Advertisement

ರಾಜಕೀಯ ಹಿತಾಸಕ್ತಿಗಾಗಿ ರಾಷ್ಟ್ರೀಯ ಪಕ್ಷಗಳು ಗೋವಾದ ಜನತೆಗೆ ದ್ರೋಹ ಬಗೆಯುತ್ತಿವೆ

04:41 PM Jan 05, 2023 | Team Udayavani |

ಪಣಜಿ: ರಾಷ್ಟ್ರೀಯ ಪಕ್ಷಗಳು ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಗೋವಾದ ಜನತೆಗೆ ಪದೇ ಪದೇ ದ್ರೋಹ ಬಗೆಯುತ್ತಿವೆ. ಬಿಜೆಪಿ, ಕಾಂಗ್ರೆಸ್ ಮತ್ತು ಎಎಪಿ ಎಲ್ಲಾ ರಾಷ್ಟ್ರೀಯ ಪಕ್ಷಗಳು ಕರ್ನಾಟಕದಲ್ಲಿ ಒಂದೇ ಭಾಷೆಯನ್ನು ಮಾತನಾಡುತ್ತವೆ ಮತ್ತು ನಂತರ ಗೋವಾಕ್ಕೆ ಬಂದು ಸುಳ್ಳು ಹೇಳಿಕೆಗಳನ್ನು ನೀಡುತ್ತವೆ. ಈ ರಾಷ್ಟ್ರೀಯ ಪಕ್ಷಗಳಿಗೆ ಗೋಮಾಂತಕೀಯರು ತಕ್ಕ ಪಾಠ ಕಲಿಸುವ ಸಮಯ ಬಂದಿದೆ ಎಂದು ರೆವೊಲ್ಯೂಶನ್ ಗೋವನ್ಸ್ ಪಕ್ಷದ ನಾಯಕ ಮನೋಜ್ ಪರಬ್ ಆರೋಪಿಸಿದ್ದಾರೆ.

Advertisement

ಪಣಜಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಸಂತೆ ಅಂದ್ರೆ ಶಾಸಕ ವೀರೇಶ್ ಬೋರ್ಕರ್ ಉಪಸ್ಥಿತರಿದ್ದರು. ಆಡಳಿತಾರೂಢ ಬಿಜೆಪಿ ಮಹದಾಯಿ ರಕ್ಷಣೆಯಲ್ಲಿ ಎಡವಿದೆ. ಬಿಜೆಪಿಯು ಡಬಲ್ ಇಂಜಿನ್ ಹೆಸರಿನಲ್ಲಿ ಗೋಮಾಂತಕಿಯರಿಗೆ ಮೋಸ ಮಾಡಿದ್ದಾರೆ.

ಡಬಲ್ ಇಂಜಿನ್ ದಯನೀಯವಾಗಿ ವಿಫಲವಾಗಿದೆ ಮತ್ತು ಕರ್ನಾಟಕದ ರಾಜಕೀಯ ಲಾಭಕ್ಕಾಗಿ ಮಹದಾಯಿಯನ್ನು ಮಾರಾಟ ಮಾಡಲಾಗಿದೆ. ಅಲ್ಲದೆ, ಇನ್ನೊಂದೆಡೆ ಕಾಂಗ್ರೆಸ್‍ನ ರಾಷ್ಟ್ರೀಯ ನಾಯಕರು ಕರ್ನಾಟಕಕ್ಕೆ ಹೋಗಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 3000 ಕೋಟಿ ರೂಪಾಯಿ ನೀಡಿ ಮಹದಾಯಿ ದಿಕ್ಕು ತಪ್ಪಿಸುವುದಾಗಿ ಘೋಷಿಸಿದ್ದಾರೆ. ಗೋವಾ ರಾಜ್ಯ ವಿರೋಧ ಪಕ್ಷದ ನಾಯಕ ಯೂರಿ ಅಲೆಮಾವ್ ಅವರು ಪತ್ರಿಕಾಗೋಷ್ಠಿ ನಡೆಸಿ ಈ ಕುರಿತು  ವಿವರಣೆ ನೀಡಬೇಕು ಎಂದು ಮನೋಜ್ ಪರಬ್ ಆಘ್ರಹಿಸಿದರು.

ಇದನ್ನೂ ಓದಿ: ಜ. 22ರಿಂದ26 : ಅತ್ತೂರು ಸಂತ ಲಾರೆನ್ಸ್‌ ಬಸಿಲಿಕ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ

Advertisement

Udayavani is now on Telegram. Click here to join our channel and stay updated with the latest news.

Next