Advertisement
ಸಾಮಾನ್ಯವಾಗಿ ಕರಾವಳಿ, ಮಲೆನಾಡು ಭಾಗದಲ್ಲಿ ಮಳೆಯ ತೀವ್ರತೆ ಜಾಸ್ತಿ. ಸದ್ಯ ಉಡುಪಿ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತ್ಯಧಿಕ ಅಂದರೆ 4,022 ಮಿ.ಮೀ. ವಾಡಿಕೆ ಮಳೆ ಪ್ರಮಾಣವನ್ನು ಹವಾಮಾನ ಇಲಾಖೆ ನಿರ್ಧರಿಸಿದೆ. ಅಂತೆಯೇ ಉಡುಪಿಯಲ್ಲಿ 3,521 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ 3,444 ಮಿ.ಮೀ. ಮಳೆಯಾಗಿತ್ತು.
Related Articles
Advertisement
ಎಲ್ಲೆಲ್ಲಿ ಎಷ್ಟು ಮಳೆ?ಜೂನ್ 1ರಿಂದ ಆ. 27ರ ವರೆಗೆ ಕರಾವಳಿಯಲ್ಲಿ ವಾಡಿಕೆಯಂತೆ 2,733 ಮಿ.ಮೀ. ಮಳೆ ಸುರಿಯಬೇಕು. ಸದ್ಯ 2,683 ಮಿ.ಮೀ. ಮಳೆಯಾಗಿ ಶೇ. 2ರಷ್ಟು ಕಡಿಮೆ ಇದೆ. ದ.ಕ.ದಲ್ಲಿ 2,982 ಮಿ.ಮೀ. ವಾಡಿಕೆ ಮಳೆಯಲ್ಲಿ 3,086 ಮಿ.ಮೀ. ಮಳೆಯಾಗಿ ಶೇ. 3ರಷ್ಟು ಮಳೆ ಪ್ರಮಾಣ ಹೆಚ್ಚಾಗಿದೆ. ಉಡುಪಿ ಜಿಲ್ಲೆಯಲ್ಲಿ 4,022 ಮಿ.ಮೀ. ವಾಡಿಕೆ ಮಳೆ ಪೈಕಿ 3,521 ಮಿ.ಮೀ. ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 2,339 ಮಿ.ಮೀ. ವಾಡಿಕೆ ಮಳೆಯಲ್ಲಿ 2,196 ಮಿ.ಮೀ. ಮಳೆಯಾಗಿ ಶೇ. 6ರಷ್ಟು ಮಳೆ ಕೊರತೆ ಇದೆ. ಕರಾವಳಿಯಲ್ಲಿ ಕಳೆದ ವರ್ಷ ಶೇ. 13ರಷ್ಟು ಮಳೆ ಕಡಿಮೆಯಾಗಿತ್ತು. ನೈಋತ್ಯ ಮಾನ್ಸೂನ್ ಅವಧಿ ಪೂರ್ಣಗೊಳ್ಳಲು ಇನ್ನೂ ಒಂದು ತಿಂಗಳು ಬಾಕಿ ಇರುವುದರಿಂದ ಅಷ್ಟರಲ್ಲಿ ವಾಡಿಕೆಯ ಗುರಿ ತಲುಪುವ ನಿರೀಕ್ಷೆ ಇದೆ.
– ಸುನಿಲ್ ಗವಾಸ್ಕರ್, ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ