ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯ ನೆಗೆಟಿವ್ ಟ್ರೆಂಡ್ ಪರಿಣಾಮ ಬುಧವಾರ (ಫೆ.16) ಮುಂಬಯಿ ಷೇರುಪೇಟೆಯ ಸೆನ್ಸೆಕ್ಸ್ ಮತ್ತು ನಿಫ್ಟಿ ಇಳಿಕೆಯೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ.
ಇದನ್ನೂ ಓದಿ:ಐಪಿಎಲ್ 2022: ಹೊಸ ನಾಯಕನನ್ನು ನೇಮಿಸಿದ ಕೋಲ್ಕತ್ತಾ ನೈಟ್ ರೈಡರ್ಸ್
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಮಕ 145.37 ಅಂಕ ಇಳಿಕೆಯಾಗಿದ್ದು, 57,996.68 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 30.30 ಅಂಕಗಳಷ್ಟು ಕುಸಿತದೊಂದಿಗೆ 17,322.20 ಅಂಕಗಳಲ್ಲಿ ವಹಿವಾಟು ಮುಕ್ತಾಯಗೊಂಡಿದೆ.
ಪವರ್ ಗ್ರಿಡ್ ಕಾರ್ಪೋರೇಷನ್, ಆಲ್ಟ್ರಾಟೆಕ್ ಸಿಮೆಂಟ್, ಎನ್ ಟಿಪಿಸಿ, ಐಸಿಐಸಿಐ ಬ್ಯಾಂಕ್ ಮತ್ತು ಎಸ್ ಬಿಐ ಷೇರುಗಳು ನಷ್ಟ ಕಂಡಿದೆ. ಮತ್ತೊಂದೆಡೆ ಡಿವೀಸ್ ಲ್ಯಾಬ್ಸ್, ಅದಾನಿ ಪೋರ್ಟ್ಸ್, ಒಎನ್ ಜಿಸಿ, ಐಒಸಿ ಮತ್ತು ಎಚ್ ಡಿಎಫ್ ಸಿ ಲೈಫ್ ಷೇರುಗಳು ಲಾಭಗಳಿಸಿದೆ.
ಪವರ್ ಗ್ರಿಡ್ ಕಾರ್ಪೋರೇಶನ್ ಭಾರೀ ಪ್ರಮಾಣದ ನಷ್ಟ ಕಂಡಿದೆ. ಅಲ್ಲದೇ ಉತ್ತಮ ಸೆಕ್ಟರ್ ನಲ್ಲಿ ಫಾರ್ಮಾ ಷೇರುಗಳು ಲಾಭಗಳಿಸಿದೆ. ಡಿವೀಸ್ ಲ್ಯಾಬ್ಸ್ ಕೂಡಾ ಭಾರೀ ಲಾಭಗಳಿಸಿರುವುದಾಗಿ ವರದಿ ತಿಳಿಸಿದೆ.