Advertisement

ಮಹದಾಯಿ ಗೋವಾದ ಜೀವಾಳ…ಕೇಂದ್ರ ಮಾತ್ರ ಕರ್ನಾಟಕದತ್ತ ಒಲವು ತೋರುತ್ತಿದೆ

04:59 PM Jan 14, 2023 | Team Udayavani |

ಪಣಜಿ: ಸದ್ಯ ಗೋವಾದಲ್ಲಿ ಮಹದಾಯಿ ಸಮಸ್ಯೆ ಹೊತ್ತಿ ಉರಿಯುತ್ತಿದೆ. ಪ್ರತಿಪಕ್ಷಗಳು ನಿರಂತರವಾಗಿ ಸರ್ಕಾರವನ್ನು ಸುತ್ತುವರಿಯಲು ಪ್ರಯತ್ನಿಸುತ್ತಿವೆ. ಈ ಮೂಲಕ ರೆವಲ್ಯೂಷನ್  ಗೋನ್ಸ್ ಪಾರ್ಟಿಯ ನಾಯಕ ಮನೋಜ್ ಪರಬ್ ಅವರು ಗೋವಾ ಸರ್ಕಾರ ಮತ್ತು ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ರವರ ವಿರುದ್ಧ ಠೀಕಾ ಪ್ರಹಾರ ನಡೆಸಿದ್ದಾರೆ. ಗೋವಾ ಸರ್ಕಾರದ ಸಚಿವರ ನಿಯೋಗದೊಂದಿಗೆ ಮುಖ್ಯಮಂತ್ರಿ ಪ್ರಮೋದ ಸಾವಂತ್ ನೇತೃತ್ವದಲ್ಲಿ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಆದರೆ, ಈ ಸಭೆಯನ್ನು ಕೇವಲ 15 ನಿಮಿಷಗಳಲ್ಲಿ  ಮುಕ್ತಾಯಗೊಳಿಸಲಾಗಿದೆ. ಕೇಂದ್ರವು ಗೋವಾದ ಬಿಜೆಪಿ ನಾಯಕರನ್ನು ಮಹದಾಯಿ ವಿಷಯಕ್ಕೆ ಕೇವಲ 15 ನಿಮಿಷ ಮಾತ್ರ ಕಾಲಾವಕಾಶ ನೀಡಿದೆ ಎಂದು  ರೆವಲ್ಯೂಷನ್  ಗೋನ್ಸ್ ಪಾರ್ಟಿಯ ನಾಯಕ ಮನೋಜ್ ಪರಬ್ ಆರೋಪಿಸಿದ್ದಾರೆ.

Advertisement

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು- ಗೋವಾದ ಮಹದಾಯಿ ಸಮಸ್ಯೆಯು ಜೀವನ್ಮರಣದ ಪ್ರಶ್ನೆಯನ್ನು ಹುಟ್ಟುಹಾಕಿದೆ. ಮಹದಾಯಿ ಗೋವಾದ ಜೀವಾಳವಾಗಿದ್ದು, ಕೇಂದ್ರವು ಕರ್ನಾಟಕದತ್ತ ಒಲವು ತೋರುತ್ತಿದೆ. ಗೋವಾದ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಕೇಂದ್ರಕ್ಕೆ ತನ್ನ ಪರವಾಗಿ ವಿವರಿಸಲು ವಿಫಲವಾಗಿದೆ ಮತ್ತು ದೆಹಲಿ ದರ್ಬಾರಿಯಲ್ಲಿ ನಡೆದ ಸಭೆಯಲ್ಲಿ ಕೇವಲ 15-20 ನಿಮಿಷಗಳಲ್ಲಿ ಸಭೆ ನಡೆಸುವ ಮೂಲಕ ಕೇಂದ್ರವು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನು ಕೇಂದ್ರ ಸರ್ಕಾರ ವಿಫಲಗೊಳಿಸಿದೆ ಎಂದು ಮನೋಜ್ ಪರಬ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಹದಾಯಿ ಯೋಜನೆಗೆ ಗೋವಾದ ಜನತೆ ವಿರೋಧ ವ್ಯಕ್ತಪಡಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಗೋವಾದ ಜನತೆಯನ್ನು ಲಘುವಾಗಿ ಪರಿಗಣಿಸಿದೆ. ಇದರಿಂದ ಕರ್ನಾಟಕಕ್ಕೆ ಮಣೆ ಹಾಕುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ. ಕೇಂದ್ರವು ಕರ್ನಾಟಕಕ್ಕೆ  ನೀಡಿರುವ ಡಿಪಿಆರ್ ಹಿಂಪಡೆಯುವಂತೆ ಗೋವಾ ಮುಖ್ಯಮಂತ್ರಿ ಮುಖ್ಯಮಂತ್ರಿ ಒತ್ತಾಯಿಸಿದ್ದಾರೆ. ಆದರೆ, ದೆಹಲಿಯಲ್ಲಿ ನಡೆದ ಸಭೆಯ ನಂತರ ಈ ಡಿಪಿಆರ್ ಹಿಂಪಡೆದಿಲ್ಲ. ಇದನ್ನೇ ಕೇಂದ್ರ ಗೋವಾ ಮತ್ತು ಗೋವಾ ಸರ್ಕಾರವನ್ನು ತನ್ನ ಬಿಗಿ ಮುಷ್ಠಿಯಲ್ಲಿ ಹಿಡಿದಿದೆ. ಹೀಗಾಗಬಾರದು ಎಂದಾದರೆ ಈಗ ಗೋವಾದ ಜನತೆ  ಒಗ್ಗೂಡಿ ಕೇಂದ್ರದಲ್ಲಿರುವ ಬಿಜೆಪಿ ಸರಕಾರಕ್ಕೆ ತಮ್ಮ ಶಕ್ತಿ ತೋರಿಸಬೇಕಾಗಿದೆ. ಕ್ರಾಂತಿಕಾರಿ ಗೋವನ್  ಜನಾಂದೋಲನವನ್ನು ಹುಟ್ಟುಹಾಕಿದೆ, ಅದನ್ನು ಮುಂದಕ್ಕೆ ಕೊಂಡೊಯ್ಯಲು ಜನರು ಮುಂದಾಗಬೇಕೆಂದು ಮನೋಜನ್ ಪರಬ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ : ವಿಮಾನದಲ್ಲಿ ಕಾಣೆಯಾಗಿದ್ದ ಅಮೆರಿಕದ ಮಹಿಳೆಯ ಸೂಟ್ ಕೇಸ್ 4 ವರ್ಷದ ಬಳಿಕ ಪತ್ತೆ

Advertisement

Udayavani is now on Telegram. Click here to join our channel and stay updated with the latest news.

Next