Advertisement

Bengaluru: ದೀಪಾವಳಿ ಪ್ರಯುಕ್ತ 14 ರೈಲುಗಳಿಗೆ ಹೆಚ್ಚುವರಿ ಬೋಗಿ

02:33 PM Oct 25, 2024 | Team Udayavani |

ಬೆಂಗಳೂರು: ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಹೆಚ್ಚುವರಿ ದಟ್ಟಣೆಯನ್ನು ನಿರ್ವ ಹಿಸಲು, 14 ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ತಾತ್ಕಾಲಿಕವಾಗಿ ಜೋಡಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ.

Advertisement

ಅ.25ರಿಂದ ನ.24ರ ವರೆಗೆ ಕೆಎಸ್‌ಆರ್‌ ಬೆಂಗಳೂರು- ಸಾಂಗ್ಲಿ ರಾಣಿ ಚನ್ನಮ್ಮ ಡೈಲಿ ಎಕ್ಸ್‌ಪ್ರೆಸ್‌ ರೈಲಿಗೆ ಹೆಚ್ಚುವರಿ ಒಂದು ಎಸಿ 3-ಟೈರ್‌ ಎಕಾನಮಿ ಬೋಗಿ, ಕೆಎಸ್‌ಆರ್‌ ಬೆಂಗಳೂರು-ಬೆಳಗಾವಿ ಡೈಲಿ ಎಕ್ಸ್‌ಪ್ರೆಸ್‌ ರೈಲಿಗೆ ಹೆಚ್ಚುವರಿ ಒಂದು ಎಸಿ 3-ಟೈರ್‌ ಎಕಾ ನಮಿ ಬೋಗಿ, ಯಶವಂತಪುರ-ಹಜರತ್‌ ನಿಜಾ ಮುದ್ದೀನ್‌ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ ರೈಲಿಗೆ ಹೆಚ್ಚು ವರಿ ಒಂದು ಎಸಿ 3-ಟೈರ್‌ ಎಕಾನಮಿ ಬೋಗಿ ಜೋಡಿಸಲಾಗಿದೆ.

ಅ.26 ರಿಂದ ನ.25ರ ವರೆಗೆ ಸಾಂಗ್ಲಿ-ಕೆಎಸ್‌ ಆರ್‌ ಬೆಂಗಳೂರು ರಾಣಿ ಚೆನ್ನಮ್ಮ ಡೈಲಿ ಎಕ್ಸ್‌ಪ್ರೆಸ್‌ ರೈಲಿಗೆ ಹೆಚ್ಚುವರಿ ಒಂದು ಎಸಿ 3-ಟೈರ್‌ ಎಕಾನಮಿ ಬೋಗಿ, ಬೆಳಗಾವಿ-ಕೆಎಸ್‌ಆರ್‌ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್‌ ರೈಲಿಗೆ ಹೆಚ್ಚುವರಿ ಒಂದು ಎಸಿ 3-ಟೈರ್‌ ಎಕಾನಮಿ ಬೋಗಿ. ಅ.27ರಿಂದ ನ.28ರ ವರೆಗೆ ಹಜರತ್‌ ನಿಜಾಮುದ್ದೀನ್‌-ಯಶವಂತಪುರ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ ರೈಲಿಗೆ ಹೆಚ್ಚುವರಿ ಒಂದು ಎಸಿ 3-ಟೈರ್‌ ಎಕಾನಮಿ ಬೋಗಿ ಜೋಡಿಸಲಾಗಿದೆ.

ಅ.24 ರಿಂದ ನ.26ರ ವರೆಗೆ ಯಶವಂತಪುರ- ಹಜರತ್‌ ನಿಜಾಮುದ್ದೀನ್‌ ಸಂಪರ್ಕ ಕ್ರಾಂತಿ ಎಕ್ಸ್‌ ಪ್ರಸ್‌ ರೈಲಿಗೆ ಹೆಚ್ಚುವರಿ ಒಂದು ಎಸಿ 3-ಟೈರ್‌ ಎಕಾ ನಮಿ ಬೋಗಿ, ಅ.30ರಿಂದ ನ.29ರ ವರೆಗೆ ಹಜರತ್‌ ನಿಜಾಮುದ್ದೀನ್‌-ಯಶವಂತಪುರ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ ರೈಲಿಗೆ ಹೆಚ್ಚುವರಿ ಒಂದು ಎಸಿ 3-ಟೈರ್‌ ಎಕಾನಮಿ ಬೋಗಿ ಅ.25 ರಿಂದ ನ. 22.ರವರೆಗೆ ಎಸ್‌ಎಸ್‌ಎಸ್‌ ಹುಬ್ಬಳ್ಳಿ-ಬನಾರಸ್‌ ಸಾಪ್ತಾಹಿಕ ಎಕ್ಸ್‌ ಪ್ರಸ್‌ ರೈಲಿಗೆ ಹೆಚ್ಚುವರಿ ಒಂದು ಎಸಿ 3-ಟೈರ್‌ ಬೋಗಿ, ಅ.27 ರಿಂದ ನ.24ರ ವರೆಗೆ ಬನಾರಸ್‌-ಎಸ್‌ಎಸ್‌ಎಸ್‌ ಹುಬ್ಬಳ್ಳಿ ಸಾಪ್ತಾಹಿಕ ಎಕ್ಸ್‌ಪ್ರೆಸ್‌ ರೈಲಿಗೆ ಹೆಚ್ಚುವರಿ ಒಂದು ಎಸಿ 3-ಟೈರ್‌ ಬೋಗಿ, ಅ.26 ರಿಂದ ನ.23 ರವರೆಗೆ ಯಶವಂತಪುರ-ಚಂಡೀಗಢ ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್‌ ರೈಲಿಗೆ ಹೆಚ್ಚುವರಿ ಒಂದು ಸ್ಲೀಪರ್‌ ಕ್ಲಾಸ್‌ ಬೋಗಿ, ಅ. 29 ರಿಂದ ನ.26ರ ವರೆಗೆ ಚಂಡೀ ಗಢ-ಯಶವಂತಪುರ ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್‌ ರೈಲಿಗೆ ಹೆಚ್ಚುವರಿ ಒಂದು ಸ್ಲೀಪರ್‌ ಕ್ಲಾಸ್‌ ಬೋಗಿ, ನ.1ರಿಂದ ನ. 29ರವರೆಗೆ ಪಂಢರಪುರ-ಯಶವಂತಪುರ ಸಾಪ್ತಾಹಿಕ ಎಕ್ಸ್‌ ಪ್ರಸ್‌ ರೈಲಿಗೆ ಹೆಚ್ಚುವರಿ ಒಂದು ಸ್ಲೀಪರ್‌ ಕ್ಲಾಸ್‌ ಬೋಗಿ ಜೋಡಿಸಲಾಗುತ್ತಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next