Advertisement

ಮಾರ್ಚ್‌ಗೆ ಎಸ್ಟೀಮ್‌ ಮಾಲ್‌ ಸ್ಕೈವಾಕ್‌ ಸಿದ್ಧ

11:59 AM Jan 06, 2017 | |

ಬೆಂಗಳೂರು: ಪಾದಚಾರಿಗಳ ಪಾಲಿಗೆ ಮೃತ್ಯುಕೂಪವಾಗಿ ಬದಲಾಗಿದ್ದ ಹೆಬ್ಟಾಳದ ಎಸ್ಟೀಮ್‌ ಮಾಲ್‌ ಬಳಿ ರಸ್ತೆ ದಾಟು ಸೇರಿದಂತೆ ನಗರದ 12 ಕಡೆಗಳಲ್ಲಿ ಮಾರ್ಚ್‌ ಒಳಗಾಗಿ ಮೇಲ್ಸೇತುವೆ ಸೇವೆ ಪ್ರಾರಂಭವಾಗಲಿದೆ ಎಂದು ಮೇಯರ್‌ ಜಿ.ಪದ್ಮಾವತಿ ಹೇಳಿದ್ದಾರೆ.

Advertisement

ಗುರುವಾರ ಬಿಬಿಎಂಪಿ ವತಿಯಿಂದ ಜಯ ನಗರ 3ನೇ ಹಂತ, ಶಾಂತಿನಗರದ ಕೆ.ಎಚ್‌. ರಸ್ತೆ ಹಾಗೂ ಬಿಬಿಎಂಪಿ ಕೇಂದ್ರ ಕಚೇರಿ ಎದುರು ನಿರ್ಮಿಸುತ್ತಿರುವ ಪಾದಚಾರಿ ಮೇಲ್ಸೇತುವೆಗಳ ನಿರ್ಮಾಣ ಕಾಮಗಾರಿ ಪರಿಶೀಲಿಸಿ ಅವರು ಮಾತನಾಡಿದರು.

ಹೆಬ್ಟಾಳದ ಕೆಂಪಾಪುರ ಎಸ್ಟೀಂ ಮಾಲ್‌ ಬಳಿ ಟ್ಯಾಂಕರ್‌ ಹರಿದು ಪಾದಚಾರಿಗಳು ಮೃತಪಟ್ಟು 2 ವರ್ಷವಾದರೂ ಈವರೆಗೆ ಸ್ಕೈವಾಕ್‌ ನಿರ್ಮಾಣ ಮಾಡಿಲ್ಲ. ಭೂಸ್ವಾಧೀನ 
ಸೇರಿ ಇನ್ನಿತರ ಕಾರಣಕ್ಕಾಗಿ ಕಾಮಗಾರಿ ವಿಳಂಬವಾಗಿದ್ದು ಇದಕ್ಕೆ ನನಗೂ ವಿಷಾದವಿದೆ. ಇದೀಗ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ಮಾರ್ಚ್‌ ತಿಂಗಳ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದರು.

ಜತೆಗೆ ಇನ್ನೂ 8 ಕಡೆಗಳಲ್ಲಿ ನಿರ್ಮಿಸಲಾಗು ತ್ತಿರುವ ಸ್ಕೈವಾಕ್‌ಗಳನ್ನು ಮಾರ್ಚ್‌ ವೇಳೆಗೆ ಲೋಕಾರ್ಪಣೆ ಮಾಡಲಾಗುವುದು. ಜತೆಗೆ ಜಯನಗರ 3ನೇ ಹಂತ, ಶಾಂತಿನಗರ ಕೆ. ಎಚ್‌.ರಸ್ತೆ ಹಾಗೂ ಬಿಬಿಎಂಪಿ ಕೇಂದ್ರ ಕಚೇರಿ ಎದುರಿನ ಸ್ಕೈವಾಕ್‌ಗಳನ್ನು ಫೆಬ್ರವರಿ ತಿಂಗಳ ಮೊದಲ ವಾರದೊಳಗೆ ಪೂರ್ಣಗೊಳಿಸಲಾಗು ವುದು ಎಂದು ಮಾಹಿತಿ ನೀಡಿದರು.

ಪಾಲಿಕೆ ಆದಾಯ ಹೆಚ್ಚಳ ನಿರೀಕ್ಷೆ: ಪ್ರಸ್ತುತ ಪಾದಚಾರಿ ಮೇಲ್ಸೇತುವೆಗಳನ್ನು ಸಾರ್ವಜನಿಕ -ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾಗು ತ್ತಿದೆ. ಬಿಬಿಎಂಪಿ ಕೇವಲ ಜಾಗ ನೀಡಿದ್ದು, ಗುತ್ತಿಗೆ ಪಡೆದ ಸಂಸ್ಥೆ ನಿರ್ಮಾಣ ಕಾರ್ಯ ನಡೆಸುತ್ತಿದೆ. ಇದಕ್ಕೆ ಬದಲಾಗಿ ಗುತ್ತಿಗೆದಾರರು ಸ್ಕೈವಾಕ್‌ ಮೇಲೆ ಜಾಹೀರಾತು ಹಾಕಿಕೊಳ್ಳಬಹುದು.

Advertisement

ಇದರಿಂದ ಪಾಲಿಕೆಗೆ ಜಾಹೀರಾತು ಆದಾಯ ಬರಲಿದೆ. ಜಯನಗರ 3ನೇ ಹಂತ, ಶಾಂತಿನಗರ ಕೆ.ಎಚ್‌.ರಸ್ತೆ ಹಾಗೂ ಬಿಬಿಎಂಪಿ ಕೇಂದ್ರ ಕಚೇರಿ ಎದುರಿನಲ್ಲಿ ನಿರ್ಮಿಸಲಾಗುತ್ತಿರುವ ಪಾದಚಾರಿ ಮೇಲ್ಸೇತುವೆಗಳಿಂದಲೇ ವಾರ್ಷಿಕ 45 ಲಕ್ಷ ರೂ. ಆದಾಯ ಸಂಗ್ರಹವಾಗಲಿದೆ ಎಂದು ಮೇಯರ್‌ ವಿಶ್ವಾಸ ವ್ಯಕ್ತಪಡಿಸಿದರು.

ಮೇಜರ್‌ ಅಕ್ಷಯ್‌ ಗಿರೀಶ್‌ ಕುಮಾರ್‌ ಸಂಬಂಧಿಯೊಬ್ಬರು ಈ-ಮೇಲ್‌ ಮೂಲಕ ನಮಗೆ ಮನವಿ ಸಲ್ಲಿಸಿದ್ದಾರೆ. ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಹೆಬ್ಟಾಳ ಮೇಲ್ಸೇತುವೆ ಅಥವಾ ಹೆಬ್ಟಾಳ ವೃತ್ತದಿಂದ ಸಾದಹಳ್ಳಿ ಜಂಕ್ಷನ್‌ವರೆಗಿನ ರಸ್ತೆಗೆ ಅವರ ಹೆಸರಿಡುವ ಬಗ್ಗೆ ನಿರ್ಧರಿಸಲಾಗುತ್ತದೆ. ಹಿಂದೆ ಘೋಷಿಸಿದಂತೆ ಬಿಬಿಎಂಪಿ ವತಿಯಿಂದ 10 ಲಕ್ಷ ರೂ. ಪರಿಹಾರವನ್ನು ಮುಂದಿನ ವಾರ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು.
-ಜಿ.ಪದ್ಮಾವತಿ, ಬಿಬಿಎಂಪಿ ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next