Advertisement

ಲಾಕ್‌ಡೌನ್‌ ನಿಯಮ ಗಾಳಿಗೆ ತೂರಿದ ಜನ

04:40 PM May 11, 2020 | Naveen |

ಮರಿಯಮ್ಮನಹಳ್ಳಿ: ದೇಶದಾದ್ಯಂತ 3ನೇ ಹಂತದ ಲಾಕ್‌ಡೌನ್‌ ಜಾರಿಯಲ್ಲಿದ್ದು, ಸರ್ಕಾರ ನೀಡಿದ ಕೆಲ ನಿಯಮಗಳ ಸಡಿಲಿಕೆಯಿಂದ ಮರಿಯಮ್ಮನಹಳ್ಳಿ ಜನ ನಿಯಮಗಳನ್ನು ಸಂಪೂರ್ಣ ಗಾಳಿಗೆ ತೂರಿ ಓಡಾಡುತ್ತಿದ್ದಾರೆ.

Advertisement

ಪಟ್ಟಣದ ಜನನಿಬಿಡ ಪ್ರದೇಶಗಳಾದ ತರಕಾರಿ ಮಾರುಕಟ್ಟೆ, ಕಿರಾಣಿ ಅಂಗಡಿ ಮುಂಗಟ್ಟುಗಳು, ರಸಾಯನಿಕ ಗೊಬ್ಬರದ ಅಂಗಡಿಗಳು, ಬ್ಯಾಂಕುಗಳು, ಸೇವಾ ಕೇಂದ್ರಗಳು, ಮೊಬೈಲ್‌ ಅಂಗಡಿಗಳು, ಮದ್ಯದಂಗಡಿಗಳು, ಬಟ್ಟೆ ಅಂಗಡಿಗಳು, ಪಡಿತರ ವಿತರಣ ಕೇಂದ್ರಗಳಲ್ಲಿ ಜನ ಗುಂಪು-ಗುಂಪಾಗಿ ನಿಲ್ಲುತ್ತಿದ್ದು, ಮಾಸ್ಕ್ ಕೂಡ ಧರಿಸುತ್ತಿಲ್ಲ. ಜನ ಯಾವುದೇ ಸೋಂಕಿನ ಭಯವಿಲ್ಲದೆ ಅಡ್ಡಾಡುತ್ತಿದ್ದಾರೆ.

ಮೊದಲೆರಡು ದಿನ ಮಾತ್ರ ಮಾಸ್ಕ್ ಧರಿಸದವರ ವಿರುದ್ಧ ದಂಡ ವಿಧಿಸಿದ ಪಪಂ ಸಿಬ್ಬಂದಿ ಮುಖ್ಯಾಧಿಕಾರಿ ಉದಯ್‌ಸಿಂಗ್‌ ಬಳ್ಳಾರಿಗೆ ತೆರಳಿದ್ದಾರೆ. ಉಳಿದವರು ಇದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ಇದ್ದಾರೆ. ಪಪಂ ಮುಖ್ಯಾಧಿಕಾರಿ ಉದಯಸಿಂಗ್‌ ಪ್ರತಿಕ್ರಿಯಿಸಿ, ನಮ್ಮಲ್ಲಿ ಕಡಿಮೆ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಅದರಲ್ಲಿ ಇಬ್ಬರನ್ನು ಜನರಿಗೆ ಅರಿವು ಮೂಡಿಸಲು ಹಾಗೂ ದಂಡ ವಸೂಲಾತಿಗೆ ಬಿಟ್ಟಿದ್ದೇವೆ. ಅಲ್ಲದೇ ಇನ್ನಿತರೆ ಕೆಲಸ ಕಾರ್ಯಗಳನ್ನು ಇತರೆ ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ. ನಾಗರಿಕರೂ ಕೂಡ ಸರ್ಕಾರಿ ನಿಯಮಗಳನ್ನು ಪಾಲಿಸಿ ಅವಶ್ಯವಿದ್ದಲ್ಲಿ ಮಾತ್ರ ಮಾರುಕಟ್ಟೆಗೆ ಬಂದು ಕೋವಿಡ್ ತಡಗಟ್ಟಲು ಸಹಕರಿಸಬೇಕು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next