Advertisement

West Bengal ಹಲವು ಭಾಗಗಳು ಗೂಂಡಾಗಳ ಹಿಡಿತದಲ್ಲಿದೆ: ಗವರ್ನರ್‌

12:54 AM Apr 08, 2024 | Team Udayavani |

ಕೋಲ್ಕತಾ: ಇಡೀ ಪಶ್ಚಿಮ ಬಂಗಾಲದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿಲ್ಲ. ಆದರೆ ಗಣನೀಯ ಪ್ರದೇಶ ಗೂಂಡಾಗಳ ಹಿಡಿತದಲ್ಲಿದೆ ಎಂದು ರಾಜ್ಯಪಾಲ ಸಿ.ವಿ.ಆನಂದ ಬೋಸ್‌ ಹೇಳಿದ್ದಾರೆ. ಜತೆಗೆ, ರಾಜ್ಯದಲ್ಲಿನ ಹಿಂಸಾಚಾರಕ್ಕೆ ಸಂಪೂರ್ಣವಾಗಿ ಟಿಎಂಸಿ ಸರಕಾರವನ್ನೇ ದೂಷಿ ಸುವುದು ತಪ್ಪು. ಇದಕ್ಕೆ ಹಿಂದಿನ ಪರಂಪರೆಯೂ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ನಾನು ನೋಡಿದಂತೆ ಸಂದೇಶ್‌ಖಾಲಿಯಲ್ಲಿ ಮಹಿಳೆಯರು ಶಾಂತಿಯ ಜತೆಗೆ ಗೌರವ ಬಯಸುತ್ತಿದ್ದಾರೆ. ಆದರೆ ಅವರ ಗೌರವ ಛಿದ್ರವಾಗಿದೆ. ಗಣನೀಯ ಪ್ರದೇಶ ಗೂಂಡಾಗಳ ಹಿಡಿತ ದಲ್ಲಿದೆ. ಕೆಲವು ಕಡೆ ಗೂಂಡಾ ರಾಜ್ಯ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಎನ್‌ಐಎ ಅಧಿಕಾರಿಗಳ ವಿರುದ್ಧವೇ ಎಫ್ಐಆರ್‌
ಪಶ್ಚಿಮ ಬಂಗಾಲದಲ್ಲಿ ಎನ್‌ಎಐ ಅಧಿ ಕಾರಿಗಳ ಮೇಲೆ ಹಲ್ಲೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಅಧಿಕಾರಿಗಳ ವಿರುದ್ಧವೇ ಎಫ್ಐಆರ್‌ ದಾಖಲಿಸಲಾಗಿದೆ. ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಟಿಎಂಸಿ ನಾಯಕ ಮನೋಬ್ರತ ಜನಾ ಎಂಬವರ ಪತ್ನಿ, ಎನ್‌ಐಎ ಅಧಿಕಾರಿಗಳೇ ತಮ್ಮ ಮೇಲೆ ಹಲ್ಲೆ ನಡೆಸಿ, ದೌರ್ಜನ್ಯಎಸಗಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ತನಿಖೆ ನಡೆಸುವ ನೆಪದಲ್ಲಿ ಎನ್‌ಐಎ ಅಧಿಕಾರಿಗಳು ಬಲ ವಂತವಾಗಿ ಮನೆಗೆ ನುಗ್ಗಿದ್ದಾರೆ. ಜತೆಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರು ಎನ್‌ಐಎ, ದಾಳಿಗೆ ಸಂಬಂಧಿ ಸಿದಂತೆ ನಾವು ಯಾವುದೇ ಪ್ರಚೋದನೆಯನ್ನು ನೀಡಿಲ್ಲ. ಕಾನೂನು ಪ್ರಕ್ರಿಯೆಯನ್ನು ತಡೆಯಲು ಜನರೇ ದಾಳಿ ನಡೆಸಿದ್ದಾರೆ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next