Advertisement

Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು

06:37 PM Dec 28, 2024 | Team Udayavani |

ಮಾನ್ವಿ: ತುಂಗಭದ್ರ ಜಲಾಶಯದಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿರುವುದರಿಂದ ಜಲಾಶಯದಲ್ಲಿನ ಭಾರಿ ಗಾತ್ರದ ಮೀನುಗಳು ನದಿಯಲ್ಲಿ ಹರಿದು ಬಂದಿದ್ದು, ತಾಲೂಕಿನ ರಾಜಲಬಂಡ ಅಣೆಕಟ್ಟೆಯಲ್ಲಿ ದೈತ್ಯಾಕಾರದ ಮೀನುಗಳು ಬಕೆಗೆ ಬಿಳುತ್ತಿವೆ.

Advertisement

ಮೀನುಗಾರರಿಗೆ 20 ಕೆಜಿ ತೂಕ ಇರುವ ದೈತ್ಯಕಾರದ ಕಾಟ್ಲ ಮೀನು ಇದುವರೆಗೂ ಸಿಕ್ಕ ಬಾರಿ ಮೀನುಗಳಲ್ಲಿ ಒಂದು. ರೌ, ಬಾಳೆ, ಜಿಲೇಬಿ ಮೀನುಗಳು ಕನಿಷ್ಟ 5ರಿಂದ 7 ಕೆಜಿ ಇದ್ದು ಮೀನು ಪ್ರಿಯರಿಗೆ ಪ್ರಮುಖ ಆಕರ್ಷಣೆ ಯಾಗಿವೆ.

ಹವ್ಯಾಸಿ ಮೀನುಗಾರ ರಾಜ ಮಹಮ್ಮದ್ ಮಾತನಾಡಿ ತುಂಗಭದ್ರ ನದಿಯಲ್ಲಿ ನಾವು ಮೀನು ಹಿಡಿಯುವುದಕ್ಕೆ ಗಾಳ ಹಾಕಿದಾಗ ಸಣ್ಣ ಗಾತ್ರದ ಹಾಗೂ 1 ಕೆಜಿ ಇರುವ ಮೀನುಗಳು ಮಾತ್ರ ದೊರೆಯುತ್ತಿದ್ದವು . ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ತುಂಗಭದ್ರ ನದಿ ಸಂಪೂರ್ಣವಾಗಿ ಬತ್ತಿ ಹೋಗುತ್ತಿದ್ದರಿಂದ ಈ ಸಮಯದಲ್ಲಿ ನಮಗೆ ಮೀನುಗಳು ಸಿಗುತ್ತಿರಲಿಲ್ಲ. ಅದರೆ ಈ ಬಾರಿ ಅಣೆಕಟೆಯ ಗೇಟ್ ಮುರಿದಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ನದಿಗೆ ಜಲಾಶಯದಿಂದ ಹರಿದು ಬಂದಿದ್ದು ಅದರೊಟ್ಟಿಗೆ ಭಾರಿ ಗಾತ್ರದ ಮೀನುಗಳು ಕೂಡ ಬಂದಿವೆ. ಅಣೆಕಟ್ಟೆಯಲ್ಲಿ ಗಾಳ ಹಾಕಿದಾಗ ಭಾರಿ ಗಾತ್ರದ ಮೀನುಗಳು ಬೀಳುತ್ತಿವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next