Advertisement

ಮಹಿಳಾ ಸಬಲೀಕರಣರಣಕ್ಕೆ ಕ.ಕ. ಸಂಘದಿಂದ ಹಲವು ಯೋಜನೆ

01:09 PM Jan 23, 2022 | Team Udayavani |

ಕನಕಗಿರಿ: ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ ಮತ್ತು ಕೊಪ್ಪಳದ ಮಹಿಳಾ ಮತ್ತು ಪರಿಸರದ ಅಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ಇತ್ತೀಚಿಗೆ ರೈತರಿಗೆ ಹಸು ವಿತರಿಸಲಾಯಿತು.

Advertisement

ಈ ವೇಳೆ ಕ.ಕ. ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ನಿರ್ದೇಶಕಿ ಲೀಲಾ ಮಾತನಾಡಿ, ಕೃಷಿ ಪಶು ಸಂಗೋಪನಾ, ಮಹಿಳೆಯರ ಸಬಲೀಕರಣಕ್ಕೆ ಕ.ಕ. ಸಂಘದಿಂದ ಹಲವಾರು ಕಾರ್ಯಕ್ರಮ ಜಾರಿಗೆ ತಂದು ಬಡವರಿಗೆ ಹಾಗೂ ಅರ್ಹರಿಗೆ ಇದರ ಉಪಯೋಗ ಪಡೆದುಕೊಳ್ಳಲು ಮಾಹಿತಿ ನೀಡುತ್ತಿದೆ.

ದೇಶಿ ತಳಿಯ ಹಸುಗಳನ್ನು ಉಳಿಸಿ ಈ ಭಾಗದ 25 ಫಲಾನುಭವಿಗಳಿಗೆ 80 ಸಾವಿರ ಮೊತ್ತದಲ್ಲಿ 2-3 ಕರುಗಳನ್ನು ಖರೀದಿಸಲು ಸೂಚಿಸಲಾಗಿದೆ ಎಂದು ಹೇಳಿದರು. ನಂತರ ಬಿಜೆಪಿ ಮಂಡಲ ಅಧ್ಯಕ್ಷ ಮಹಾಂತೇಶ ಸಜ್ಜನ್‌ ಮಾತನಾಡಿ, ಪಶು ಪ್ರಾಣಿಗಳು ಕುಟುಂಬದ ಸದಸ್ಯರಿದ್ದಂತೆ ಅವುಗಳನ್ನು ಮನೆಯವರಂತೆ ನೋಡಿ ಕೊಳ್ಳಬೇಕು. ರೈತರು ಭೂಮಿಗೆ ರಾಸಾಯನಿಕ ಗೊಬ್ಬರವನ್ನು ಮಿತವಾಗಿ ಬಳಸಬೇಕೆಂದರು. ಶರಣಪ್ಪ ಭತ್ತದ, ರವಿ, ಪ್ರಶಾಂತ ಪ್ರಭು ಶೆಟ್ಟರ್‌, ಶಿವಕುಮಾರ ಮ್ಯಾಗೇರಿ, ಮಂಜುನಾಥ ಹೊಸಗೆರ, ಮಂಜುನಾಥ ಮಸ್ಕಿ ಇತರರು ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next