ಮಾಸ್ಕೋ: ಮೆಟಾ ಸಿಇಒ ಮಾರ್ಕ್ ಜುಗರ್ ಬರ್ಗ್, ಲಿಂಕ್ಡ್ ಇನ್ ಸಿಇಒ ರಯಾನ್ ರೋಸ್ಲಾನ್ ಸ್ಕೀ, ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೇರಿದಂತೆ ಹಲವು ಗಣ್ಯರಿಗೆ ರಷ್ಯಾಕ್ಕೆ ಭೇಟಿ ನೀಡಲು ರಷ್ಯಾದ ವಿದೇಶಾಂಗ ಸಚಿವಾಲಯ ನಿರ್ಬಂಧ ವಿಧಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ರಾಜ್ಯದಲ್ಲೂ ಬುಲ್ಡೋಜರ್ ಪ್ರಯೋಗಕ್ಕೆ ಸಿಎಂ ಜೊತೆ ಚರ್ಚೆ: ಸಚಿವ ಅಶೋಕ್
ಜುಗರ್ ಬರ್ಗ್, ಹ್ಯಾರಿಸ್ ಹಾಗೂ ಇತರ ಗಣ್ಯರು ರಷ್ಯಾಕ್ಕೆ ಭೇಟಿ ನೀಡುವುದನ್ನು ನಿಷೇಧಿಸಲಾಗಿದೆ ಎಂದು ವಿದೇಶಾಂಗ ಇಲಾಖೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ವಿವರಿಸಿದೆ. ಕುತೂಹಲದ ಸಂಗತಿ ಏನೆಂದರೆ ಟ್ವೀಟರ್ ಸಿಇಒ ಪರಾಗ್ ಅಗರ್ವಾಲ್ ಗೆ ಸಚಿವಾಲಯ ಯಾವುದೇ ನಿರ್ಬಂಧ ವಿಧಿಸಿಲ್ಲ.
ರಷ್ಯಾದ ಬಗ್ಗೆ ಭಯಹುಟ್ಟಿಸುವ ಅಜೆಂಡಾ ಹೊಂದಿರುವ ಇವರನ್ನೆಲ್ಲಾ ರಷ್ಯಾ ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ. ತೀವ್ರಗಾಮಿ ಕಾಯ್ದೆಯಡಿ ರಷ್ಯಾ ಈಗಾಗಲೇ ಫೇಸ್ ಬುಕ್ ಮತ್ತು ಇನ್ಸ್ ಸ್ಟಾಗ್ರಾಮ್ ಅನ್ನು ಬ್ಯಾನ್ ಮಾಡಿದ್ದ ಹಿನ್ನೆಲೆಯಲ್ಲಿ ಜುಗರ್ ಬರ್ಗ್ ರಷ್ಯಾ ಭೇಟಿ ನಿರ್ಬಂಧಿಸಿರುವುದರಲ್ಲಿ ಯಾವುದೇ ಆಘಾತಕಾರಿ ಬೆಳವಣಿಗೆಯಲ್ಲ ಎಂದು ವರದಿ ವಿವರಿಸಿದೆ.
ರಷ್ಯಾದಲ್ಲಿ ಅತೀ ಹೆಚ್ಚು ಬಳಸಲಾಗುತ್ತಿರುವ ಫೇಸ್ ಬುಕ್ ಮತ್ತು ಇನ್ಸ್ ಸ್ಟಾಗ್ರಾಮ್ ಉಗ್ರಗಾಮಿ ಚಟುವಟಿಕೆ ನಡೆಸುತ್ತಿರುವುದಾಗಿ ರಷ್ಯಾ ಗಂಭೀರವಾಗಿ ಆರೋಪಿಸಿತ್ತು. ಆದರೆ ರಷ್ಯಾ ವಾಟ್ಸಪ್ ಅನ್ನು ನಿಷೇಧಿಸಿಲ್ಲವಾಗಿತ್ತು. ಫೇಸ್ ಬುಕ್ ನ ಸಹ ಸಂಸ್ಥೆಯಾಗಿರುವ ವಾಟ್ಸಪ್ ಆ್ಯಪ್ ಅನ್ನು ಸಂವಹನಕ್ಕಾಗಿ ಬಳಸಲಾಗುತ್ತಿದೆ. ಇದರಿಂದ ಯಾವುದೇ ತಪ್ಪು ಸಂದೇಶ ರವಾನೆಯಾಗುತ್ತಿಲ್ಲ ಎಂದು ರಷ್ಯಾ ಹೇಳಿದೆ.