Advertisement

ಮಂತ್ರಾಲಯ ಶ್ರೀ ಅದ್ಧೂರಿ ಪುರಪ್ರವೇಶ

10:30 AM Dec 12, 2017 | |

ವಿಜಯಪುರ: ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥರು ಪೀಠಾಧಿಪತಿಗಳಾದ ಬಳಿಕ ಪ್ರಥಮ ಬಾರಿಗೆ ಮಹಾನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಶ್ರೀಗಳನ್ನು ಶೋಭಾಯಾತ್ರೆಯೊಂದಿಗೆ ಅದ್ಧೂರಿ ಸ್ವಾಗತ ಕೋರಲಾಯಿತು.

Advertisement

ಸೋಮವಾರ ಸಂಜೆ ದಿವಟಗೇರಿ ಗಲ್ಲಿಯಲ್ಲಿರುವ ರಾಘವೇಂದ್ರಸ್ವಾಮಿ ಮಠದಿಂದ ಆರಂಭಗೊಂಡ ಶೋಭಾಯಾತ್ರೆಯಲ್ಲಿ ಉಡುಪಿಯ ವಾದ್ಯ ಮೇಳ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡ, ವಾದ್ಯಗಳು, ಮಹಿಳೆಯರ ಭಜನೆಗಳೊಂದಿಗೆ ಸುಭುದೇಂದ್ರ ತೀರ್ಥರನ್ನು ಗಜರಾಜನ ಅಂಬಾರಿ ಮೇಲೆ ಮೆರವಣಿಗೆ ಮೂಲಕ ರಾಯರ ಭಕ್ತರು ಅದ್ಧೂರಿಯಾಗಿ ಸ್ವಾಗತಿಸಿದರು.

ಮೆರವಣಿಗೆಯಲ್ಲಿ ವಿವಿಧ ಪುಷ್ಪಗಳಿಂದ ಸಾಲಂಕೃತ ಒಂದು ರಥದಲ್ಲಿ ಪ್ರಾಣದೇವರು, ಮತ್ತೂಂದು ರಥದಲ್ಲಿ ಪವಿತ್ರ ವೇದಗ್ರಂಥಗಳ ಪಾರಾಯಣ ನಡೆಯುತ್ತಿತ್ತು. ದಾರಿಯುದ್ದಕ್ಕೂ ಅಸಂಖ್ಯಾತ ಭಕ್ತ ಸಮೂಹ ಶ್ರೀಗಳಿಗೆ ಭಕ್ತಿಯಿಂದ ನಮಿಸಿದರು. 

ನಗರದ ದಿವಟಗೇರಿಯ ರಾಘವೇಂದ್ರ ಮಠದ ಆವರಣದಿಂದ ಪ್ರಾರಂಭಗೊಂಡ ಶೋಭಾಯಾತ್ರೆ ಸ್ಟೇಷನ್‌ ರಸ್ತೆ, ಬಸವೇಶ್ವರ ವೃತ್ತ, ಡಾ| ಬಿ.ಆರ್‌.ಅಂಬೇಡ್ಕರ ವೃತ್ತ, ಮಹಾತ್ಮಾ ಗಾಂಧೀಜಿ ವೃತ್ತ, ಛತ್ರಪತಿ ಶಿವಾಜಿ ವೃತ್ತ ಸೇರಿದಂತೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಉಪಲಿ ಬುರುಜ್‌ ಬಳಿ ಇರುವ ಬಿಡಿಈ ಶಿಕ್ಷಣ ಸಂಸ್ಥೆಗೆ ತಲುಪಿತು. 

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಹಿರಿಯ ಮುಖಂಡ ವಿಜುಗೌಡ ಪಾಟೀಲ, ಡಾ| ಆರ್‌.ಜಿ.ಮಂಗಲಗಿ, ಅಶೋಕ ಕಾಳಗಿ, ಗೋಪಾಲ ನಾಯಕ, ಮೋಹನ ಕೌತಾಳ, ಕೃಷ್ಣ ಗುನ್ನಾಳಕರ, ಶ್ರೀಕೃಷ್ಣ ಪಡಗಾನೂರ, ವಿಜಯ ಜೋಶಿ ಇತರರು ಮೆರವಣಿಗೆಯ ನೇತೃತ್ವ ವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next