Advertisement

ಬಿಝಿ ಫೆಬ್ರವರಿ: ಸ್ಟಾರ್ಸ್ ಮೊದಲು ಹೊಸಬರ ಅಬ್ಬರ

04:39 PM Jan 15, 2021 | Team Udayavani |

ಚಿತ್ರರಂಗ ದೊಡ್ಡ ಮಟ್ಟದಲ್ಲೇ ತೆರೆದುಕೊಳ್ಳುವ ಲಕ್ಷಣಗಳು ಕಾಣುತ್ತಿವೆ. ಈಗಾಗಲೇ ಸ್ಟಾರ್‌ಗಳ ಸಿನಿಮಾ ಬಿಡುಗಡೆಯ ದಿನಾಂಕ ಅಧಿಕೃತವಾಗಿ ಘೋಷಣೆಯಾಗಿದೆ. ಜನವರಿ 29 ಅಥವಾ ಫೆಬ್ರವರಿ ಮೊದಲ ವಾರ ತೆರೆಕಾಣಲಿದೆ. ಮಾರ್ಚ್‌ 11ರಂದು ದರ್ಶನ್‌ ನಟನೆಯ “ರಾಬರ್ಟ್‌’, ಏಪ್ರಿಲ್‌ 1ರಂದು “ಯುವರತ್ನ’ ಹಾಗೂ ಏಪ್ರಿಲ್‌ 23ರಂದು “ಕೋಟಿಗೊಬ್ಬ-3′ ತೆರೆಗೆ ಬರಲಿದೆ. ಇದು ಮಾರ್ಚ್‌, ಏಪ್ರಿಲ್‌ ಕಥೆಯಾದರೆ, ಫೆಬ್ರವರಿಯದ್ದು ಮತ್ತೂಂದು ಕಥೆ ಇದೆ. ಅದು ಹೊಸಬರ ಹಾಗೂ ಇತರ ನಾಯಕ ನಟರ ಸಿನಿಹಬ್ಬ.

Advertisement

ಹೌದು, ಫೆಬ್ರವರಿಯಲ್ಲಿ ಸಾಕಷ್ಟು ಸಿನಿಮಾಗಳು ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿವೆ. ಕಳೆದ ವರ್ಷ ಫೆಬ್ರವರಿಯಲ್ಲಿ ಸಿನಿಟ್ರಾಫಿಕ್‌ ಜೋರಾಗಿತ್ತು. ಈ ವರ್ಷ ಅದು ಮತ್ತೆ ರಿಪೀಟ್‌ ಆಗುವ ಸಾಧ್ಯತೆ ಇದೆ. ಫೆಬ್ರವರಿಯಲ್ಲಿ ಪ್ರಜ್ವಲ್‌ ಅಭಿನಯದ “ಇನ್ಸ್‌ಪೆಕ್ಟರ್‌ ವಿಕ್ರಂ’, ಅಜೇಯ್‌ ರಾವ್‌ ನಟನೆಯ “ಕೃಷ್ಣ ಟಾಕೀಸ್‌’, “ಚಡ್ಡಿದೋಸ್ತ್’, “ಮಾಂಜ್ರಾ’, “ಮಂಗಳವಾರ ರಜಾದಿನ’, “ರಾಮಾರ್ಜುನ’ …. ಸೆನ್ಸಾರ್‌ ಆಗಿರುವ ಸಾಕಷ್ಟು ಸಿನಿಮಾಗಳು ಫೆಬ್ರವರಿಯಲ್ಲಿ ತೆರೆಗೆ ಬರುವ ಸಿದ್ಧತೆಯಲ್ಲಿವೆ.

ಫೆಬ್ರವರಿಯಲ್ಲೇ ಯಾಕೆ?

ಸಹಜವಾಗಿಯೇ ಒಂದು ಪ್ರಶ್ನೆ ಎದುರಾಗುತ್ತದೆ. ಅದೇನೆಂದರೆ ಸ್ಟಾರ್‌ಗಳ ಮಾರ್ಚ್‌, ಏಪ್ರಿಲ್‌ನಲ್ಲಿ ತೆರೆಕಾಣುವಾಗ, ಹೊಸಬರು ಹಾಗೂ ಇತರ ನಾಯಕ ನಟರ ಚಿತ್ರಗಳ್ಯಾಕೆ ಫೆಬ್ರವರಿ ಎಂದು ನೀವು ಕೇಳಬಹುದು. ಅದಕ್ಕೆ ಕಾರಣ ಮತ್ತದೇ ಸ್ಟಾರ್‌ ಸಿನಿಮಾಗಳು. ಸ್ಟಾರ್‌ ಸಿನಿಮಾಗಳ ನಿರ್ಮಾಪಕರು ಈಗಾಗಲೇ ಸಭೆ ನಡೆಸಿ ಮೂರು ವಾರಗಳ ಗ್ಯಾಪ್‌ನಲ್ಲಿ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಈ ಮೂಲಕ ಅವರಲ್ಲಿ ಸದ್ಯದ ಮಟ್ಟಿಗೆ ಯಾವುದೇ ಗೊಂದಲವಿಲ್ಲ. ಈಗ ಬಿಡುಗಡೆಗೆ ರೆಡಿಯಾಗಬೇಕಿರೋದು ಹೊಸಬರು. ಸ್ಟಾರ್‌ಗಳ ಸಿನಿಮಾಗಳು ಮಾರ್ಚ್‌ನಿಂದಲೇ ಬಹುಪಾಲು ಚಿತ್ರಮಂದಿರಗಳನ್ನು ಆವರಿಸಿಕೊಳ್ಳುವುದರಿಂದ, ಹೊಸಬರ ಹಾಗೂ ಇತರ ನಾಯಕ ನಟರ ಚಿತ್ರಗಳಿಗೆ ಚಿತ್ರಮಂದಿರಗಳ ಸಮಸ್ಯೆ ಎದುರಾಗಬಹುದು. ಜೊತೆಗೆ ದೊಡ್ಡ ಸಿನಿಮಾಗಳ ಎದುರು ಬಂದು ಕೈ ಸುಟ್ಟುಕೊಳ್ಳಲು ಯಾವ ನಿರ್ಮಾಪಕರು ತಯಾರಿಲ್ಲ. ಆ ಕಾರಣದಿಂದಲೇ ಫೆಬ್ರವರಿಯಲ್ಲಿ ರಿಲೀಸ್‌ ಮಾಡಲು ನಿರ್ಧರಿಸಿದ್ದಾರೆ

ಫೆಬ್ರವರಿಯಲ್ಲಿ ಇನ್ಸ್‌ಪೆಕ್ಟರ್‌ ವಿಕ್ರಂ ಪಕ್ಕಾ

Advertisement

ಪ್ರಜ್ವಲ್‌ ದೇವರಾಜ್‌ ನಟನೆಯ ‘ಇನ್ಸ್‌ಪೆಕ್ಟರ್‌ ವಿಕ್ರಂ ಫೆಬ್ರವರಿಯಲ್ಲಿ ತೆರೆಕಾಣೋದು ಬಹುತೇಕ ಅಂತಿಮವಾಗಿದೆ. ಈ ಮೂಲಕ ಹೊಸ ವರ್ಷದ ಆರಂಭದಲ್ಲೇ ಪ್ರಜ್ವಲ್‌ ಅಭಿಮಾನಿಗಳಿಗೆ ದರ್ಶನ ನೀಡಲಿದ್ದಾರೆ. ಇದೇ ಮೊದಲ ಬಾರಿಗೆ ಇನ್ಸ್‌ಪೆಕ್ಟರ್‌ ಪಾತ್ರದಲ್ಲಿ ಮಿಂಚಿರುವ ಪ್ರಜ್ವಲ್‌ ಜೋಡಿಯಾಗಿ “ಟಗರು ಭಾವನಾ ಸಾಥ್‌ ನೀಡಿದ್ದಾರೆ.

ಈ ಚಿತ್ರದಲ್ಲಿ ನಟ ದರ್ಶನ್‌ ಅತಿಥಿ ಪಾತ್ರದಲ್ಲಿ ಕಾಣಿಸಿ ಕೊಂಡಿ ದ್ದಾರೆ. ಈಗಾಗಲೇ ಡಬ್ಬಿಂಗ್‌ ಕೂಡ ಮುಗಿಸಿದ್ದಾರೆ. ಭಗತ್‌ ಸಿಂಗ್‌ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದು, ದರ್ಶನ್‌ ಅಭಿಮಾನಿ  ಗಳಲ್ಲೂ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಶ್ರೀನರಸಿಂಹ ನಿರ್ದೇಶನವಿ ರುವ ಈ ಚಿತ್ರ ವಿಖ್ಯಾತ್‌ ಪೊ›ಡಕ್ಷನ್ಸ್‌ ಬ್ಯಾನರ್‌ ಅಡಿಯಲ್ಲಿ ಎ.ಆರ್‌.ವಿಖ್ಯಾತ್‌ ನಿರ್ಮಿಸಿದ್ದಾರೆ. ಈಗಾಗಲೇ ಹಾಡುಗಳು ಹಿಟ್‌ಲಿಸ್ಟ್‌ ಸೇರಿವೆ. ಅನೂಪ್‌ ಸೀಳೀನ್‌ ಸಂಗೀತ ಚಿತ್ರಕ್ಕಿದೆ.

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next