ಮುಂಬಯಿ: ಏಷ್ಯನ್ ಷೇರುಮಾರುಕಟ್ಟೆಯಲ್ಲಿನ ಭರ್ಜರಿ ವಹಿವಾಟಿನ ಪರಿಣಾಮ ಮುಂಬಯಿ ಷೇರುಪೇಟೆಯ ಮೇಲೆ ಬೀರಿದ್ದು, ಬುಧವಾರ(ಮೇ 26) ಸಂವೇದಿ ಸೂಚ್ಯಂಕ 380 ಅಂಕಗಳಷ್ಟು ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿದೆ.
ಇದನ್ನೂ ಓದಿ:ಆಮ್ಲಜನಕ ಪೂರೈಕೆ ಘಟಕ ಆರಂಭ : ಪೊಲೀಸರಿಗೆ ನಿರ್ವಹಣೆ ಕುರಿತು ತರಬೇತಿ
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 379.99 ಅಂಕಗಳ ಏರಿಕೆಯಾಗಿದ್ದು, 51,017,51ರ ಗಡಿ ತಲುಪುವ ಮೂಲಕ ದಿನಾಂತ್ಯದ ವಹಿವಾಟು ಅಂತ್ಯಗೊಳಿಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 93 ಅಂಕ ಏರಿಕೆಯಾಗಿದ್ದು, 15,301.45ರ ಗಡಿ ದಾಟಿದೆ.
ಸೆನ್ಸೆಕ್ಸ್ ಏರಿಕೆಯಿಂದ ಬಜಾಜ್ ಫಿನ್ ಸರ್ವ್, ಬಜಾಜ್ ಫೈನಾನ್ಸ್, ಇನ್ಫೋಸಿಸ್, ಮಹೀಂದ್ರ ಆ್ಯಂಡ್ ಮಹೀಂದ್ರ, ಮಾರುತಿ ಮತ್ತು ಎಚ್ ಡಿಎಫ್ ಸಿ ಷೇರುಗಳು ಲಾಭಗಳಿಸಿವೆ.
ಕೋವಿಡ್ ಎರಡನೇ ಅಲೆಯ ನಡುವೆಯೂ ಆರ್ಥಿಕ ಚೇತರಿಕೆಯಾಗುತ್ತಿರುವುದು ಹೂಡಿಕೆದಾರರಲ್ಲಿ ಭರವಸೆ ಮೂಡಿಸಿದೆ. ಇಂದಿನ ವಹಿವಾಟಿನಲ್ಲಿ ಪವರ್ ಗ್ರಿಡ್, ಎನ್ ಟಿಪಿಸಿ, ಒಎನ್ ಜಿಸಿ ಮತ್ತು ಕೋಟಕ್ ಬ್ಯಾಂಕ್ ಷೇರುಗಳು ನಷ್ಟ ಅನುಭವಿಸಿದೆ.