Advertisement

ಹಲವು ರೈಲುಗಳ ಸಂಚಾರ ರದ್ದು

02:34 PM Aug 18, 2018 | Team Udayavani |

ಮಂಗಳೂರು: ಕೇರಳದಲ್ಲಿ  ನೆರೆ ಮತ್ತು ಭೂಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ  ದಕ್ಷಿಣ ರೈಲ್ವೇಯ ಪಾಲಕ್ಕಾಡ್‌ ಮತ್ತು ತಿರುವನಂತಪುರ ವಿಭಾಗಗಳಲ್ಲಿ ಕೆಲವು ರೈಲುಗಳ ಸಂಚಾರವನ್ನು ಆ. 17ರಂದು ರದ್ದು ಪಡಿಸಲಾಗಿತ್ತು.

Advertisement

ವಾರದಲ್ಲಿ  3 ದಿನ ಸಂಚರಿಸುವ ಕಣ್ಣೂರು/ ಕಾರವಾರ- ಬೆಂಗಳೂರು (16518/16524) ಎಕ್ಸ್‌ಪ್ರೆಸ್‌, ಬೆಂಗಳೂರು- ಕಣ್ಣೂರು/ ಕಾರವಾರ (16511/16513) ಎಕ್ಸ್‌ಪ್ರೆಸ್‌, ಚೆನ್ನೈ ಸೆಂಟ್ರಲ್‌- ಮಂಗಳೂರು ಸೆಂಟ್ರಲ್‌ (12601) ಎಕ್ಸ್‌ಪ್ರೆಸ್‌, ಚೆನ್ನೈ ಸೆಂಟ್ರಲ್‌- ಮಂಗಳೂರು ಸೆಂಟ್ರಲ್‌ (22637) ವೆಸ್ಟ್‌ಕೋಸ್ಟ್‌  ಎಕ್ಸ್‌ಪ್ರೆಸ್‌, ಮಂಗಳೂರು ಸೆಂಟ್ರಲ್‌- ಚೆನ್ನೈ ಸೆಂಟ್ರಲ್‌ ಮೈಲ್‌ (12602) ಎಕ್ಸ್‌ಪ್ರೆಸ್‌,

ಮಂಗಳೂರು ಸೆಂಟ್ರಲ್‌- ತಿರುವನಂತಪುರಂ (16348) ಎಕ್ಸ್‌ಪ್ರೆಸ್‌, ಮಂಗಳೂರು ಸೆಂಟ್ರಲ್‌- ಚೆನ್ನೈ ಸೆಂಟ್ರಲ್‌ (12686) ಎಕ್ಸ್‌ಪ್ರೆಸ್‌, ಮಂಗಳೂರು ಸೆಂಟ್ರಲ್‌- ಚನ್ನೈ ಸೆಂಟ್ರಲ್‌ ಮಾವೇಲಿ ಎಕ್ಸ್‌ಪ್ರೆಸ್‌ (16603), ಮಂಗಳೂರು ಸೆಂಟ್ರಲ್‌- ತಿರುವನಂತಪುರಂ (16630) ಎಕ್ಸ್‌ಪ್ರೆಸ್‌, ಮಂಗಳೂರು ಜಂಕ್ಷನ್‌- ಕೊಚ್ಚುವೇಲಿ ಅಂತ್ಯೋದಯ (16356) ಎಕ್ಸ್‌ಪ್ರೆಸ್‌ ರೈಲುಗಳನ್ನು  ಆ. 17ರಂದು ರದ್ದು ಪಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next