Advertisement

ಮಾರಿಯಮ್ಮ ದೇವಿಕರಗ ಮಹೋತ್ಸವ

03:51 PM May 21, 2018 | |

ಭದ್ರಾವತಿ: ನ್ಯೂಟೌನ್‌ ಆಂಜನೇಯ ಅಗ್ರಹಾರದ ಶ್ರೀ ಮಾರಿಯಮ್ಮ ದೇವಿಯ ಕರಗ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು. ಅಮ್ಮನವರಿಗೆ ವಿಶೇಷ ಅಲಂಕಾರ, ವಿಶೇಷ ಪೂಜೆ ಮಾಡಲಾಯಿತು. ಭಕ್ತಾದಿಗಳಿಗೆ
ತೀರ್ಥಪ್ರಸಾದ ವಿತರಿಸಲಾಯಿತು.

Advertisement

ಮಧ್ಯಾಹ್ನ ಮಿಲಿó ಕ್ಯಾಂಪ್‌ನ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿರುವ ಶ್ರೀನಿವಾಸ ಸ್ವಾಮಿ ದೇವಸ್ಥಾನದಿಂದ ಜೋಡಿಕರಗದೊಂದಿಗೆ ಮೆರವಣಿಗೆಯ ಮೂಲಕ ಅಮ್ಮನವರನ್ನು ದೇವಾಲಯಕ್ಕೆ ಕರೆ ತರಲಾಯಿತು.
ಇದಕ್ಕೂ ಮೊದಲು ಭಕ್ತಾದಿಗಳಿಂದ ದೇವಸ್ಥಾನದ ಆವರಣದಲ್ಲಿ ಅಂಬಲಿ ಸಮರ್ಪಣೆ ಮಜ್ಜಿಗೆ, ತಂಪುಪಾನೀಯ
ವಿತರಣೆ ನಡೆಯಿತು. 

ನಗರಸಭಾ ಸದಸ್ಯ ಗುಣಶೇಖರ್‌, ದೇವಸ್ಥಾನ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಪ್ರಧಾನ ಅರ್ಚಕರು, ವಿವಿಧ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಪ್ರಮುಖರು ಇನ್ನಿತರರು ಇದ್ದರು.

ನ್ಯೂಟೌನ್‌, ವಿದ್ಯಾಮಂದಿರ, ಹುಡ್ಕೊ ಕಾಲೋನಿ, ಜನ್ನಾಪುರ ಸೇರಿದಂತೆ ವಿವಿಧೆಡೆಗಳಿಂದ ಸಾವಿರಾರು ಭಕ್ತಾಗಳು
ಪಾಲ್ಗೊಂಡಿದ್ದರು. ಗಮನ ಸೆಳೆದ: ಕರಗ ಮಹೋತ್ಸವದಲ್ಲಿ ಕಾವಡಿ ಹರಕೆಯೊತ್ತ ಭಕ್ತರೊಬ್ಬರು ನೋಡುಗರ
ಗಮನ ಸೆಳೆದರು. ಸುಮಾರು 12 ಉದ್ದ ಕಬ್ಬಿಣದ ತ್ರಿಶೂಲ ಬಾಯಿ ಮೂಲಕ ಚುಚ್ಚಿಕೊಂಡು ಸುಮಾರು ಅರ್ಧ ಕಿ.ಮೀ ನಷ್ಟು ಮೆರವಣಿಗೆಯಲ್ಲಿ ಸಾಗಿ ಅಮ್ಮನವರಿಗೆ ಹರಕೆ ಸಮರ್ಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next