ಮುಂಬೈ: ನ್ಯಾಶಲಿಸ್ಟ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಶೇರ್ ಮಾಡಿದ ಆರೋಪದ ಮೇಲೆ ಮರಾಠಿ ನಟಿ ಕೇತಕಿ ಚಿತಾಳೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಥಾಣೆ ಪೊಲೀಸರು ಶನಿವಾರ ಅವರನ್ನು ಬಂಧಿಸಿದ್ದಾರೆ.
ಕೇತಕಿ ಚಿತಾಳೆ ಶುಕ್ರವಾರ ಹಂಚಿಕೊಂಡ ಮರಾಠಿ ಪೋಸ್ಟ ನ್ನು ಬೇರೊಬ್ಬರು ಬರೆದಿದ್ದಾರೆ. ಅದರಲ್ಲಿ ಪವಾರ್ ಎಂಬ ಉಪನಾಮ ಮತ್ತು 80ರ ವಯಸ್ಸು ಮಾತ್ರ ನಮೂದಿಸಲಾಗಿದೆ.
ಪೋಸ್ಟ್‌ನಲ್ಲಿ “ನರಕ ಕಾಯುತ್ತಿದೆ” ಮತ್ತು “ನೀವು ಬ್ರಾಹ್ಮಣರನ್ನು ದ್ವೇಷಿಸುತ್ತೀರಿ” ಎಂಬ ಪದಗಳನ್ನು ಹೊಂದಿದ್ದು, ಶಿವಸೇನೆ ಮತ್ತು ಕಾಂಗ್ರೆಸ್‌ನೊಂದಿಗೆ ಮಹಾರಾಷ್ಟ್ರದಲ್ಲಿ ಅಧಿಕಾರವನ್ನು ಹಂಚಿಕೊಂಡಿರುವ ಪವಾರ್ ಅವರನ್ನು ಉಲ್ಲೇಖಿಸಲಾಗಿದೆ.
“ಸ್ವಪ್ನಿಲ್ ನೆಟ್ಕೆ ನೀಡಿದ ದೂರಿನ ಆಧಾರದ ಮೇಲೆ ಚಿತಾಳೆ ವಿರುದ್ಧದ ಅಪರಾಧವನ್ನು ಶನಿವಾರ ಥಾಣೆಯ ಕಲ್ವಾ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ ಚಿತ್ರ ವಿಮರ್ಶೆ: ಮೊಬೈಲ್ ಕಂಟಕ ಪೋಷಕರಿಗೆ ಸಂಕಟ!
29 ವರ್ಷದ ನಟಿ ಕೇತಕಿ ಚಿತಾಲೆ ಅವರನ್ನು ಥಾಣೆ ಅಪರಾಧ ವಿಭಾಗದ ಪೊಲೀಸರು ನವಿ ಮುಂಬೈನಲ್ಲಿ ಬಂಧಿಸಿದ್ದಾರೆ.
ಪ್ರಕರಣದ ಬಗ್ಗೆ ಶರದ್ ಪವಾರ್ ಬಳಿ ಸುದ್ದಿಗಾರರು ಕೇಳಿದಾಗ, ಚಿತಾಳೆ ಅವರ ಬಗ್ಗೆ ತಿಳಿದಿಲ್ಲ ಮತ್ತು ಅವರು ಸಾಮಾಜಿಕ ಮಾಧ್ಯಮದಲ್ಲಿ ಬಗ್ಗೆ ಏನು ಪೋಸ್ಟ್ ಮಾಡಿದ್ದಾರೆ ಎಂಬುದರ ಬಗ್ಗೆ ತಿಳಿದಿಲ್ಲ ಎಂದು ಹೇಳಿದರು.