Advertisement

ಮರವೂರು: ಮಾಲಿನ್ಯ ನಿಯಂತ್ರಣ ಮಂಡಳಿಗೆ ಪರೀಕ್ಷೆ ಹೊಣೆ

11:27 PM Dec 03, 2021 | Team Udayavani |

ಬೆಂಗಳೂರು: ಪಚ್ಚನಾಡಿ ಘನ ತ್ಯಾಜ್ಯ ಭೂಭರ್ತಿ ಘಟಕದಿಂದ ಬಿಡುಗಡೆ ಯಾಗಿ ಫ‌ಲ್ಗುಣಿ ನದಿ ಹಾಗೂ ಮರವೂರು ಜಲಾಶಯಕ್ಕೆ ಸೇರುತ್ತಿರುವ ನೀರಿನಲ್ಲಿ ವಿಷಕಾರಿ ಅಂಶಗಳು ಪತ್ತೆಯಾಗಿ ರುವ ಹಿನ್ನೆಲೆಯಲ್ಲಿ ನೀರಿನ ಪರೀಕ್ಷೆಯನ್ನು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಬದಲಿಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹೈಕೋರ್ಟ್‌ ವಹಿಸಿದೆ.

Advertisement

ಈ ವಿಚಾರವಾಗಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾ| ರಿತುರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಮಂಗಳೂರು ಮಹಾನಗರ ಪಾಲಿಕೆ ಪ್ರತಿನಿಧಿಸುತ್ತಿರುವ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ ಅವರು, ನ್ಯಾಯಾಲಯ ಅ.28ರಂದು ನೀಡಿದ್ದ ಅದೇಶದಂತೆ ನ.4ರಂದು ಐಐಎಸ್ಸಿ ನಿರ್ದೇಶಕರಿಗೆ ನೀರಿನ ಗುಣಮಟ್ಟ ಪರೀಕ್ಷಿಸಿ ವರದಿ ನೀಡುವಂತೆ ಪತ್ರ ಬರೆಯಲಾಗಿದೆ.

ಇದನ್ನೂ ಓದಿ:ವಕೀಲರ ಪರಿಷತ್‌ ಚುನಾವಣೆಗೆ ಹೈಕೋರ್ಟ್‌ ಮಧ್ಯಾಂತರ ತಡೆ

ನ. 17ರಂದು ಮತ್ತೊಮ್ಮೆ ಐಐಎಸ್ಸಿಗೆ ಪತ್ರ ಬರೆದು ಕೆಲಸವನ್ನು ತುರ್ತಾಗಿ ಆರಂಭಿಸಲು ಮನವಿ ಮಾಡಲಾಗಿತ್ತು. ಇದಕ್ಕೆ ಐಐಎಸ್ಸಿ ನ. 29ರಂದು ಇಮೇಲ್‌ ಮೂಲಕ ಪತ್ರ ಬರೆದಿದ್ದು, ಅದರಲ್ಲಿ ಮಂಗಳೂರಿನ ಮರವೂರು ಜಲಾಶಯದ ಮೂರು ಕಡೆ ನೀರಿನ ಮಾದರಿ ಸಂಗ್ರಹಿಸಲು ಸುಮಾರು 10 ಲಕ್ಷ ರೂ. ಒಳಗೊಂಡು ಒಟ್ಟು ನೀರಿನ ಗುಣಮಟ್ಟ ಪರಿಶೀಲಿಸಿ ವರದಿ ಸಲ್ಲಿಸಲು ಅಂದಾಜು 20 ಲಕ್ಷ ರೂ. ವೆಚ್ಚವಾಗುತ್ತದೆ ಎಂದು ಪ್ರಸ್ತಾವನೆ ಸಲ್ಲಿಸಿದೆ ಎಂದು ತಿಳಿಸಿದ್ದರು.

Advertisement

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಐಐಎಸ್ಸಿಗೆ ನೀರಿನ ಗುಣಮಟ್ಟ ಪರೀಕ್ಷಿಸಲು ನೀಡುವ ಹಣವನ್ನು ಬಳಸಿ ಹಲವು ವರ್ಷಗಳಿಂದ ಶೇಖರಣೆಯಾಗಿರುವ ತ್ಯಾಜ್ಯ ವಿಲೇವಾರಿಗೆ ಆದೇಶಿಸಬಹುದು ಎಂದು ಹೇಳಿತ್ತಲದೆ, ನೀರಿನ ಗುಣಮಟ್ಟ ಪರಿಶೀಲಿಸಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಆದೇಶಿಸಿ ವಿಚಾರಣೆ ಯನ್ನು 2022ರ ಜ.18ಕ್ಕೆ ಮುಂದೂಡಿತು.

ಇದನ್ನೂ ಓದಿ:ಸೂರಜ್‌ ರೇವಣ್ಣ ನಾಮಪಪತ್ರ ಪ್ರಶ್ನಿಸಿ ಅರ್ಜಿ: ಸರಕಾರ, ಆಯೋಗಕ್ಕೆ ನೋಟಿಸ್‌

Advertisement

Udayavani is now on Telegram. Click here to join our channel and stay updated with the latest news.

Next