ಮುಂಬಯಿ : ಕಚ್ಚಾ ತೈಲ ಬೆಲೆ ಇಳಿಕೆ, ಡಾಲರ್ ಎದುರು ರೂಪಾಯಿ ಚೇತರಿಕೆಯೇ ಮೊದಲಾದ ಧನಾತ್ಮಕ ಕಾರಣಗಳಿಂದಾಗಿ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 200ಕ್ಕೂ ಅಧಿಕ ಅಂಕಗಳ ಜಿಗಿತವನ್ನು ದಾಖಲಿಸಿತು.
ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್ 190.96 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 35,503.09 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 36.60 ಅಂಕಗಳ ಮುನ್ನಡೆಯನ್ನು ಪಡೆದು 10,637.80 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 46 ಪೈಸೆಗಳ ಏರಿಕೆಯನ್ನು ಸಾಧಿಸಿ 70.44 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಮುಂಬಯಿ ಶೇರು ಪೇಟೆಯಲ್ಲಿಂದು ಬೆಳಗ್ಗಿನ ವಹಿವಾಟಿನಲ್ಲಿ ಎಚ್‌ಸಿಎಲ್ ಟೆಕ್, ಸನ್ ಫಾರ್ಮಾ, ಎಕ್ಸಿಸ್ ಬ್ಯಾಂಕ್, ಎಸ್ ಬ್ಯಾಂಕ್, ಮಾರುತಿ ಸುಜುಕಿ ಶೇರುಗಳು ಅತ್ಯಂತ ಸಕ್ರಿಯವಾಗಿದ್ದವು.
ಬೆಳಗ್ಗಿನ ಟಾಪ್ ಗೇನರ್‌ಗಳು : ಝೀ ಎಂಟರ್‌ಟೇನ್‌ಮೆಂಟ್, ಡಾ. ರೆಡ್ಡೀಸ್ ಲ್ಯಾಬ್, ಸಿಪ್ಲಾ, ಕೋಟಕ್ ಮಹೀಂದ್ರ, ಏಶ್ಯನ್ ಪೇಂಟ್ಸ್; ಟಾಪ್ ಲೂಸರ್‌ಗಳು : ಎಚ್‌ಸಿಎಲ್ ಟೆಕ್, ಗೇಲ್, ಇಂಡಿಯಾ ಬುಲ್ಸ್ ಹೌಸಿಂಗ್, ಜೆಎಸ್‌ಡಬ್ಲ್ಯು ಸ್ಟೀಲ್, ವಿಪ್ರೋ.