Advertisement

ಮಾ.4-26: ಮುಂಬಯಿಯಲ್ಲಿ ಮಹಿಳಾ ಪ್ರೀಮಿಯರ್‌ ಲೀಗ್‌

11:34 PM Feb 06, 2023 | Team Udayavani |

ಹೊಸದಿಲ್ಲಿ: ಬಹುನಿರೀಕ್ಷಿತ ಉದ್ಘಾಟನ ಮಹಿಳಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌) ಮುಂಬಯಿ ಯಲ್ಲಿ ಮಾ. 4ರಿಂದ 26ರ ವರೆಗೆ ನಡೆಯಲಿದೆ. ಮುಂಬಯಿಯ ಬ್ರಬೋರ್ನ್ ಕ್ರೀಡಾಂಗಣ ಮತ್ತು ಡಿವೈ ಪಾಟೀಲ್‌ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ.

Advertisement

ಉದ್ಘಾಟನ ಪಂದ್ಯವು ಮುಂಬೈ ಇಂಡಿಯನ್ಸ್‌ ಮತ್ತು ಗುಜರಾತ್‌ ಜೈಂಟ್ಸ್‌ ಒಡೆತನದ ಫ್ರಾಂಚೈಸಿ ನಡುವೆ ನಡೆಯುವ ಸಾಧ್ಯತೆಯಿದೆ.

ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ಥಾನ ನಡುವಣ ಪಂದ್ಯ ನಡೆದ ಮರುದಿನ ಮಹಿಳಾ ಪ್ರೀಮಿಯರ್‌ ಲೀಗ್‌ಗಾಗಿ ಮುಂಬಯಿಯಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಐಪಿಎಲ್‌ ಚೇರ್ಮನ್‌ ಅರುಣ್‌ ಧುಮಲ್‌ ಹೇಳಿದ್ದಾರೆ.

ಈ ಲೀಗ್‌ನಲ್ಲಿ ಐದು ತಂಡಗಳು ಭಾಗವಹಿಸಲಿವೆ. ಈ ಕೂಟದ ಮಾಧ್ಯಮ ಹಕ್ಕನ್ನು 951 ಕೋಟಿ ರೂ.ಗಳಿಗೆ ಬಿಸಿಸಿಐ ಮಾರಾಟ ಮಾಡಿದೆ. ಮಹಿಳಾ ಪ್ರೀಮಿಯರ್‌ ಲೀಗ್‌ ಇದೀಗ ವಿಶ್ವದ ಅತ್ಯಂತ ಶ್ರೀಮಂತ ಲೀಗ್‌ಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಐಪಿಎಲ್‌ ಅಗ್ರಸ್ಥಾನದಲ್ಲಿದೆ.

ಐದು ತಂಡಗಳು
ಮೂರು ಐಪಿಎಲ್‌ ತಂಡದ ಮಾಲಕರಲ್ಲದೇ (ಮುಂಬೈ ಇಂಡಿ ಯನ್ಸ್‌, ರಾಯಲ್‌ ಚಾಲೆಂಜರ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್‌) ಕ್ಯಾಪ್ರಿ ಗ್ಲೋಬಲ್‌ ಹೋಲ್ಡಿಂಗ್ಸ್‌ (ಲಕ್ನೋ) ಮತ್ತು ಅದಾನಿ ಸ್ಪೋರ್ಟ್ಸ್ ಲೈನ್‌ ಮಹಿಳಾ ಲೀಗ್‌ನ ಐದು ಫ್ರಾಂಚೈಸಿಗಳು. ಈ ಲೀಗ್‌ಗಾಗಿ 1500 ಆಟಗಾರ್ತಿಯರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು ಅಂತಿಮ ಪಟ್ಟಿಯು ಈ ವಾರಾಂತ್ಯದಲ್ಲಿ ಪ್ರಕಟಿಸುವ ಸಾಧ್ಯತೆಯಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next