ಮುಂಬಯಿ : ದೇಶದ ಆರ್ಥಿಕತೆಗೆ ಉತ್ತೇಜನ ನೀಡಲು ಸರಕಾರ 9 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಹಾಗೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು ಬುಧವಾರದ ವಹಿವಾಟಿನಲ್ಲಿ ಸಾರ್ವಕಾಲಿಕ ಎತ್ತರವನ್ನು ಏರಿರುವ ಸಾಧನೆಯನ್ನು ದಾಖಲಿಸಿವೆ.
ಸೆನ್ಸೆಕ್ಸ್ ಸೂಚ್ಯಂಕ ಇಂದಿನ ವಹಿವಾಟಿನ ಅಂತ್ಯಕ್ಕೆ 435.16 ಅಂಕಗಳ ಭರ್ಜರಿ ಏರಿಕೆಯೊಂದಿಗೆ 33,042.50 ಅಂಕಗಳ ಮಟ್ಟವನ್ನು ಏರಿತು. ನಿಫ್ಟಿ ಸೂಚ್ಯಂಕ 87.70 ಅಂಕಗಳ ಏರಿಕೆಯೊಂದಿಗೆ 10,20.40 ಅಂಕಗಳ ಮಟ್ಟವನ್ನು ತಲುಪಿತು.
ಬ್ಯಾಂಕ್ ನಿಫ್ಟಿ ಇಂದು 813.75 ಅಂಕಗಳ ಏರಿಕೆಯನ್ನು ಕ,ಡು 25,035.90 ಅಂಕಗಳ ಎತ್ತರವನ್ನು ತಲುಪಿದುದು ದಾಖಲೆ ಎನಿಸಿತು.
ಇಂದಿನ ಟಾಪ್ ಗೇನರ್ : ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಅಲ್‌ಟ್ರಾ ಟೆಕ್ ಸಿಮೆಂಟ್, ಲಾರ್ಸನ್, ಎಕ್ಸಿಸ್ ಬ್ಯಾಂಕ್.
ಟಾಪ್ ಲೂಸರ್‌ಗಳು : ಎಸ್ ಬ್ಯಾಂಕ್, ಬಜಾಜ್ ಫೈನಾನ್ಸ್, ಕೋಟಕ್ ಮಹೀಂದ್ರ, ಇಂಡಸ್ ಇಂಡ್ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್.