Advertisement

ಖೇಲ್‌ರತ್ನಕ್ಕೆ ಮನ್‌ಪ್ರೀತ್‌; ನ. 13ಕ್ಕೆ ಪ್ರಶಸ್ತಿ ಪ್ರದಾನ

11:58 PM Nov 02, 2021 | Team Udayavani |

ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ತಂದಿತ್ತ ಹಾಕಿ ತಂಡದ ನಾಯಕ ಮನ್‌ಪ್ರೀತ್‌ ಸಿಂಗ್‌ ಹೆಸರನ್ನು ಮೇಜರ್‌ ಧ್ಯಾನ್‌ಚಂದ್‌ ಖೇಲ್‌ರತ್ನ ಪ್ರಶಸ್ತಿ ಯಾದಿಗೆ ಸೇರಿಸಲಾಗಿದೆ. ಇದರೊಂದಿಗೆ ಈ ಪ್ರತಿಷ್ಠಿತ ಪದಕಕ್ಕೆ ಭಾಜನರಾಗುವ ಕ್ರೀಡಾಪಟುಗಳ ಸಂಖ್ಯೆ 12ಕ್ಕೆ ಏರಿದೆ.

Advertisement

ಮೊದಲು ಮನ್‌ಪ್ರೀತ್‌ ಹೆಸರನ್ನು ಅರ್ಜುನ ಪ್ರಶಸ್ತಿಗೆ ಸೂಚಿಸಲಾಗಿತ್ತು. ಇದೀಗ ಖೇಲ್‌ರತ್ನಕ್ಕೆ ಸೇರ್ಪಡೆಗೊಳಿಸು ವುದರೊಂದಿಗೆ ಈ ಯಾದಿಯಲ್ಲಿ ಕಾಣಿಸಿಕೊಂಡ ಹಾಕಿಪಟುಗಳ ಸಂಖ್ಯೆ ಎರಡಕ್ಕೆ ಏರಿತು. ಮತ್ತೋರ್ವ ಆಟಗಾರ ಗೋಲ್‌ ಕೀಪರ್‌ ಪಿ.ಆರ್‌. ಶ್ರೀಜೇಶ್‌. 35 ಮಂದಿ ಕ್ರೀಡಾಪಟುಗಳು ಅರ್ಜುನ ಪ್ರಶಸ್ತಿಗೆ ಭಾಜನರಾಗಲಿದ್ದಾರೆ.ನ. 13ರಂದು ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಇದನ್ನೂ ಓದಿ:ಟಿ20 ವಿಶ್ವಕಪ್‌: ಅಜೇಯ ಪಾಕಿಸ್ಥಾನ ಸೆಮಿಫೈನಲಿಗೆ

ಖೇಲ್‌ರತ್ನಗಳು
ನೀರಜ್‌ ಚೋಪ್ರಾ (ಆ್ಯತ್ಲೆಟಿಕ್ಸ್‌), ರವಿ ದಹಿಯಾ (ಕುಸ್ತಿ), ಲವ್ಲಿನಾ ಬೊರ್ಗೊಹೇನ್‌ (ಬಾಕ್ಸಿಂಗ್‌), ಪಿ.ಆರ್‌. ಶ್ರೀಜೇಶ್‌ (ಹಾಕಿ), ಮಿಥಾಲಿ ರಾಜ್‌ (ಕ್ರಿಕೆಟ್‌), ಸುನೀಲ್‌ ಚೆಟ್ರಿ (ಫ‌ುಟ್‌ಬಾಲ್‌), ಅವನಿ ಲೇಖರಾ (ಶೂಟಿಂಗ್‌), ಮನೀಷ್‌ ನರ್ವಾಲ್‌ (ಶೂಟಿಂಗ್‌), ಸುಮಿತ್‌ ಅಂಟಿಲ್‌ (ಆ್ಯತ್ಲೆಟಿಕ್ಸ್‌), ಪ್ರಮೋದ್‌ ಭಗತ್‌ (ಬ್ಯಾಡ್ಮಿಂಟನ್‌), ಕೃಷ್ಣ ನಗರ್‌ (ಬ್ಯಾಡ್ಮಿಂಟನ್‌). ಮನ್‌ಪ್ರೀತ್‌ ಸಿಂಗ್‌ (ಹಾಕಿ).

Advertisement

Udayavani is now on Telegram. Click here to join our channel and stay updated with the latest news.

Next