Advertisement

ಮಾರ್ಚ್‌ 6 ರಿಂದ ತೆನೆ ಪಾದಯಾತ್ರೆ

06:00 AM Mar 03, 2018 | Team Udayavani |

ಬೆಂಗಳೂರು: ಕಾಂಗ್ರೆಸ್‌ ಹಾಗೂ ಬಿಜೆಪಿ ಪರಸ್ಪರ ವಾಕ್ಸಮರ ಹಾಗೂ ಪಾದಯಾತ್ರೆ “ರಾಜಕಾರಣ’ದಲ್ಲಿ ಮುಳುಗಿದ್ದರೆ ಜೆಡಿಎಸ್‌ ಎರಡೂ ಪಕ್ಷಗಳ ವಿರುದ್ಧ ಹೋರಾಟ ಪ್ರಾರಂಭಿಸಿದೆ.

Advertisement

ರಾಜಧಾನಿ ಬೆಂಗಳೂರಿನಲ್ಲಿ ಬಿಜೆಪಿ ಕೈಗೊಂಡಿರುವ ಪಾದಯಾತ್ರೆ, ಕಾಂಗ್ರೆಸ್‌ನ ಟೀಕಾಪ್ರಹಾರಕ್ಕೆ ಪ್ರತಿಯಾಗಿ ಮಾರ್ಚ್‌ 6 ರಿಂದ ಜೆಡಿಎಸ್‌ ಸಹ ಒಂದು ತಿಂಗಳ ಕಾಲ ಪಾದಯಾತ್ರೆ ಹಮ್ಮಿಕೊಂಡಿದೆ.

ಬಿಬಿಎಂಪಿ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದ ಹಗರಣ, ನಂತರ ಕಾಂಗ್ರೆಸ್‌ ಅಧಿಕಾರದಲ್ಲಿ ನಡೆದಿರುವ ಭ್ರಷ್ಟಾಚಾರ, ವೈಫ‌ಲ್ಯಗಳ ಬಗ್ಗೆ ಕರಪತ್ರ ಹಂಚುವ ಮೂಲಕ ಜನಜಾಗೃತಿ ಮೂಡಿಸಲು ಮುಂದಾಗಿದೆ.

ಮಾರ್ಚ್‌ 6 ರಂದು ಬಸವನಗುಡಿಯ ದೊಡ್ಡಗಣೇಶ ದೇವಾಲಯದಿಂದ ಪಾದಯಾತ್ರೆ ಆರಂಭವಾಗಲಿದ್ದು 17 ರವರೆಗೂ ಮುಂದುವರಿಯಲಿದೆ. ನಂತರ ಯುಗಾದಿ ಹಬ್ಬದ ಪ್ರಯುಕ್ತ ಎರಡು ದಿನ ಬಿಡುವು ನೀಡಿ ಮತ್ತೆ ಪ್ರಾರಂಭವಾಗಲಿದೆ ಎಂದು ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ಆರ್‌.ಪ್ರಕಾಶ್‌ ತಿಳಿಸಿದ್ದಾರೆ.

ಬಿಜೆಪಿ ಅವಧಿಯಲ್ಲಿ ಬಿಬಿಎಂಪಿಯಲ್ಲಿ ನಡೆದ ನೈಟ್‌ ಟೆಂಡರ್‌, ಕಡತಗಳಿಗೆ ಬೆಂಕಿ ಬಿದ್ದ ಪ್ರಕರಣ, ಡಿ ನೋಟಿಫಿಕೇಷನ್‌, ಕಾಂಗ್ರೆಸ್‌ ಅವಧಿಯಲ್ಲಿನ ಭ್ರಷ್ಟಾಚಾರ ಎಲ್ಲವನ್ನೂ ಜನರ ಮುಂದಿಡಲಿದ್ದೇವೆ. ಬೆಂಗಳೂರು ನಗರದ ಅಭಿವೃದ್ಧಿಗಾಗಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಮಾಡಿರುವ ಕೆಲಸಗಳನ್ನು ತಿಳಿಸಲಿದ್ದೇವೆ ಎಂದು ಹೇಳಿದ್ದಾರೆ.

Advertisement

ವಾಗ್ಧಾಳಿ
ಮತ್ತೂಂದೆಡೆ ಕೆ.ಆರ್‌.ಪೇಟೆಯಲ್ಲಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಎರಡೂ ಪಕ್ಷಗಳು ಬೆಂಗಳೂರು ಸೇರಿದಂತೆ ರಾಜ್ಯವನ್ನು ಹತ್ತು ವರ್ಷಗಳಲ್ಲಿ ಲೂಟಿ ಮಾಡಿವೆ. ಮತ್ತೆ ಆ ಪಕ್ಷಗಳಿಗೆ ಮಣೆ ಹಾಕಬೇಡಿ ಎಂದು ತಿಳಿಸಿದ್ದಾರೆ.

ರಾಜ್ಯದ ಹಿತಾಸಕ್ತಿ ಕಾಪಾಡಲು ಜೆಡಿಎಸ್‌ನಿಂದ ಮಾತ್ರ ಸಾಧ್ಯ. ಕಾವೇರಿ, ಮಹದಾಯಿ ವಿಚಾರದಲ್ಲಿ ಕೇಂದ್ರ ಸರ್ಕಾರದ ಜತೆ ಗುದ್ದಾಡಿ ನ್ಯಾಯ ತಂದುಕೊಡಲು ತಾಕತ್ತು ಜೆಡಿಎಸ್‌ಗೆ ಮಾತ್ರ ಇದೆ ಎಂದು ಹೇಳಿದ್ದಾರೆ.

ಮತ್ತೂಂದೆಡೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರು, ಹಾಸನ, ಚಿಕ್ಕಮಗಳೂರು, ತುಮಕೂರು ಭಾಗಗಳಲ್ಲಿ ಪ್ರವಾಸ ಕೈಗೊಂಡು ಜೆಡಿಎಸ್‌ ಪರ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ.

ವಿಧಾನಸಭೆ ಕ್ಷೇತ್ರಾವಾರು ಸಭೆ ನಡೆಸಿ ಸ್ಥಳೀಯ ಮುಖಂಡರಲ್ಲಿನ ಸಣ್ಣಪುಟ್ಟ ಅಸಮಾಧಾನ, ಗೊಂದಲ ನಿವಾರಿಸಿ ಗೆಲ್ಲುವುದೊಂದೇ ಗುರಿಯಾಗಬೇಕು. ಪಕ್ಷ ಉಳಿದರೆ ನೀವು, ನಾವೆಲ್ಲಾ.  ಈ ಬಾರಿ ಅಧಿಕಾರಕ್ಕೆ ತರುವವರೆಗೂ ಯಾರೂ ವಿಶ್ರಮಿಸಬಾರದು ಎಂದು ಕಾರ್ಯಕರ್ತರು-ಮುಖಂಡರಲ್ಲಿ ಉತ್ಸಾಹ ತುಂಬಿ ಹೋರಾಟಕ್ಕೆ ಅಣಿಯಾಗಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next