Advertisement

ಮತ್ತೆ ಕಾಡಿದ ವಾಣಿಜ್ಯ ಸಮರ ಭೀತಿ: ಸೆನ್ಸೆಕ್ಸ್‌ 21 ಅಂಕ ನಷ್ಟ

04:46 PM Mar 14, 2018 | udayavani editorial |

ಮುಂಬಯಿ : ಜಾಗತಿಕ ವಾಣಿಜ್ಯ ಸಮರ ಪರಾಕಾಷ್ಠೆಗೆ ಏರುವ ಭೀತಿ ದಟ್ಟೈಸಿರುವ ಕಾರಣ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 21 ಅಂಕಗಳ ನಷ್ಟದೊಂದಿಗೆ 33,835.74 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. 

Advertisement

ಆಯಿಲ್‌ ಆ್ಯಂಡ್‌ ಗ್ಯಾಸ್‌, ರಿಯಲ್ಟಿ, ಆಟೋ ಮತ್ತು ಮೆಟಲ್‌ ಶೇರುಗಳು ಭಾರೀ ಮಾರಾಟ ಒತ್ತಡವನ್ನು ಕಂಡವು. ಅಮೆರಿಕ ಶೇರು ಮಾರುಕಟ್ಟೆಯ ನಿನ್ನೆಯ ಕುಸಿತವನ್ನು ಅನುಸರಿಸಿ ಏಶ್ಯನ್‌ ಶೇರು ಮಾರುಕಟ್ಟೆಗಳು ಕೂಡ ಇಂದು ನಷ್ಟಕ್ಕೆ ಗುರಿಯಾದವು.

ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 15.95 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 10,410.90 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ಇಂದು ಒಟ್ಟು 2,837 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 1,320 ಶೇರುಗಳು ಮುನ್ನಡೆ ಸಾಧಿಸಿದವು; 1,357 ಶೇರುಗಳು ಹಿನ್ನಡೆಗೆ ಗುರಿಯಾದವು. 160 ಕಂಪೆನಿಯ ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next