Advertisement
ವಿದ್ಯಾರ್ಥಿಗಳು ಕಾಲೇಜು ರಜಾ ಅವಧಿಯಲ್ಲಿ ಸ್ನೇಹಿತರ ಜತೆಗೂಡಿ ರಜಾ ಕಳೆಯಲು ಪಿಕ್‌ನಿಕ್, ಟೂರ್‌ಗಳಿಗೆ ಹೋಗುವುದು ಸಾಮಾನ್ಯ. ಆದರೆ ಬೆಂಗಳೂರು ರಾಜಾನುಕುಂಟೆ ಸಾಯಿ ವಿದ್ಯಾ ತಾಂತ್ರಿಕ ಮಹಾವಿದ್ಯಾಲಯದ ಏಳು ವಿದ್ಯಾರ್ಥಿಗಳು ಮತ್ತು ಮೂವರು ವಿದ್ಯಾರ್ಥಿನಿಯರ ತಂಡ 18 ದಿನಗಳ ಕಾಲ ಪರಿಸರ ಸ್ವಚ್ಚತೆಯ ಅಗತ್ಯ, ಘನ ಮತ್ತು ದ್ರವ ತ್ಯಾಜ್ಯ ಸಂಪನ್ಮೂಲ ವಿರ್ವಹಣೆಯಲ್ಲಿ ಜನರ ಸಹಭಾಗಿತ್ವದ ಆವಶ್ಯಕತೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದರ ಜತೆಗೆ ಸ್ವಚ್ಚತಾ ಕಾರ್ಯ ನಡೆಸುವ ಮೂಲಕ ಮರವಂತೆ ಜನರಿಗೆ ಪ್ರೇರಣೆ ನೀಡುತ್ತಿರುವುದು ವಿದ್ಯಾರ್ಥಿ ಸಮೂಹದಲ್ಲಿ ಆಶಾದಾಯಕ ಬೆಳವಣಿಗೆಯಾಗಿದೆ.
ಜನರಲ್ಲಿ ನೈರ್ಮಲ್ಯದ ಅರಿವು ಮೂಡಿಸಲು ಊರಿನ ನಾಲ್ಕು ಶಾಲೆಗಳ ವಿದ್ಯಾರ್ಥಿಗಳಿಗೆ, ಹೆತ್ತವರಿಗೆ, ಆಶಾ ಕಾರ್ಯಕರ್ತೆಯರಿಗೆ, ವಾರ್ಡ್ ಸಭೆಗಳ ಸದಸ್ಯರಿಗೆ ಅದರ ಕುರಿತು ಮಾಹಿತಿ ನೀಡುತ್ತಿದ್ದು ಅದನ್ನು ಮನದಟ್ಟು ಮಾಡಲು ಕಿರು ಬೀದಿನಾಟಕ, ವೀಡಿಯೊ ತುಣುಕುಗಳನ್ನು ಪ್ರದರ್ಶಿಸಿದ್ದಾರೆ. ಮನೆ ಮನೆ ಭೇಟಿ
ಸಾರ್ವಜನಿಕ ರಸ್ತೆ ಪರಿಸರ ಸ್ವಚ್ಚತೆಗೆ ಜಾಗೃತಿ ಮೂಡಿಸಲು ಜಾಥಾ ಹಾಗೂ ಊರಿನ ಎಲ್ಲ 1,200 ಮನೆಗಳಿಗೆ ಭೇಟಿ ನೀಡಲಿದ್ದಾರೆ.
Related Articles
ತಂಡದಲ್ಲಿ ಸೋಹನ್‌ಕುಮಾರ್ ಎನ್., ಸ್ನೇಹಾ ಜಿ., ಎಚ್. ಶರಣಂ, ಸುಂದರ ವಿಜಯನ್, ಮೋಹನ ಗೌಡ ಎ. ಆರ್., ಜಿ. ಎನ್. ತೇಜಸ್ ಆರಾಧ್ಯ, ಧನುಷ್ ಕೆ. ಎನ್, ಸ್ಪರ್ಷಾ ಆರ್., ರಜಿತ್ ಎ. ಬೆಂಗಳೂರಿನವರು. ಗಣೇಶ ಶೆಟ್ಟಿ ನಾವುಂದದವರು. ಬೇರೆ ಬೇರೆ ವಿಭಾಗದಲ್ಲಿ ಕಲಿಯುತ್ತಿರುವ ಇವರು ಸ್ವಚ್ಚ ಭಾರತ ಯೋಜನೆಯನ್ನು ಆರಂಭಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ವಿದ್ಯಾರ್ಥಿಗಳು ತಮ್ಮ ರಜಾವಧಿಯಲ್ಲಿ ಕನಿಷ್ಠ 100 ಗಂಟೆಗಳ ಸಮುದಾಯ ಸೇವೆ ಮಾಡಬೇಕೆಂಬ ಕರೆ ನೀಡಿದ್ದಾರೆ. ಮುಂದಿನ ವರ್ಷದಿಂದ ಕೇಂದ್ರ ಸರಕಾರ ತಾಂತ್ರಿಕ ವಿದ್ಯಾರ್ಥಿಗಳಿಗೆ ಸಣ್ಣ ಅವಧಿಯ ಸಾಮಾಜಿಕ ಸೇವಾ ಕಾರ್ಯ ಕಡ್ಡಾಯಗೊಳಿಸಲಿದೆ ಎಂಬ ನಿರೀಕ್ಷೆಯಿದೆ. ಎಂದು ವಿದ್ಯಾರ್ಥಿಗಳು ತಿಳಿಸುತ್ತಾರೆ.
Advertisement
ಇದೇ ಊರಿನವರಾದ ಗಣೇಶ ಶೆಟ್ಟಿ ಮರವಂತೆ ಗ್ರಾಮ ಪಂಚಾಯತ್ ಹಲವು ಅಭಿವೃದ್ಧಿ ಕೆಲಸಗಳ ಮೂಲಕ ರಾಜ್ಯದ ಗಮನ ಸೆಳೆದಿರುವುದರ ಜತೆಗೆ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯ ನಿಟ್ಟಿನಲ್ಲಿ ಕೆಲಸ ಆರಂಭಿಸಿದೆ. ಈ ಕಾರಣಕ್ಕಾಗಿ ಈ ಊರನ್ನು ಆಯ್ಕೆ ಮಾಡಿಕೊಂಡೆವು ಎಂದರು.
ವರದಿ ಸರಕಾರಿ ಇಲಾಖೆಗೆತ್ಯಾಜ್ಯ ಸಂಗ್ರಹ, ವಿಲೇವಾರಿಗೆ ಸಾರ್ವ ಜನಿಕರಿಂದ ಇನ್ನೂ ಹೆಚ್ಚಿನ ಸ್ಪಂದನೆ ಬೇಕು. ಇಲ್ಲಿನ ನಮ್ಮ ಕೆಲಸದ ಅನುಭವ ಆಧಾರಿತ ವರದಿಯನ್ನು ಕಾಲೇಜಿಗೆ, ಕೇಂದ್ರ ಮಾನವ ಸಂನ್ಮೂಲ ಮಂತ್ರಾಲಯಕ್ಕೆ, ರಾಜ್ಯ ಗ್ರಾಮೀಣ ಅಭಿವೃದ್ಧಿ, ಪಂಚಾಯತ್‌ರಾಜ್ ಇಲಾಖೆಗೆ, ಮರವಂತೆ ಗ್ರಾ.ಪಂ.ಗೆ ನೀಡಲಾಗುವುದು ಎಂದಿದ್ದಾರೆ.