Advertisement

ಮಮತಾ ಬ್ಯಾನರ್ಜಿ ಸಚಿವರ ಶಿರಚ್ಛೇದನ ಬೆದರಿಕೆ: ಮಾವೋ ಪೋಸ್ಟರ್‌

03:21 PM Nov 15, 2018 | Team Udayavani |

ಕೋಲ್ಕತ: ಪಶ್ಚಿಮ ಬಂಗಾಲದ ಪಶ್ಚಿಮ ಮಿಡ್ನಾಪುರ ಜಿಲ್ಲೆಯಲ್ಲಿ ಮಾವೋ ಉಗ್ರರೊಂದಿಗೆ ನಂಟು ಹೊಂದಿದ ನಾಲ್ವರನ್ನು ಬಂಧಿಸಿದ ಕೇವಲ 24 ತಾಸುಗಳ ತರುವಾಯ ಇಂದು ಗುರುವಾರ ಬೆಳಗ್ಗೆ ಮರುಕತ ಅರಣ್ಯದಲ್ಲಿ ಹಲವಾರು ನಕ್ಸಲ್‌ ಪೋಸ್ಟರ್‌ಗಳು ಬಿದ್ದುಕೊಂಡಿರುವುದು ಪತ್ತೆಯಾಗಿದೆ.

Advertisement

ಗುರುYರಿಪಾಲ್‌ ಪೊಲೀಸ್‌ ಠಾಣೆ ವ್ಯಾಪ್ತಿಗೆ ಒಳಪಡುವ ಮುರುಕತ ಅರಣ್ಯಕ್ಕೆ ಸಮೀಪದದ ರಸ್ತೆಯಲ್ಲಿ ಈ ಪೋಸ್ಟರ್‌ಗಳು ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡು ಬಿದ್ದಿದ್ದವು.

ಈ ಪೋಸ್ಟರ್‌ಗಳು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸರಕಾರದಲ್ಲಿ ಸಾರಿಗೆ ಸಚಿವರಾಗಿರುವ ಸುವೇಂದು ಅಧಿಕಾರಿ ಮತ್ತು ಸಾಲಬೋನಿ ಶಾಸಕ ಶ್ರೀಕಾಂತ್‌ ಮಹಾತೋ ಅವರಿಗೆ ಎಚ್ಚರಿಕೆ ನೀಡಲಾಗಿದೆ. “ಇವರ ತಲೆ ಕಡಿದು ನಮಗೆ ತಂದು ಕೊಡಿ. ಇವರು ಜಂಗಲ್‌ವುಹಲ್‌ ಜನರಿಗೆ ಕೇಜಿಗೆ 2 ರೂ. ಅಕ್ಕಿ ಕೊಡುವುದಾಗಿ ಹೇಳಿ ಮೂರ್ಖನ್ನಾಗಿ ಮಾಡುತ್ತಿದ್ದಾರೆ’ ಎಂದು ಈ ಪೋಸ್ಟರ್‌ಗಳಲ್ಲಿ ಬರೆಯಲಾಗಿದೆ. 

“ಇದು ನಕ್ಸಲರ ಎಚ್ಚರಿಕೆ’ ಎಂಬ ಬರಹ ಇದ್ದು  ಪೋಸ್ಟ್‌ರ್‌ನ ಕೆಳಭಾಗಲ್ಲಿ ಕಮ್ಯುನಿಸ್ಟ್‌ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಎಂದು ಬರೆಯಲಾಗಿದೆ. 

Advertisement

ಈ ಪೋಸ್ಟರ್‌ಗಳು ನಿಜವಾಗಿಯೂ ಮಾವೋವಾದಿಗಳಿಗೆ ಸಂಬಂಧಿಸಿದೆಯೇ ಅಥವಾ ಯಾವುದೋ ದುಷ್ಕರ್ಮಿಗಳ ಕೃತ್ಯ ಇದಾಗಿರಬಹುದೇ ಎಂಬ ಬಗ್ಗೆ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.

ಗೋಲ್‌ತೋರೆ ಪೊಲೀಸ್‌ ಠಾಣೆ ವ್ಯಾಪ್ತಿಯಿಂದ ಸವ್ಯಸಾಚಿ ಗೋಸ್ವಾಮಿ, ಸಂಜೀವ ಮಜುಮ್‌ದಾರ್‌, ಅರ್ಕಾದೀಪ್‌ ಗೋಸ್ವಾಮಿ ಮತ್ತು ಟಿಪ್ಪು ಸುಲ್ತಾನ್‌ ಎಂಬ ಮಾವೋ ಉಗ್ರರೊಂದಿಗೆ ನಂಟು ಹೊಂದಿರುವರೆನ್ನಲಾದ ನಾಲ್ವರನ್ನು ಬಂಧಿಸಲಾದ ತರುವಾಯ ಈ ಪೋಸ್ಟರ್‌ ಗಳು ಕಂಡು ಬಂದಿವೆ. ಸುಮಾರು 46 ಪೋಸ್ಟರ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next