Advertisement

ಅದ್ಧೂರಿ ಮರಡಿಲಿಂಗೇಶ್ವರಸ್ವಾಮಿ ಜೋಡಿ ರಥೋತ್ಸವ

02:21 PM Mar 29, 2021 | Team Udayavani |

ಕಿಕ್ಕೇರಿ: ಸಮೀಪದ ಮರಡಿಲಿಂಗೇಶ್ವರ ದೇಗುಲದಲ್ಲಿ ಚಿಕ್ಕಯ್ಯ, ದೊಡ್ಡಯ್ಯ ಸ್ವಾಮಿಯ ಜೋಡಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.

Advertisement

ಭಾನುವಾರ ಸಂಜೆ ನಡೆದ ಮಹಾರಥೋತ್ಸವಕ್ಕೆ ಗ್ರಾಮವಲ್ಲದೆ ದೂರದ ಹತ್ತಾರು ಹಳ್ಳಿ, ಉದ್ಯೋಗ ಹರಸಿ ವಿವಿಧ ನಗರಗಳಿಗೆ ತೆರಳಿದ್ದ ಗ್ರಾಮಸ್ಥರು, ನವಜೋಡಿಗಳು ಅಧಿಕ ಸಂಖ್ಯೆಯಲ್ಲಿ ಸಾಕ್ಷಿಯಾಗಿದ್ದರು.

ಹರಕೆ ಕಾಣಿಕೆ: ಹಾಲುಮತ ಸಮುದಾಯದ ಭಕ್ತಿ,ಶಕ್ತಿಯ ದೇವರಾದ ಮರಡಿಲಿಂಗೇಶ್ವರನ ಗುಡಿಗೆತಂಡೋಪ ತಂಡವಾಗಿ ಭಕ್ತರು ಆಗಮಿಸಿದ್ದರು.ಶುಚಿಭ್ರೂತರಾಗಿ ದೇಗುಲದಲ್ಲಿ ಜಮಾಯಿಸಿಸರತಿಯಲ್ಲಿ ನಿಂತು ದೇವರ ದರ್ಶನ ಪಡೆದರು. ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಕಾಣಿಕೆ ಅರ್ಪಿಸಿದರು. ಸ್ಥರ ಶಕ್ತಿ, ಭಕ್ತಿಯ ದೇವರಿಗೆ ಬೆಳಗ್ಗಿನಿಂದಲೂ ಭಕ್ತರು ಉಪವಾಸ ವ್ರತಾಚಾರಣೆ ನಡೆಸಿ ಹರಕೆ ಕಾಣಿಕೆಯನ್ನು ದೇವರಿಗೆ ವಿಶೇಷವಾಗಿ ಚಿನ್ನಬೆಳ್ಳಿ ಆಭರಣ, ನಾನ ಸುಗಂದಪುಷ್ಪಗಳಿಂದಶೃಂಗರಿಸಲಾಗಿತ್ತು. ಹಲವರು ಧೂಳ್‌ಮರಿ (ಕುರಿಗಳ ಕತ್ತನ್ನು ಹಲ್ಲಿನಿಂದ ಕಚ್ಚುವುದು) ಮೂಲಕ ದೇವರಿಗೆ ಹರಕೆ ಬಲಿ ಸಮರ್ಪಿಸಿದರು. ಚಿಕ್ಕಯ್ಯ, ದೊಡ್ಡಯ್ಯ ದೇವರ ಉತ್ಸವ ಮೂರ್ತಿಯನ್ನು ದೇಗುಲದ ಸುತ್ತ ಮೆರವಣಿಗೆ ಮೂಲಕ ಪ್ರದಕ್ಷಿಣೆ ಹಾಕಿಸಿ, ಮಹಾರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.

ಚಿಕ್ಕಯ್ಯ, ದೊಡ್ಡಯ, ಮರಡಿಲಿಂಗೇಶ್ವರಸ್ವಾಮಿಗೆ ಜೈಕಾರ ಹಾಕುತ್ತ, ಕುರಿಗಾಹಿಗಳು ತಮ್ಮ ಕುರಿಗಳನ್ನುತಂದು ದೇವರ ತೀರ್ಥ ಪ್ರೋಕ್ಷಣೆ ಹಾಕಿಸಿಕೊಂಡುದೇಗುಲ ಹಾಗೂ ರಥದ ಸುತ್ತ ಪ್ರದಕ್ಷಿಣೆಹಾಕಿಸಿದರು. ರೋಗ ರುಜಿನ ಬಾರದಂತೆ ದೇವರಲ್ಲಿ ಪ್ರಾರ್ಥಿಸಿದರು.

ಅನ್ನದಾಸೋಹ: ರಥಕ್ಕೆ ಬಲಿಯನ್ನ, ಕಳಸಪೂಜೆ, ಉತ್ಸವಮೂರ್ತಿ ಪೂಜೆ ನೆರವೇರಿಸಲಾಯಿತು. ಕೋವಿಡ್ ಆತಂಕವನ್ನು ಲೆಕ್ಕಿಸದೆ ನವಜೋಡಿಗಳು ಹಣ್ಣು ದವನವನ್ನು ರಥದ ಕಳಸಕ್ಕೆ ಎಸೆದು ದೇವರಲ್ಲಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

Advertisement

ಹಲವು ದಾನಿಗಳಿಂದ ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು. ದೇಗುಲ ಸಮಿತಿಯಿಂದಭಕ್ತರಿಗೆ ನೀರುಮಜ್ಜಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಿದ್ದರಾಮಯ್ಯನವರ ಅಭಿಮಾನಿಗಳುಮತ್ತೂಮ್ಮೆ ಮುಖ್ಯಮಂತ್ರಿಯಾಗಲಿ ಎಂದುದೇವರಲ್ಲಿ ಪ್ರಾರ್ಥಿಸಿ ಹಣ್ಣು ಧವನ ಎಸೆದರು.ಕಿಕ್ಕೇರಿ ಪಿಎಸ್‌ಐ ಎಚ್‌.ಕೆ. ನವೀನ್‌ ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.

ಹಾಲುಮತ ಸಮುದಾಯದ ಮುಖಂಡರಾದ ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್‌, ಎಪಿಎಂಸಿ ಮಾಜಿಅಧ್ಯಕ್ಷ ಕೃಷ್ಣೇಗೌಡ, ಬಿಜೆಪಿ ಮುಖಂಡ ವಿನೋದ್‌,ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರವಿಂದ್ರಬಾಬು,ಭಾರತೀಪುರ ಗ್ರಾಪಂ ಉಪಾಧ್ಯಕ್ಷ ಸುನೀಲ್‌ಸೇರಿದಂತೆ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next