Advertisement

‘19.20.21’ಇದು ಮಂಸೋರೆ ಹೊಸ ಸಿನಿಮಾ

11:20 AM Jan 20, 2022 | Team Udayavani |

ನಿರ್ದೇಶಕ ಮಂಸೋರೆ “ಆ್ಯಕ್ಟ್ 1978′ ಚಿತ್ರದ ಬಳಿಕ “ಅಬ್ಬಕ್ಕ’ ಸಿನಿಮಾ ಮಾಡುತ್ತಾರೆಂದು ಸುದ್ದಿಯಾಗಿತ್ತು. ಆದರೆ, ಈಗ ಮಂಸೋರೆ ಸದ್ಯಕ್ಕೆ “ಅಬ್ಬಕ್ಕ’ ಸಿನಿಮಾ ಮಾಡುತ್ತಿಲ್ಲ. ಬದಲಾಗಿ ಹೊಸ ಸಿನಿಮಾವೊಂದನ್ನು ಅನೌನ್ಸ್‌ ಮಾಡಿದ್ದಾರೆ.

Advertisement

ಅದು “19.20.21′. ಹೀಗೊಂದು ಸಿನಿಮಾವನ್ನು ಮಂಸೋರೆ ಅನೌನ್ಸ್‌ ಮಾಡಿದ್ದಾರೆ. ಈ ಟೈಟಲ್‌ನ ಹಿಂದೆ ಒಂದು ದೀರ್ಘ‌ವಾದ ಕಥೆ ಇದೆಯಂತೆ. ತಮ್ಮ ಹೊಸ ಸಿನಿಮಾ ಬಗ್ಗೆ ಹೇಳಿಕೊಂಡಿರುವ ಮಂಸೋರೆ, “ಇದು ಕನಸಲ್ಲ, ಕತೆಯಲ್ಲ, ಸತ್ಯ ಘಟನೆ ಆಧಾರಿತ. ಬಹಳ ಹಿಂದೆಯೇ ಸಿನಿಮಾ ಮಾಡಬೇಕು ಅಂದುಕೊಂಡಿದ್ದ ಒಂದು ಘಟನೆಯು ದೃಶ್ಯರೂಪ ಪಡೆದುಕೊಳ್ಳಲು ಈಗ ಕಾಲ ಕೂಡಿಬಂದಿದೆ. ಈ ವರ್ಷವೇ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಆಶಯದೊಂದಿಗೆ, ಅತಿ ಶೀಘ್ರದಲ್ಲೇ ಚಿತ್ರೀಕರಣಕ್ಕೆ ಹೋಗುವ ಸಿದ್ಧತೆಯಲ್ಲಿದ್ದೇವೆ. ಹತ್ತೂಂಬತ್ತು, ಇಪ್ಪತ್ತು, ಇಪ್ಪತ್ತೂಂದು… ಎಲ್ಲರ ಬದುಕಿಗೆ ಬಹಳ ಮುಖ್ಯವಾದ ಸಂಖ್ಯೆಗಳು. ಅದು ಏನು? ಹೇಗೆ? ಎಂಬುವ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳುವ ಕುತೂಹಲಕ್ಕೆ ಉತ್ತರ ತೆರೆಮೇಲೆ ಸಿಗಲಿದೆ. ಸಿನಿಮಾದ ಪಾತ್ರವರ್ಗ ಮತ್ತು ತಾಂತ್ರಿಕ ವರ್ಗದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ’ ಎಂದಿದ್ದಾರೆ.

ಇದನ್ನೂ ಓದಿ:ವಿಜಯ್ ಬರ್ತ್‌ಡೇ: ಹುಟ್ಟುಹಬ್ಬ ಆಚರಿಸುತ್ತಿಲ್ಲ, ಮನೆ ಬಳಿ ಬರಬೇಡಿ ಎಂದ ನಟ

ಇನ್ನು, “ಅಬ್ಬಕ್ಕ’ ಚಿತ್ರದ ಬಗ್ಗೆ ಮಾತನಾಡುವ ಮಂಸೋರೆ, “ಅಬ್ಬಕ್ಕ ಸಿನಿಮಾ ಮಾಡುವ ಯೋಜನೆಯನ್ನು ಕೊರೊನಾ ಕಾಲದ ಅನಿಶ್ಚಿತತೆಗಳ ಕಾರಣದಿಂದ ತಾತ್ಕಾಲಿಕವಾಗಿ ಮುಂದೂಡಿದ್ದೇವೆ. ಮುಂದೆ ಸಮಯ ಕೈಗೂಡಿ ಬಂದಾಗ ಖಂಡಿತ “ಅಬ್ಬಕ್ಕ’ ತೆರೆ ಮೇಲೆ ತರುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇನೆ’ ಎನ್ನುವುದು ಮಂಸೋರೆ ಮಾತು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next