Advertisement

ವಿಪಕ್ಷಗಳ ಹಲವು ಮುಖಂಡರು ಶೀಘ್ರ “ಕೈ’ಸೇರ್ಪಡೆ

05:27 PM Sep 01, 2021 | Team Udayavani |

ತುಮಕೂರು: ಮುಂದೆ ಬರಲಿರುವ ವಿಧಾನಸಭಾ ಚುನಾವಣೆಯ ವೇಳೆಗೆ ಜಿಲ್ಲಿಯ ವಿವಿಧ ಪಕ್ಷಗಳ ಹಲವು ಮುಖಂಡರು ಕಾಂಗ್ರೆಸ್‌ ಪಕ್ಷ ಸೇರಲಿದ್ದಾರೆ. ನಾನು ಈ ಹಿಂದೆ ಹೇಳಿದಂತೆ ವಿಧಾನ ಪರಿಷತ್‌ ಸದಸ್ಯರಾದ ಬೆಮೆಲ್‌ ಕಾಂತರಾಜು ಕಾಂಗ್ರೆಸ್‌ ಸೇರಲು ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌. ರಾಜಣ್ಣ ಸ್ಪಷ್ಟಪಡಿಸಿದರು.

Advertisement

ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಕಾಂಗ್ರೆಸ್‌ ಯುವ ಮುಖಂಡ ಆರ್‌.ರಾಜೇಂದ್ರ ಅವರ ಆಹ್ವಾನದ ಮೇರೆಗೆ ನಮ್ಮ ಮನೆಗೆ ಸೌಹಾರ್ದ ಭೇಟಿಗಾಗಿ ಆಗಮಿಸಿದ್ದ ಬೆಮೆಲ್‌ ಕಾಂತರಾಜ್‌ ಅವರು, ಈಗಾಗಲೇ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆ ಗಳಾಗುತ್ತಿವೆ. ಇತ್ತೀಚೆಗೆ ಜಿ.ಟಿ. ದೇವೇಗೌಡರೂ ಸಹ ಕಾಂಗ್ರೆಸ್‌ ಸೇರಲು ಇಂಗಿತ ವ್ಯಕ್ತಪಡಿಸಿರುವಂತೆಯೇ ಬೆಮೆಲ್‌ ಕಾಂತರಾಜು ಅವರು ಕೂಡ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದರು.

ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ನಮ್ಮ ಜಿಲ್ಲೆಯಲ್ಲೂ ಬಹಳಷ್ಟು ಬದಲಾವಣೆಗಳ ನಿರೀಕ್ಷೆ ಮಾಡಬಹುದು ಎಂದು ಈ ಹಿಂದೆಯೇ ನಾನು ಹೇಳಿದ್ದೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ ಎಂದು ಜಿ.ಟಿ.ದೇವೇಗೌಡರಿಗೂ
ಸಹ ಆರು ತಿಂಗಳ ಹಿಂದೆಯೇ ಹೇಳಿದ್ದೆ,ಸಿದ್ದರಾಮಯ್ಯ ಅವರಿಗೆ ಜಿಲ್ಲೆಯ ಚಿಕ್ಕನಾಹಕನಹಳ್ಳಿ ಅಥವಾ ಮಧುಗಿರಿ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಮನವಿ ಮಾಡಿದ್ದೇನೆ. ನಮ್ಮ ಜಿಲ್ಲೆಯ ಕೆಲವು ವಿಚಾರಗಳನ್ನು ಹೇಳಿದ್ದೇನೆ. ಅವೆಲ್ಲವೂ ಕಾಲಕಳೆದಂತೆ ಸತ್ಯವಾಗುವಂತಹ ಕಾಲ ಸನ್ನಿಹಿತ ವಾಗುತ್ತಿವೆ ಎಂದರು.

ಇದನ್ನೂ ಓದಿ:ದೇಶದ ಜನರನ್ನು ಆರ್ಥಿಕವಾಗಿ ದಿವಾಳಿ ಮಾಡಿದ್ದೇ ‘ಡಬಲ್ ಇಂಜಿನ್’ ಸರ್ಕಾರದ ದೊಡ್ಡ ಸಾಧನೆ

ದುಷ್ಪರಿಣಾಮಗಳೇ ಹೆಚ್ಚು: ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ ನೌಕರರ ನೇಮಕದಿಂದ ಸರ್ಕಾರಕ್ಕೆ ಶೇ. 10 ಅಥವಾ 20ರಷ್ಟು ಹಣ
ಉಳಿತಾಯವಾಗಬಹುದು ಬಿಟ್ಟರೆ, ಇದರಿಂದ ದುಷ್ಪರಿಣಾಮಗಳೇ ಹೆಚ್ಚಾಗುತ್ತವೆ. ಇತ್ತೀಚೆಗೆ ಆರ್‌ ಟಿಒ ಕಚೇರಿಯಲ್ಲಿ ಹೊರಗುತ್ತಿಗೆ ನೌಕರ ರಿಂದ ಅವರದ್ದೇ ಡ್ಯಾಂಗಲ್‌ ಬಳಸಿ 5 ಕೋಟಿ ಹಣವನ್ನು ಬೇರೆ ಕಡೆ ವರ್ಗಾಯಿಸಿದ್ದಾರೆ ಎಂಬ ಮಾಹಿತಿಗಳಿವೆ. ಹೀಗೆ ಬಹಳಷ್ಟು ಇಲಾಖೆಗಳಲ್ಲಿ ಎಲ್ಲೆಲ್ಲಿ ಹೊರಗುತ್ತಿಗೆ ಅಧಿಕಾರಿಗಳಿದ್ದಾರೆ ಅಲ್ಲೆಲ್ಲಾ ಇಂತಹ ದುಷ್ಪರಿಣಾಮಗಳೇ ಹೆಚ್ಚಾಗಿ ನಡೆಯುತ್ತವೆ. ಹೊರ ಗುತ್ತಿಗೆ ನೌಕರರಿಗೆ ಹೊಣೆ ಗಾರಿಕೆ ಇರುವುದಿಲ್ಲ, ಖಾಸಗಿಏಜೆನ್ಸಿಯವರ ಮೂಲಕ ನೇಮಕ ವಾಗಿರುತ್ತಾರೆ. ನಾಳೆ ಏನು ಮಾಡಿದರೂ ಅವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲು ಆಗುವುದಿಲ್ಲ ಎಂಬ ಪರಿಸ್ಥಿತಿಗೆ ಬರಲಾಗುತ್ತದೆ ಎಂದು ಹೇಳಿದರು.

Advertisement

ತುಮಕೂರಿನಲ್ಲಿರುವ ಟಿಎಚ್‌ಒ ಕಚೇರಿಯಲ್ಲಿ ಟಿಎಚ್‌ಒ ಹೊರತುಪಡಿಸಿದರೆ ಆಡಳಿತಾಧಿಕಾರಿ ಸಮೇತ ಎಲ್ಲಾ ಸಿಬ್ಬಂದಿಯೂ ಹೊರಗುತ್ತಿಗೆ
ನೌಕರರೇ ಆಗಿದ್ದಾರೆ. ಹೀಗಿರುವಾಗ ಹೊರಗುತ್ತಿಗೆ ನೌಕರರು ಎಷ್ಟುದಿನ ಕೆಲಸ ಮಾಡುತ್ತೇವೆಯೋ ಅಷ್ಟು ದಿನ ಹಣ ಬಾಚಬೇಕೆಂಬ ಮನೋಭಾವದಲ್ಲಿ ಅವರೆಲ್ಲಾ ಕೆಲಸ ಮಾಡುತ್ತಿರುತ್ತಾರೆ. ಇದರಿಂದ ಸರ್ಕಾರಕ್ಕೆ ನಷ್ಟ, ಕೆಲಸದಲ್ಲಿ ದಕ್ಷತೆ ಕಾಣುವುದಕ್ಕೂ ಆಗುವುದಿಲ್ಲ ಎಂಬಂತಾಗುತ್ತದೆ ಎಂದರು.

ಸರ್ಕಾರ ಖಾಯಂ ಹುದ್ದೆಗಳ ನೇಮಕಾತಿ ಮಾಡದೇ ಇರುವುದರಿಂದ ಇಷ್ಟೆಲ್ಲಾ ಅನಾಹುತಗಳು ನಡೆಯುತ್ತಿರುತ್ತವೆ. ಖಾಯಂ ನೇಮಕಾತಿ ಮಾಡದೇ ಹೊರಗುತ್ತಿಗೆ ನೇಮಕ ದಿಂದ ಮೀಸಲಾತಿ ಯಲ್ಲಿ ಯಾರಿಗೆಲ್ಲ ಕೆಲಸಸಿಗಬೇಕಿತ್ತೋಅವರಿಗೆಆ ಕೆಲಸ ಸಿಗುತ್ತಿಲ್ಲ, ಮೀಸಲಾತಿ ಪಾಲಿಸಿಯಲ್ಲಿಸರ್ಕಾರ ವಂಚನೆಯನ್ನು ವ್ಯವ ಸ್ಥಿತವಾಗಿ ಮಾಡುತ್ತಿರು ವುದು ದುರಂತ ಎಂದರು.

ತನಿಖೆ ಚುರುಕುಗೊಳಿಸಿ:
ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳು, ಹೊರಗುತ್ತಿಗೆ ಬಗ್ಗೆ ಎಚ್‌.ಕೆ.ಪಾಟೀಲ್‌ ಅವರಿಗೆ ಚೆನ್ನಾಗಿ ಅರಿವಿದ್ದು, ಅವರನ್ನು ತುಮಕೂರಿಗೆ ಕರೆಸಿ
ಸುದ್ದಿಗೋಷ್ಠಿ ನಡೆಸಿ ಸಂಪೂರ್ಣ ಚಿತ್ರಣವನ್ನು ರಾಜ್ಯದ ಜನರ ಮುಂದೆ ಇಟ್ಟು ಬೆಳಕು ಚೆಲ್ಲುವುದಾಗಿ ತಿಳಿಸಿದರು. ಇತ್ತೀಚೆಗೆ ಚಿಕ್ಕಹಳ್ಳಿಯಲ್ಲಿ ಮಹಿಳೆ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆದು ಒಂದು ವಾರ ಕಳೆದರೂ ಪೊಲೀಸರಿಗೆ ಸಣ್ಣ ಸುಳಿವು ಸಿಗಲಿಲ್ಲ ಎಂದರೆ ಏನರ್ಥ ಎಂದು ಪ್ರಶ್ನಿಸಿದರ ಅವರು, ಸ್ಥಳೀಯರು ಈ ರೀತಿಯ ಕೃತ್ಯಕ್ಕೆ ಕೈಹಾಕಿರುವುದಿಲ್ಲ ಎಂಬ ನಂಬಿಕೆ ನನ್ನದು ಬೇರೆ ಕಡೆಯಿಂದ ಬಂದಂತಹವ ರಿಂದಲೇ ಇಂತಹ ಕೃತ್ಯ ಮಾಡಿರುವ ಶಂಕೆ ಇದೆ. ಪೊಲೀಸರು ತನಿಖೆಯನ್ನು ಚುರುಕು ಗೊಳಿಸಬೇಕಿದೆ ಎಂದರು.

ಉತ್ಸವ, ಆಚರಣೆಗೆ ಅನುಮತಿ ನೀಡಲಿ:
ಗಣೇಶೋತ್ಸವ ಹಬ್ಬ ಆಚರಣೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಯಾವುದೇ ಉತ್ಸವವಿರಲಿ ಜನಸಂದಣಿ ಇಲ್ಲದೆ ಆಚರಿಸಿದರೆ ಉತ್ತಮ. ಕೋವಿಡ್‌ ಮಾರ್ಗಸೂಚಿಗಳನ್ನು ಸರ್ಕಾರ ಕಠಿಣವಾಗಿ ಜಾರಿಗೆ ತಂದು ಉತ್ಸವಗಳ ಆಚರಣೆಗೆ ಅನುಮತಿ ನೀಡಲಿ. ಶಾಲೆ ಆರಂಭಿಸುವ ಕುರಿತಂತೆ ಮಾತನಾಡಿದ ಅವರು, ಮಕ್ಕಳಿಗೆ ವಿದ್ಯೆಗಿಂತ ಜೀವ ಬಹಳ ಮುಖ್ಯ, ಪ್ರಾಣ ಇದ್ದರೆ ಇಂದಲ್ಲ ನಾಳೆ ಕಲಿಯುತ್ತಾನೆ. ಆದ್ದರಿಂದ, ಅವರ ಜೀವ ರಕ್ಷಣೆ ಮಾಡುವುದು ಮುಖ್ಯ. ಮಕ್ಕಳ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಶಾಲೆ ಆರಂಭಿಸಲಿ ಎಂದು ಸಲಹೆ ನೀಡಿದರು.

ಎಸ್‌ಪಿ ಗಸ್ತು ತಿರುಗಲು ಸಲಹೆ
ಈ ಹಿಂದೆ ಪೊಲೀಸರು ವರಿಷ್ಠಾಧಿಕಾರಿಗಳ ಸಮೇತ ಗಸ್ತು ತಿರುಗುತ್ತಿದ್ದರು. ಇದರಿಂದ ಅಪರಾಧ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿರಲಿಲ್ಲ, ಆದರೆ, ಇತ್ತೀಚೆಗೆ ಗಸ್ತು ತಿರುಗುವ ಪೊಲೀಸ್‌ ವಾಹನಗಳೇಕಾಣಿಸುತ್ತಿಲ್ಲ. ಆಯಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಗಸ್ತು ಹೆಚ್ಚಿಸ ಬೇಕು. ಜೊತೆಗೆ ಪೊಲೀಸ್‌ ವರಿಷ್ಠಾಧಿಕಾರಿಗಳೂ ಸಹ ಗಸ್ತುತಿರುಗಬೇಕು. ಆಗ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌.ರಾಜಣ್ಣ ಸಲಹೆ ನೀಡಿದರು.

ಮೀಸಲಾತಿ ಅನುಕೂಲ ತಲುಪಿಸದೆ ವಂಚನೆ
ಬಹಳಷ್ಟು ಜಾತಿಗಳು ಮೀಸಲಾತಿ ಹೆಚ್ಚಿಸಿ ಎನ್ನುತ್ತಿದ್ದರೆ, ಇನ್ನೂಕೆಲವರು ಒಳಮೀಸಲಾತಿಗೆ ಒತ್ತಾಯಿಸುತ್ತಿದ್ದಾರೆ. ಪಂಚಮಸಾಲಿಗಳು2ಎಗೆ
ಸೇರಿಸುವಂತೆ ಒತ್ತಾಯಿಸುತ್ತಿವೆ. ಆದರೆ, ಮೀಸಲಾತಿಯಲ್ಲಿ ಇರುವಂತಹ ‌ ಅನುಕೂಲವನ್ನು ಜನರಿಗೆ ತಲುಪಿಸದೆ ವಂಚನೆ ಮಾಡುತ್ತಿದ್ದಾರೆ. ಈಬಗ್ಗೆ ಬರಗೂರು ರಾಮಚಂದ್ರಪ್ಪ ಅವರ ಜೊತೆಯೂ ಸಹ ಚರ್ಚೆ ನಡೆಸಿದ್ದು, ಅವರೂ ಸಹ ತುಮಕೂರಿಗೆ ಆಗಮಿಸಿ ಮೀಸಲಾತಿ ಬಗ್ಗೆ ಬೆಳಕು ಚೆಲ್ಲುವುದಾಗಿ ತಿಳಿಸಿದ್ದಾರೆ ಎಂದು ಮಾಜಿ ಶಾಸಕಕೆ.ಎನ್‌.ರಾಜಣ್ಣ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next