Advertisement

ಮಾರ್ಗೋಳಿ-ಪುರಾಣಿ ವಳಾಲ್‌ ರಸ್ತೆ ದುರವಸ್ಥೆ: ಸಂಚಾರಕ್ಕೆ ಸಂಕಷ್ಟ‌

07:25 AM Jul 25, 2017 | |

ಬಸ್ರೂರು:  ಮಾರ್ಗೋಳಿಯ ಇಗರ್ಜಿ ಬಳಿ ಸುಮಾರು 1ಕಿ.ಮೀ. ಉದ್ದದ ಪುರಾಣಿ ವಳಾಲ್‌ ರಸ್ತೆ ಹೊಯ್ಕೆರೆ ಚಿಕ್ಕು ದೇವಸ್ಥಾನದವರೆಗೆ ಸಾಗಿದ್ದು  ಪ್ರಸ್ತುತ ರಸ್ತೆ ಉದ್ದಕ್ಕೂ ಹೊಂಡ ಬಿದ್ದು ಸಂಚಾರ ಅಸಾಧ್ಯವಾಗಿದೆ.

Advertisement

ಈ ರಸ್ತೆಯ ಆಸುಪಾಸಿನಲ್ಲಿ ಸುಮಾರು ನೂರಕ್ಕೂ ಹೆಚ್ಚು ಮನೆಗಳಿವೆ. ಸಂಚಾರಕ್ಕೆ ಈ ರಸ್ತೆಯನ್ನೇ ಅವಲಂಬಿಸಿದ್ದಾರೆ.ಈಗಿನ ರಸ್ತೆಗೆ ನಾಲ್ಕು ವರ್ಷಗಳ ಹಿಂದೆ ಗ್ರಾ.ಪಂ. ವತಿಯಿಂದ ಮಣ್ಣು ಹಾಕಿ ದುರಸ್ತಿಗೊಳಿಸಲಾಗಿತ್ತು  ಬಿಟ್ಟರೆ ಮತ್ತೆ ದುರಸ್ತಿ ಕಾರ್ಯ ನಡೆದಿಲ್ಲ. ಪ್ರತಿ ಮಳೆಗಾಲದಲ್ಲಿ  ರಸ್ತೆ ದುಃಸ್ಥಿತಿಯನ್ನು ಕಂಡುಕೊಳ್ಳುತ್ತಿದ್ದು ಸಂಚಾರಕ್ಕೆ ಸಂಕಷ್ಟ ತಂದಿದೆ.ಪ್ರಸ್ತುತ ಮಳೆಗಾಲದಲ್ಲಿ ಹೊಂಡ ಬಿದ್ದ ಈ ರಸ್ತೆಯ ಎರಡೂ ಬದಿಗಳಲ್ಲಿ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲಿ ಇಲ್ಲವಾಗಿದೆ.

ಕಳೆದ ಹತ್ತಾರು ವರ್ಷಗಳಿಂದ ಪುರಾಣಿ ವಳಾಲ್‌ ರಸ್ತೆ ಹೀಗೆಯೇ ಸಂಚಾರಕ್ಕೆ ಅಸಾಧ್ಯವಾಗಿದ್ದು ಸ್ಥಳೀಯರು ಈಗಾಗಲೇ ಶಾಸಕರು, ಜಿ.ಪಂ., ತಾ.ಪಂ. ಹಾಗೂ ಗ್ರಾ.ಪಂ. ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.  ಈಗ ಮಳೆಗಾಲದಲ್ಲಿ ಶಾಲಾ ಕಾಲೇಜಿಗೆ ಹೋಗುವ ಮಕ್ಕಳಿಗೂ ಸಂಚಾರಕ್ಕೆ ಅಯೋಗ್ಯವಾದ ಈ ರಸ್ತೆಯ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶೀಘ್ರ ದುರಸ್ತಿಗೊಳಿಸದಿದ್ದಲ್ಲಿ  ರಸ್ತೆ ಬಂದ್‌
ಪುರಾಣಿ ವಳಾಲ್‌ ರಸ್ತೆಯ ಈ ದುರವಸ್ಥೆಯ ಬಗ್ಗೆ ಎಲ್ಲಾ ಜನಪ್ರತಿನಿಧಿಗಳಿಗೂ ತಿಳಿಸಿರುತ್ತೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಮಳೆಗಾಲದಲ್ಲಂತೂ ಇಲ್ಲಿ ಸಂಚಾರವೇ ಅಸಾಧ್ಯವಾಗಿದೆ. ಜನಪ್ರತಿನಿ ಧಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಈ ರಸ್ತೆಗೆ ಶೀಘ್ರ ಕಾಯಕಲ್ಪಗೊಳಿಸದೇ ಇದ್ದಲ್ಲಿ ಈ ರಸ್ತೆಯನ್ನು ಬಂದ್‌ ಮಾಡಿ ಪ್ರತಿಭಟಿಸುತ್ತೇವೆ.

-ತಿಮ್ಮಣ್ಣ,  ಸ್ಥಳೀಯ ವಾಹನ ಚಾಲಕ

Advertisement

Udayavani is now on Telegram. Click here to join our channel and stay updated with the latest news.

Next