಿವಾಟು ಗುರುವಾರ (ನವೆಂಬರ್ 16) ಪಾಸಿಟಿವ್ ಅಂಶದೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ. ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 299.80 ಅಂಕಗಳ ಏರಿಕೆಯೊಂದಿಗೆ 65,975.73 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಇದನ್ನೂ ಓದಿ:ಭಾರತದ ಫೈನಲ್ ಪಂದ್ಯವನ್ನು ನೋಡಬೇಡಿ: Amitabhಗೆ ಎಚ್ಚರಿಕೆ ಕೊಟ್ಟ ಫ್ಯಾನ್ಸ್; ಕಾರಣವೇನು?
ಎನ್ ಎಸ್ ಇ ನಿಫಟಿ 87.10 ಅಂಕಗಳ ಏರಿಕೆಯೊಂದಿಗೆ 19,762.55 ಅಂಕಗಳಲ್ಲಿ ವಹಿವಾಟು ಅಂತ್ಯಗೊಂಡಿದೆ. ಸೆನ್ಸೆಕ್ಸ್, ನಿಫ್ಟಿ ಏರಿಕೆಯಿಂದ ಟೆಕ್ ಮಹೀಂದ್ರ, ಎಚ್ ಸಿಎಲ್ ಟೆಕ್, ಟಿಸಿಎಸ್, ಇನ್ಫೋಸಿಸ್ ಮತ್ತು ಬಜಾಜ್ ಫೈನಾನ್ಸ್ ಷೇರುಗಳು ಲಾಭ ಗಳಿಸಿವೆ.
ಮತ್ತೊಂದೆಡೆ ಆಕ್ಸಿಸ್ ಬ್ಯಾಂಕ್, ಪವರ್ ಗ್ರಿಡ್, ಐಟಿಸಿ, ಜೆಎಸ್ ಡಬ್ಲ್ಯು ಸ್ಟೀಲ್, ಐಸಿಐಸಿಐ ಬ್ಯಾಂಕ್ ಷೇರುಗಳು ನಷ್ಟ ಅನುಭವಿಸಿದೆ. ನಿಫ್ಟಿಯಲ್ಲಿ ಟೆಕ್ ಮಹೀಂದ್ರ, ಟಿಸಿಎಸ್, ಎಚ್ ಸಿಎಲ್ ಟೆಕ್, ಇನ್ಫೋಸಿಸ್ ಷೇರುಗಳು ಲಾಭಗಳಿಸಿದೆ.
ಗುರುವಾರ ಬೆಳಗ್ಗೆ ಆರಂಭಿಕವಾಗಿ ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 35.24 ಅಂಕಗಳ ಇಳಿಕೆಯಾಗಿದ್ದು, 65,640.69 ಅಂಕಗಳಲ್ಲಿ ವಹಿವಾಟು ನಡೆದಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ 24.30 ಅಂಕ ಕುಸಿತದೊಂದಿಗೆ 19,651.15 ಅಂಕಗಳಲ್ಲಿ ವಹಿವಾಟು ಮುಂದುವರಿದಿತ್ತು.