ಇಲ್ಲಿಯವರೆಗೆ ಬೋಲ್ಡ್ ಆ್ಯಂಡ್ ಗ್ಲಾಮರಸ್ ಪಾತ್ರಗಳ ಮೂಲಕವೇ ಸ್ಯಾಂಡಲ್‌ವುಡ್ ಸಿನಿಪ್ರಿಯರಿಗೆ ಇಷ್ಟವಾಗಿದ್ದ ನಟಿ ಮಾನ್ವಿತಾ ಕಾಮತ್, ಈಗ ಪಕ್ಕಾ ಹಳ್ಳಿ ಹುಡುಗಿ ಗೆಟಪ್‌ನಲ್ಲಿ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಹೌದು, ಪಿ.ಸಿ ಶೇಖರ್ ನಿರ್ದೇಶನದ ಹೊಸಚಿತ್ರದಲ್ಲಿ ಮಾನ್ವಿತಾ ಕಾಮತ್ ಲೀಡ್ ರೋಲ್ ನಲ್ಲಿಕಾಣಿಸಿಕೊಳ್ಳುತ್ತಿದ್ದು, ಚಿತ್ರದಲ್ಲಿ ಮಾನ್ವಿತಾ ಹಳ್ಳಿಯ ರೈತ ಮನೆತನದ ಖಡಕ್ ಹುಡುಗಿಯ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.
ಈಗಾಗಲೇ ಈ ಚಿತ್ರದ ಪ್ರೀ-ಪ್ರೊಡಕ್ಷನ್‌ಕೆಲಸಗಳು ಭರದಿಂದ ನಡೆಯುತ್ತಿದ್ದು, ಚಿತ್ರದ ಟೈಟಲ್ ಇನ್ನಷ್ಟೇ ಅನೌನ್ಸ್ ಆಗಬೇಕಿದೆ. ಇನ್ನು ಹೆಸರಿಡದ ಈ ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಪಿ.ಸಿ ಶೇಖರ್, “ಇಲ್ಲಿಯವರೆಗೆ ಮಾನ್ವಿತಾ ಕಾಮತ್ ಕಾಣಿಸಿಕೊಂಡಿರುವ ಕ್ಯಾರೆಕ್ಟರ್ ಗಳಿಗಿಂತ ವಿಭಿನ್ನವಾದ ಕ್ಯಾರೆಕ್ಟರ್ ಈ ಸಿನಿಮಾದಲ್ಲಿದೆ. ಮಾನ್ವಿತಾ ಅವರದ್ದು ರೈತ ಮನೆತನದ ಹುಡಗಿಯ ಪಾತ್ರ. ಈಗಾಗಲೇ ಈ ಸಿನಿಮಾದ ಕಥೆಯನ್ನುಕೇಳಿ ಇಷ್ಟಪಟ್ಟಿರುವ ಮಾನ್ವಿತಾ, ತುಂಬ ಖುಷಿಯಿಂದ ಈ ಪಾತ್ರ ಮಾಡಲು ಒಪ್ಪಿಕೊಂಡಿದ್ದಾರೆ. ಈಗಾಗಲೇ ಸ್ಕ್ರಿಪ್ಟ್ ಮತ್ತು ಪ್ರೀ-ಪ್ರೊಡಕ್ಷನ್ಸ್‌ಕೆಲಸಗಳು ಫೈನಲ್ ಹಂತದಲ್ಲಿದ್ದು, ಸದ್ಯ ಹೀರೋಯಿನ್ ಆಗಿ ಮಾನ್ವಿತಾ ಕಾಮತ್ ಆಯ್ಕೆ ಮಾತ್ರ ಆಗಿದೆ.
ಇದನ್ನೂ ಓದಿ:ಕಂದನ ಜೊತೆಗಿನ ಮುದ್ದಾದ ಫೋಟೊ ಹಂಚಿಕೊಂಡ ನಟಿ ಮೇಘನಾ ರಾಜ್
ಸಿನಿಮಾದ ಇತರ ಕ್ಯಾರೆಕ್ಟರ್‌ಗಳಿಗೆ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದೆ. ಸಿನಿಮಾದ ಬಹುತೇಕ ಕ್ಯಾರೆಕ್ಟರ್‌ಗಳಿಗೆ ಆದಷ್ಟು ಹೊಸ ಕಲಾವಿದರ ಹುಡುಕಾಟದಲ್ಲಿದ್ದು, ಶೀಘ್ರದಲ್ಲಿಯೇ ಟೈಟಲ್ ಅನೌನ್ಸ್ ಮಾಡಲಿದ್ದೇವೆ’ ಎಂದಿದ್ದಾರೆ.
ಅಂದಹಾಗೆ, ಇದೊಂದು ರೊಮ್ಯಾಂಟಿಕ್-ಥ್ರಿಲ್ಲರ್ ಶೈಲಿಯ ಚಿತ್ರವಾಗಿದ್ದು, ಮಾನ್ವಿತಾ ಸಮಾಜದ ಅವ್ಯವಸ್ಥೆಯ ವಿರುದ್ದ ಹೋರಾಡುತ್ತಾರಂತೆ. “ನಾದಕಿರಣ್ ಪಿಕ್ಚರ್’ ಬ್ಯಾನರ್‌ನಲ್ಲಿ ಎಸ್. ಆರ್ ವೆಂಕಟೇಶ್ ಗೌಡ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶಕ್ತಿ ಶೇಖರ್ ಛಾಯಾಗ್ರಹಣವಿದೆ. ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯಾ ಸಂಗೀತವಿದೆ. ಚಿತ್ರಕ್ಕೆ ಸಚಿನ್ ಜಗದೀಶ್ವರ್ ಸಂಭಾಷಣೆ, ರಾಜಶೇಖರ್ ಕಲಾ ನಿರ್ದೇಶನವಿದೆ. ಇದೇ ಆಗಸ್ಟ್ ಎರಡನೇ ವಾರದ ಬಳಿಕ ಈ ಸಿನಿಮಾದ ಶೂಟಿಂಗ್ ಶುರುವಾಗಲಿದ್ದು, ಬೆಂಗಳೂರು, ಮಂಡ್ಯ ಸುತ್ತಮುತ್ತ ಶೂಟಿಂಗ್ ನಡೆಸುವ ಯೋಚನೆಯಲ್ಲಿದೆ ಚಿತ್ರತಂಡ.