Advertisement

ಹಾರ-ತುರಾಯಿ ಹಾಕಲು ಜೆಸಿಬಿ-ಕ್ರೇನ್‌ ಬಳಕೆ ನಿಷೇಧಿಸಿ

11:55 PM Feb 15, 2023 | Team Udayavani |

ಬೆಂಗಳೂರು: ವಿವಿಧ ಸಭೆ-ಸಮಾರಂಭಗಳಲ್ಲಿ ಗಣ್ಯ ವ್ಯಕ್ತಿಗಳು ಮತ್ತು ರಾಜಕಾರಣಿಗಳಿಗೆ ಹಣ್ಣು -ಹೂವು, ತರಕಾರಿ ಹಾರಗಳನ್ನು ಹಾಕಲು ಜೆಸಿಬಿ-ಕ್ರೇನ್‌ ಬಳಕೆಯನ್ನು ನಿಷೇಧಿಸಬೇಕೆಂದು ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ ಆಗ್ರಹಿಸಿದರು.

Advertisement

ಬುಧವಾರ ಕಲಾಪದ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾವಿಸಿದ ಮರಿತಿಬ್ಬೇಗೌಡ, ಸಮಾರಂಭ, ಮನರಂಜನೆ, ಜಾತ್ರೆ, ಮೆರವಣಿಗೆ ಮತ್ತು ಖಾಸಗಿ ಹಾಗೂ ವಿವಿಧ ಧಾರ್ಮಿಕ ಸಮಾರಂಭಗಳಲ್ಲಿ ಗಣ್ಯ ವ್ಯಕ್ತಿಗಳಿಗೆ ಹಾಗೂ ರಾಜಕಾರಣಿಗಳಿಗೆ ಅಭಿಮಾನಿಗಳು ಜೆಸಿಬಿ ಮತ್ತು ಕ್ರೇನ್‌ಗಳನ್ನು ಅನಧಿಕೃತವಾಗಿ ಬಳಸಿ ದಟ್ಟ ಜನಸಂದಣಿಯಲ್ಲಿ ಜೆಸಿಬಿ-ಕ್ರೇನ್‌ಗಳ ಮೇಲೆ ನಿಂತು ಅಲ್ಲಿಂದ ಹೂವು ಚೆಲ್ಲುವುದು, ಸೇಬು, ಮೂಸಂಬಿ, ಕಿತ್ತಲೆ ಇನ್ನಿತರ ಹಣ್ಣುಗಳಿಂದ ತಯಾರಿಸಿದ ದೊಡ್ಡ ಹಾರ-ತುರಾಯಿಗಳನ್ನು ಹಾಕುತ್ತಾರೆ.

ಜೆಸಿಬಿ-ಕ್ರೇನ್‌ ದುರ್ಬಳಕೆಯಿಂದ, ಅವಘಡಗಳು ಸಂಭವಿಸುತ್ತಿದೆ. ಜತೆಗೆ, ನಗರ ಮತ್ತು ಪಟ್ಟಣ ಪ್ರದೇಶಗಳ ಮುಖ್ಯ ರಸ್ತೆಗಳಲ್ಲಿ ಇದೇ ರೀತಿಯ ದೊಡ್ಡ ಗಾತ್ರದ ಫ್ಲೆಕ್ಸ್‌, ಬ್ಯಾನರ್‌ ಹಾಗೂ ಕಟೌಟ್‌ಗಳನ್ನು ಹಾಕುವುದರಿಂದ ಸಂಘರ್ಷಗಳು, ಅಪಘಾತಗಳು ಹಾಗೂ ಪರಿಸರ ಮಾಲಿನ್ಯದಿಂದಾಗಿ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಈ ಬಗ್ಗೆ ಸರಕಾರಿ ಆದೇಶ ಹೊರಡಿಸಿ ಎಂದು ಆಗ್ರಹಿಸಿದರು.

ಮುಖ್ಯಮಂತ್ರಿಯವರಿಂದ ಇದಕ್ಕೆ ಉತ್ತರ ಕೊಡಿಸುವುದಾಗಿ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next