“ಇಡೀ ಜಗತ್ತು ಇವತ್ತು ಸ್ತಬ್ಧವಾಗಿದೆ. ಎಲ್ಲರೂ ಕೊರೊನಾ ನಿಯಂತ್ರಣಕ್ಕೆ ತುಂಬಾಕಷ್ಟಪಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ನಾವುಕೂಡಕೊರೊನಾ ಹೋರಾಟಕ್ಕೆಕೈ ಜೋಡಿಸಬೇಕು. ನಮ್ಮಕೈಯಲ್ಲಿ ಬೇರೇನೂ ಮಾಡೋದಕ್ಕೆ ಸಾಧ್ಯವಾಗದಿದ್ರೂ ಪರವಾಗಿಲ್ಲ,ಕೊನೆಪಕ್ಷ ಲಾಕ್‌ಡೌನ್‌ನಲ್ಲಿ ಎಲ್ಲೂ ಹೊರಗೆ ಹೋಗದೆ ಮನೆಯಲ್ಲೇ ಇದ್ರೂ ಸಾಕು.ಕೊರೊನಾ ವಿರುದ್ದ ಹೋರಾಟಕ್ಕೆ ದೊಡ್ಡ ಸಹಕಾರಕೊಟ್ಟಂತಾಗುತ್ತದೆ…’ ಇದು ನಟಿ ಮಾನ್ವಿತಾಕಾಮತ್ ಮಾತು.
ಸದ್ಯ ಲಾಕ್‌ಡೌನ್ ಜಾರಿಯಾದಾಗಿನಿಂದಲೂ ಮಾನ್ವಿತಾಕಾಮತ್ ಮನೆಯಲ್ಲೇ ಲಾಕ್ ಆಗಿದ್ದಾರೆ. ಈ ಸಮಯದಲ್ಲಿ ಒಂದಷ್ಟು ಕ್ರಿಯಾಶೀಲ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮಾನ್ವಿತಾ, ಹೊಸ ಹೊಸ ಚಿಂತನೆಗೆ ತಮ್ಮನ್ನು ತೆರೆದುಕೊಳ್ಳುತ್ತಿದ್ದಾರಂತೆ.
ಈ ಬಗ್ಗೆ ಮಾತನಾಡುವ ಮಾನ್ವಿತಾ, “ಲಾಕ್ ಡೌನ್ ಮಾಡಿರುವುದೇ ನಾವು ಮನೆಯಲ್ಲಿ ಸೇಫ್ ಆಗಿರಲಿ ಅಂಥ. ಹಾಗಾಗಿ ಲಾಕ್‌ಡೌನ್ ಆಗಿರೋದ್ರಿಂದ ಸದ್ಯಕ್ಕೆ ಮನೆಯಲ್ಲೇ ಇದ್ದೀನಿ. ನನ್ನ ಪ್ರಕಾರ ಕೊರೊನಾ ಲಾಕ್ ಡೌನ್ ಅನ್ನೋದು, ನಮ್ಮ ಒಳಗಿನ ಶಕ್ತಿಯನ್ನು ತೋರಿಸಲು ಸಿಕ್ಕಿರುವಂಥ ಒಳ್ಳೆಯ ಸಮಯ. ಇಷ್ಟು ದಿನ ನಾವೆಲ್ಲರೂ ವೈಲೆಂಟ್ ಆಗಿದ್ದೆವು. ಯಾವತ್ತೂ ಸೈಲೆಂಟ್ ಆಗಿ ಪ್ರಕೃತಿ ಏನು ಹೇಳುತ್ತಿದೆ ಅನ್ನೋದನ್ನ ಕೇಳಿಸಿಕೊಂಡಿರಲಿಲ್ಲ. ಆದ್ರೆ ಇವತ್ತು ಪ್ರಕೃತಿಯೇ ನಮ್ಮನ್ನೆಲ್ಲ ಸೈಲೆಂಟ್ ಮಾಡಿ, ತಾನು ಏನು ಹೇಳಬೇಕೋ ಅದನ್ನ ಹೇಳ್ತಿದೆ. ಈಗಲಾದ್ರೂ ಅದನ್ನ ಕೇಳಿಸಿಕೊಂಡರೆ ಅದಕ್ಕಿಂತ ದೊಡ್ಡ ಪಾಠ ಬೇರೊಂದಿಲ್ಲ. ನಾವು ಉಸಿರಾಡುತ್ತಿದ್ದೇವೆ ಅಂದ್ರೆ ವಾಸ್ತವದಲ್ಲಿದ್ದೇವೆ, ಬದುಕಿದ್ದೇವೆ ಅಂಥ ಅರ್ಥ. ಆದ್ರೆ ಇವತ್ತು ಉಸಿರಾಡೋದಕ್ಕೇ ಪರದಾಡುತ್ತಿದ್ದೇವೆ. ಎಷ್ಟೋ ಜನ ಸಾಧು, ಸಂತರು, ಸಾಧಕರು, ಜ್ಞಾನಿಗಳು ಈ ಮಾತನ್ನ ಹೇಳುತ್ತಲೇ ಬಂದಿದ್ದರೂ, ನಾವ್ಯಾರು ಆ ಮಾತನ್ನಕಿವಿಗೆ ಹಾಕಿಕೊಳ್ಳಲೇ ಇಲ್ಲ. ಈಗ ಪ್ರಕೃತಿಯೇ ಅದನ್ನಕಲಿಸುತ್ತಿದೆ’ ಎನ್ನುತ್ತಾರೆ ಮಾನ್ವಿತಾ.
ಇನ್ನು ಲಾಕ್‌ಡೌನ್ ವೇಳೆಯಲ್ಲಿ “ಕುಕ್ಕಿಂಗ್‌ನಲ್ಲೇ ದಿನದ ಹೆಚ್ಚಿನ ಸಮಯ ಕಳೆಯುತ್ತಿದ್ದೇನೆ’ ಎನ್ನುವ ಮಾನ್ವಿತಾ, ಸಿಂಪಲ್ ಆಗಿ ಒಂದಷ್ಟು ಏನಾದ್ರೂ ಮಾಡೋದನ್ನಕಲಿಯುತ್ತಿದ್ದೇನೆ. “ಈ ಟೈಮ್‌ನಲ್ಲಿ ನನ್ನನ್ನು ನಾನು ಹೇಗೆ ಇನ್ನಷ್ಟು ಬೆಟರ್ ಆಗಿ ಮಾಡಿಕೊಳ್ಳಬಹುದು ಆ ಕೆಲಸಗಳನ್ನು ಮಾಡುತ್ತಿದ್ದೇನೆ. ಒಳ್ಳೆಯ ಬುಕ್ಸ್, ಸಿನಿಮಾ, ಧ್ಯಾನ, ಚಿಂತನೆ ನಮ್ಮನ್ನು ಪಾಸಿಟಿವ್ ಆಗಿಡುತ್ತದೆ’ ಎನ್ನುತ್ತಾರೆ.