Advertisement

ತೆಂಗಿನ ಚಿಪ್ಪಿಗೂ ಮಾರ್ಕೆಟ್‌ ಸಿಕ್ತು.!

09:03 PM Dec 07, 2020 | Suhan S |

ಗ್ರಾಮೀಣ ಭಾಗಗಳಲ್ಲಿ ಉರುವಲಿಗಾಗಿ ಬಳಕೆಯಾಗುವ ತೆಂಗಿನ ಚಿಪ್ಪು (ಗರಟೆ)ಗಳಿಗೆ, ಅವುಗಳಿಂದ ತಯಾರಿಸಲಾದ ಹೊಸ ಬಗೆಯ ಉತ್ಪನ್ನಗಳಿಗೆ ಇದೀಗ ಮಾರುಕಟ್ಟೆ ಸೃಷ್ಟಿಯಾಗಿದೆ.

Advertisement

ಇತ್ತೀಚೆಗೆ ಪ್ಲಿಪ್‌ಕಾರ್ಟ್‌, ಅಮೆಜಾನ್‌ನಂತಹ ಆನ್‌ಲೈನ್‌ ಮಾರುಕಟ್ಟೆಗಳಲ್ಲೂ ತೆಂಗಿನ ಚಿಪ್ಪಿನಿಂದ ತಯಾರಾದ ವಸ್ತುಗಳು ಗಮನ ಸೆಳೆದಿದ್ದವು. ಇದರ ಮುಂದುವರಿದ ಭಾಗದಂತೆ ಇದೀಗ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಹೊನ್ನೇಕೈ ಗ್ರಾಮದ ವಿವೇಕ ಹೆಗಡೆ, ಹೊಸದೊಂದು ಸಾಹಸ ಮಾಡಿದ್ದಾರೆ. ತೆಂಗಿನ ಚಿಪ್ಪಿನಿಂದ ವಿವಿಧ ಗೃಹೋಪಯೋಗಿ ಉತ್ಪನ್ನಗಳನ್ನು ತಯಾರಿಸುವ ಉದ್ಯಮ ಆರಂಭಿಸಿದ್ದು ಮಾತ್ರವಲ್ಲ; ಅವುಗಳಿಗೆ ಮಾರ್ಕೆಟ್‌ ಸೃಷ್ಟಿಸುವಲ್ಲಿ ಯಶಸ್ವಿಯೂ ಆಗಿದ್ದಾರೆ. ಆ ಮೂಲಕ “ತೆಂಗಿನ ಚಿಪ್ಪಿಗೂ ಸಖತ್‌ ಪವರ್‌ ಇದೆ ಗುರೂ’ ಎಂದು ತೋರಿಸಿಕೊಟ್ಟಿದ್ದಾರೆ.

ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದವರು ವಿವೇಕ್‌ ಹೆಗಡೆ. ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರಭಾರತ ಸ್ವದೇಶಿ ಆಂದೋಲನ ದಿಂದ ಪ್ರೇರಣೆ ಪಡೆದಿರುವ ಅವರು, ಲಾಕ್‌ ಡೌನ್‌ ಅವಧಿಯಲ್ಲಿಚಿಕ್ಕ ಪ್ರಮಾಣದಲ್ಲಿ ಉದ್ಯಮವನ್ನು ಆರಂಭಿಸಿದರು. ಪ್ರಾರಂಭದಲ್ಲಿ ತಮ್ಮ ಮನೆಯಲ್ಲಿ ಲಭ್ಯವಿದ್ದತೆಂಗಿನ ಚಿಪ್ಪಿನಿಂದ ವಸ್ತುಗಳನ್ನು ತಯಾರಿಸಿ,ಅವನ್ನು ಮಾರಾಟ ಮಾಡಿದರು. ಕ್ರಮೇಣ, ಅವುಗಳಿಗೆಬೇಡಿಕೆ ಹೆಚ್ಚಿದಂತೆ, ಸುತ್ತಮುತ್ತಲಿನ ಸುಮಾರು1500 ಮನೆಗಳಿಂದ ತೆಂಗಿನ ಚಿಪ್ಪನ್ನು ಖರೀದಿಸುತ್ತಿದ್ದಾರೆ.

“ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಏನಾದರೂ ಹೊಸ ಉತ್ಪನ್ನಗಳನ್ನು ತಯಾರಿಸಬೇಕೆಂದು ಮನಸ್ಸು ತುಡಿಯುತ್ತಿತ್ತು. ಇಂಟರ್ನೆಟ್‌ನಲ್ಲಿ ಮಾಹಿತಿ ಹುಡುಕುತ್ತಿದ್ದಾಗ ತೆಂಗಿನ ಚಿಪ್ಪಿನ ಉತ್ಪನ್ನಗಳ ಬಗ್ಗೆ ಮಾಹಿತಿ ದೊರೆಯಿತು. ತೆಂಗಿನ ಚಿಪ್ಪಿಗೆ ಮಾರುಕಟ್ಟೆ ಸೃಷ್ಟಿಯಾದರೆ, ಅದರಿಂದ ರೈತರಿಗೂ ಆದಾಯ ಸಿಗುತ್ತದೆ ಅನ್ನಿಸಿತು. ಅದರಲ್ಲೇ ಹೊಸದೊಂದು ಬ್ಯುಸಿನೆಸ್‌ ಆರಂಭಿಸಿ, ಮುಂದುವರಿಯಬೇಕು ಎಂದು ಆಗಲೇ ನಿರ್ಧರಿಸಿದೆ’ ಎನ್ನುತ್ತಾರೆ ವಿವೇಕ ಹೆಗಡೆ

50ಕ್ಕೂ ಹೆಚ್ಚು ವೈವಿಧ್ಯಮಯ ವಸ್ತುಗಳು :  ಸದ್ಯ ತಮ್ಮ ಮನೆಯಲ್ಲಿ ತೆಂಗಿನ ಚಿಪ್ಪಿನಿಂದ ಚಹಾಕಪ್‌, ಪೆನ್‌ಸ್ಟ್ಯಾಂಡ್‌, ಸೌಟುಗಳು, ಆಕಾಶ ಬುಟ್ಟಿ, ಪೋರ್ಕ್‌, ಕಿವಿಯೋಲೆಗಳು, ಸಾಮಗ್ರಿಗಳನ್ನು ತುಂಬಿಡುವ ಚಿಕ್ಕ ಚಿಕ್ಕ ಭರಣಿಗಳು, ಬೋಗುಣಿಗಳು, ಡಬ್ಬಗಳು, ಗೃಹ ಅಲಂಕಾರಿಕ ವಸ್ತುಗಳು… ಹೀಗೆ 50ಕ್ಕೂ ಅಧಿಕ ವೈವಿಧ್ಯಮಯ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ಸಹಾಯಕರಾಗಿ ಆನಂದ ಹಲಗೇರಿ ಮತ್ತು ಗೌರೀಶ ಆಚಾರಿ ಅವರನ್ನು ನೇಮಿಸಿಕೊಂಡಿದ್ದು, ಅವರಿಗೂ ಉದ್ಯೋಗಕಲ್ಪಿಸಿದ್ದಾರೆ. ಇಲ್ಲಿ ತಯಾರಾಗುವ ಗೃಹೋಪಯೋಗಿ ವಸ್ತುಗಳಿಗೆ ಬೆಂಗಳೂರು, ಚೆನ್ನೈ,ಹೈದ್ರಾಬಾದ್‌, ಗುಜರಾತ್‌ ಮುಂತಾದಕಡೆಗಳಿಂದ ಉತ್ತಮ ಬೇಡಿಕೆ ಇದೆ ಎನ್ನುತ್ತಾರೆ ವಿವೇಕ ಹೆಗಡೆ.

Advertisement

ಘಟಕ ವಿಸ್ತರಣೆ :  ನಾವು ತಯಾರಿಸುವ ಉತ್ಪನ್ನಗಳಿಗೆ ಇದೀಗ ಹೊರರಾಜ್ಯಗಳಲ್ಲೂ ಬೇಡಿಕೆ ಶುರುವಾಗಿದೆ. ಮುಂದಿನ\ ದಿನಗಳಲ್ಲಿ ಈ ಘಟಕವನ್ನು ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಿ, ಯುವಕರಿಗೆ ಉದ್ಯೋಗವನ್ನು ನೀಡುವ ಉದ್ದೇಶವಿದೆ ಅನ್ನುತ್ತಾರೆ ಹೆಗಡೆ. ಅವರನ್ನು ಸಂಪರ್ಕಿಸಲು:9480398338, 9449695334.

 

-ಎಂ.ಎಸ್‌. ಶೋಭಿತ್‌, ಮೂಡ್ಕಣಿ

Advertisement

Udayavani is now on Telegram. Click here to join our channel and stay updated with the latest news.

Next