Advertisement
ಹಂದಿ ಮಾಂಸ, ಪೈಪ್ ಸೇರಿದಂತೆ 128ಕ್ಕೂ ಹೆಚ್ಚು ಉತ್ಪನ್ನಗಳ ದರವನ್ನು ಚೀನಾ ಏರಿಕೆ ಮಾಡಿದೆ. ಹಣ್ಣು, ಒಣಹಣ್ಣುಗಳು, ವೈನ್ ಮತ್ತು ಸ್ಟೀಲ್ ಟ್ಯೂಬ್‌ಗಳು ಸೇರಿದಂತೆ ಇತರ ಉತ್ಪನ್ನಗಳಿಗೆ ಶೇ. 15 ರಷ್ಟು, ಹಂದಿ ಮಾಂಸ ಮತ್ತು ಎರಡನೇ ದರ್ಜೆಯ ಅಲ್ಯೂಮಿನಿಯಂ ಉತ್ಪನ್ನಗಳ ಮೇಲೆ ಶೇ.25ರಷ್ಟು ದರ ಏರಿಕೆ ಮಾಡಲಾಗಿದೆ. ಇದರ ಜಾರಿ ಎರಡು ಹಂತದಲ್ಲಿ ಉಂಟಾ ಗುತ್ತದೆ. ಎರಡೂ ದೇಶಗಳು ನಿಗದಿತ ಅವಧಿಯಲ್ಲಿ ದರ ಏರಿಕೆ ವಿಚಾರವಾಗಿ ಒಪ್ಪಂದಕ್ಕೆ ಬರದಿದ್ದರೆ ಶೇ.15ರಷ್ಟು ದರ ಏರಿಕೆ ಜಾರಿಗೊಳ್ಳಲಿದೆ. ಅಮೆರಿಕ ಕೈಗೊಂಡಿರುವ ಕ್ರಮಗಳನ್ನು ವಿಶ್ಲೇಷಿಸಿ, ಅದರ ಪರಿಣಾಮಗಳು ಅರಿವಿಗೆ ಬಂದ ನಂತರ ಶೇ.25ರ ದರವನ್ನು ಇತರ ಉತ್ಪನ್ನಗಳಿಗೆ ವಿಧಿಸಲಾಗುತ್ತದೆ. ಕಳೆದ ವರ್ಷವೇ ಚೀನಾ ಉತ್ಪನ್ನಗಳಲ್ಲಿನ ಬೌದ್ಧಿಕ ಸ್ವತ್ತು ಹಕ್ಕುಗಳ ಉಲ್ಲಂಘನೆಯ ಬಗ್ಗೆ ಅಮೆರಿಕ ವಿಶ್ಲೇಷಣೆ ನಡೆಸಿತ್ತಾದರೂ, ಈಗ ಟ್ರಂಪ್ ಅಧಿಕಾರಕ್ಕೇರಿದ ನಂತರದಲ್ಲಿ ದರ ಏರಿಕೆ ನೀತಿ ಜಾರಿಗೊಳಿಸಲಾಗಿದೆ.
ಮುಂಬೈ: ಅಮೆರಿಕ ಮತ್ತು ಚೀನಾ ನಡುವೆ ಆರಂಭವಾಗಿರುವ ವ್ಯಾಪಾರ ಯುದ್ಧವು ಷೇರುಪೇಟೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಟ್ರೇಡ್ ವಾರ್ ತೀವ್ರಗೊಳ್ಳುವ ಭೀತಿಯಿಂದಾಗಿ ಹೂಡಿಕೆದಾರರು ಷೇರುಗಳ ಮಾರಾಟದಲ್ಲಿ ತೊಡಗಿದ ಪರಿಣಾಮ, ಈ ವರ್ಷ ಇದೇ ಮೊದಲ ಬಾರಿಗೆ ನಿಫ್ಟಿ 10 ಸಾವಿರದ ಗಡಿಗಿಂತ ಕೆಳಗಿಳಿದಿದೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 409 ಅಂಕ ಕುಸಿತಗೊಂಡು, ದಿನಾಂತ್ಯಕ್ಕೆ 32,596 ತಲುಪಿತು. ಕಳೆದ ವರ್ಷದ ಅಕ್ಟೋಬರ್ 23ರ ಬಳಿಕ ಸೆನ್ಸೆಕ್ಸ್ ಈ ಪ್ರಮಾಣದಲ್ಲಿ ವಹಿವಾಟು ಅಂತ್ಯಗೊಳಿಸಿದ್ದು ಇದೇ ಮೊದಲು. ಇದೇ ವೇಳೆ, ಶುಕ್ರವಾರ ನಿಫ್ಟಿ ಬರೋಬ್ಬರಿ 116 ಅಂಕ ಕುಸಿತ ದಾಖಲಿಸಿ, 9,998ರಲ್ಲಿ ವಹಿವಾಟು ಅಂತ್ಯಗೊಳಿಸಿತು. ಇದರಿಂದಾಗಿ ಹೂಡಿಕೆದಾರರು ಸುಮಾರು 1.57 ಲಕ್ಷ ಕೋಟಿಗಳಷ್ಟು ನಷ್ಟ ಅನುಭವಿಸಿದರು.