ಮುಂಬಯಿ: ಗುರುವಾರ ಭಾರೀ ಕುಸಿತ ಕಂಡಿದ್ದ ಬಾಂಬೆ ಷೇರುಪೇಟೆ ಸೆನ್ಸೆಕ್ಸ್ ಶುಕ್ರವಾರ (ಮೇ 20) ಬರೋಬ್ಬರಿ 1,534 ಅಂಕಗಳಷ್ಟು ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಇದನ್ನೂ ಓದಿ:ಕನ್ಯೆ ನೋಡಲು ಹೋಗಿದ್ದ ಯುವಕ; ಬೈಕ್ ಸಹಿತ ನೀರಿನಲ್ಲಿ ಕೊಚ್ಚಿಹೋದ
ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 1,534.16 ಅಂಕಗಳಷ್ಟು ಏರಿಕೆಯಾಗಿದ್ದು, 54,326.39 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 456.80 ಅಂಕ ಏರಿಕೆಯೊಂದಿಗೆ 16,266.20 ಅಂಕಗಳ ಗಡಿ ದಾಟಿದೆ.
ಸೆನ್ಸೆಕ್ಸ್, ನಿಫ್ಟಿ ಜಿಗಿತದಿಂದ ಡಾ.ರೆಡ್ಡೀಸ್ ಲ್ಯಾಬೋರೇಟರೀಸ್, ರಿಲಯನ್ಸ್ ಇಂಡಸ್ಟ್ರೀಸ್, ಜೆಎಸ್ ಡಬ್ಲ್ಯು ಸ್ಟೀಲ್, ನೆಸ್ಲೆ ಇಂಡಿಯಾ ಮತ್ತು ಟಾಟಾ ಮೋಟಾರ್ಸ್ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಶ್ರೀ ಸಿಮೆಂಟ್ಸ್ ಮತ್ತು ಯುಪಿಎಲ್ ಷೇರುಗಳು ನಷ್ಟ ಕಂಡಿದೆ.
ಗುರುವಾರ ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 1,416 ಅಂಕಗಳಷ್ಟು ಕುಸಿತದೊಂದಿಗೆ 52,792 ಅಂಕಗಳಲ್ಲಿ ವಹಿವಾಟು ಮುಕ್ತಾಯಗೊಂಡಿತ್ತು. ಇದರ ಪರಿಣಾಮ ಹೂಡಿಕೆದಾರರಿಗೆ 6.71 ಲಕ್ಷ ಕೋಟಿ ರೂಪಾಯಿಯಷ್ಟು ನಷ್ಟ ಉಂಟಾಗಿತ್ತು.